ಗದಗ, 24 ಮೇ (ಹಿ.ಸ.)
ಆ್ಯಂಕರ್:- ನೂರಾರು ವರ್ಷಗಳಿಂದ ಜಗದ್ಗರು ತೋಂಟದಾರ್ಯ ಮಠದ ರಥೋತ್ಸವಸಾಗಿ ಬಂದಿದೆ. ರಥೋತ್ಸವದ ದಿನದವರಗೆ ಆ ರಸ್ಥೆಯನ್ನು ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟಿರುತ್ತೇವೆ.
ಲಘುರಥೋತ್ಸವ ಆದ ಮಾರನೇ ದಿನದಿಂದ ಅಂದರೆ 40 ದಿನಗಳ ವರೆಗೆ ಮಾತ್ರ ಮನರಂಜನೆಯ ವಸ್ತುಗಳನ್ನು, ಮಕ್ಕಳ ಆಟಕೀಯ ಸಾಮಾನುಗಳನ್ನು ಹಾಗೂ ಬಡವರಿಗೆ ಅತೀ ಕಡಿಮೆ ದರದಲ್ಲಿ ಸಿಗುವ ಗೃಹ ಬಳಕೆಯ ವಸ್ತುಗಳನ್ನು ಮಾರಾಟ ಮಾಡುವ ಮಳಿಗೆಗಳನ್ನು ಹಾಕುವ ಸಲುವಾಗಿ ಮಠದ ಮಹಾದ್ವಾರದ ಮುಂಬಾಗಿಲಿನಿಂದ ತೇರಿನ ರಸ್ತೆಯ ಮಹಾದ್ವಾರದ ವರೆಗೆ ನಮ್ಮ ಶ್ರೀ ಮಠದ ಮಾಲಿಕತ್ವದ ಅಂದಾಜು 1 ಎಕರೆ ಜಾಗೆಯನ್ನು ಪ್ರತೀ ವರ್ಷ ಗುತ್ತಿಗೆ ಕೊಡಲಾಗುವುದು.
40 ದಿನ ಮುಗಿಯುವದರೊಳಗಾಗಿ ವಿದ್ಯುತ್ ಸರಬರಾಜನ್ನು ನಿಲ್ಲಿಸುವಂತೆ ಕೆ.ಇ.ಬಿ ಗೆ, ಪೋಲಿಸ ಠಾಣೆಗೆ ಹಾಗು ನಗರಸಭೆಗೆ ಅರ್ಜಿ ಸಲ್ಲಿಸಲಾಗುವುದು. ವರ್ಷದಲ್ಲಿ ಉಳಿದ 325 ದಿನ ಸಾರ್ವಜನಿಕರು ಈ ರಸ್ತೆಯನ್ನು ಉಪಯೋಗಿಸುತ್ತಿದ್ದಾರೆ, ಆ ಸಂಧರ್ಭದಲ್ಲಿ ನಾವು ಯಾರಿಂದಲೂ ಯಾವುದೇ ರೀತಿಯ ಭಾಡಿಗೆ ಪಡೆಯುವುದಿಲ್ಲ.
ಶ್ರೀ ಮಠವು ಗದಗಿನಲ್ಲಿ ಕೆ.ಎಲ್.ಇ ಸಂಸ್ಥೆಗೆ ಜೆ.ಟಿ. ಕಾಲೇಜು ಪ್ರಾರಂಭಿಸಲು ದಾನ ಕೊಡದಿದ್ದರೆ ಗದಗ ಜಿಲ್ಲೆಯಲ್ಲಿ ವಿದ್ಯೆ ಪಡೆಯಲು ಎಷ್ಟು ಕಷ್ಟವಾಗುತ್ತಿತ್ತು. ಅದೇ ರೀತಿ ಬೆಟಗೇರಿ ಪಶು ಚಿಕಿತ್ಸಾಲಯಕ್ಕೆ ಉಚಿತ ಭೂಮಿಯನ್ನು ದಾನ ಕೊಡಲಾಗಿದೆ.
ಮಹಾತ್ಮಾ ಗಾಂಧಿ ಸರ್ಕಲಿನಿಂದ ಜನರಲ್ ಕರಿಯಪ್ಪ ಸರ್ಕಲನವರೆಗೆ ನೂರಾರು ಕೋಟಿ ರೂಪಾಯಿ ಬೆಲೆಬಾಳುವ ಶ್ರೀ ಮಠದ ಜಾಗೆಯನ್ನು ರಸ್ತೆ ಅಗಲೀಕರಣಕ್ಕಾಗಿ ನಗರಸಭೆಗೆ ನೀಡಲಾಗಿದೆ. ಅದರಂತೆ ನಗರಸಭೆಗೆ ಜಗದ್ಗುರು ತೋಂಟದಾರ್ಯ ಉದ್ಯಾನವನ ನಿರ್ಮಿಸಲು ಜಾಗೆಯನ್ನು ಬಿಡಲಾಗಿದೆ. ಅಲ್ಲದೇ ರಾಜ್ಯಾದ್ಯಂತ ಅನೇಕ ಸರ್ಕಾರಿ ಪರಿಶಿಶ್ಟ. ಜಾತಿ/ ಪರಿಶಿಶ್ಟ ವರ್ಗದ ಮಕ್ಕಳ ಹಾಸ್ಟೆಲ್ ಗಳ ನಿರ್ಮಾಣಕ್ಕಾಗಿ, ರೈತ ಕೇಂದ್ರಗಳಿಗೆ, ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಪದವಿ ಕಾಲೇಜುಗಳಿಗೆ ಜಾಗೆಗಳನ್ನು ದಾನ ನೀಡಲಾಗಿದೆ.
ಅಲ್ಲದೇ ಅನೇಕ ಸರಕಾರಿ ಆಸ್ಟತ್ರೆಗಳ ನಿರ್ಮಾಣಕ್ಕೆ ಮತ್ತು ಆಶ್ರಯ ಮನೆಗಳ ನಿರ್ಮಾಣಕ್ಕೆ ಶ್ರೀ ಮಠದ ಬೆಲೆಬಾಳುವ ಜಾಗೆಗಳನ್ನು ದಾನ ನೀಡಲಾಗಿದೆ. ರಾಜ್ಯದಲ್ಲಿ ಸರ್ಕಾರಕ್ಕೆ ಅತೀ ಹೆಚ್ಚು ಜಾಗೆ, ಜಮೀನುಗಳನ್ನು ದಾನಗಳನ್ನು ಕೊಟ್ಟ ಶ್ರೇಯಸ್ಸು ಈ ಮಠಕ್ಕೆ ಸಲ್ಲುತ್ತದೆ. ಶ್ರೀ ಮಠದಿಂದ ನಡೆಸಲಾಗುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತೀ ವರ್ಷ ಆರ್ಥಿಕವಾಗಿ ಹಿಂದುಳಿದ ನೂರಾರು ದಲಿತ, ಹಿಂದುಳಿದ, ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡುತ್ತ ಬರಲಾಗಿದೆ.
ಶ್ರೀ ಮಠದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದ ಮತ್ತು ವಸತಿನಿಲಯ ಒದಗಿಸಲಾಗಿದೆ. ಯಾವೂದೇ ಪಂಕ್ತಿಭೇಧವಿಲ್ಲದೇ ಅನೇಕ ಕಡೆ ಅನ್ನ ದಾಸೋಹಗಳನ್ನು ನಡೆಸಲಾಗುತ್ತಿದೆ. ಉಳಿದ ಅಸಂಖ್ಯಾತ ರಚತಾತ್ಮಕ ಕಾರ್ಯಗಳನ್ನು ಶ್ರೀ ಮಠದಿಂದ ಜರುಗುತ್ತ ಬಂದಿವೆ.
ಮಠದ ಇತಿಹಾಸ, ಪರಂಪರೆ, ಸ್ವಾಮಿಗಳ ಬಗ್ಗೆ ಎನೂ ಗೊತ್ತಿಲ್ಲದ ಕೆಲವು ಈ ಸಮಾಜ ಘಾತುಕ ಶಕ್ತಿಗಳು ಮಠದ ಗದ್ದುಗೆಯ ಬಗ್ಗೆ, ಕಾಶೀ ಕರಬಸಪ್ಪನ ಗದ್ದುಗೆ ಎಂದು ಅಸಬ್ಯವಾಗಿ ಮಾತನಾಡುವುದು ಮತ್ತು ಮಠದ ಪೂಜ್ಯರ ಬಗ್ಗೆ ಹಗುರವಾಗಿ ಮಾತನಾಡುವುದು ಇವರ ಅನಾಗರೀಕತನವನ್ನು, ಅಜ್ಞಾನವನ್ನ ತೋರಿಸುತ್ತದೆ. ಪೂಜ್ಯ ಕರಿ ಬಸವ ಮಹಾಸ್ವಾಮಿಗಳು ನಮ್ಮ ಮಠದ ಚರಮೂರ್ತಿಗಳಲ್ಲಿ ಒಬ್ಬರು. ಅದರಿಂದ ಇವರಿಗೆ ಏನು ತೊಂದರೆಯಾಗಿದೆ ಗೊತ್ತಿಲ್ಲ.
ಪ್ರತೀ ವರ್ಷದಂತೆ ನಮ್ಮ ಮಾಲಿಕತ್ವದ ತೇರಿನ ಬೀದಿಯ ರಸ್ತೆಯಲ್ಲಿ ಅಂಗಡಿಗಳನ್ನು ನಾಡಿನ ಎಲ್ಲ ಜಾತ್ರೆಗಳಲ್ಲಿ ಹಾಕುವ ಬಡ ವ್ಯಾಪಾರಿಗಳು ಮತ್ತು ಸ್ಥಳೀಯ ಬಡ ವ್ಯಾಪಾರಿಗಳು ಬಡ ಜನಗಳಿಗಾಗಿ ಹಾಕುವ ಈ ಅಂಗಡಿಗಳ ಈ ವರ್ಷದ ಗುತ್ತಿಗೆದಾರ ಗದುಗಿನ ಶ್ರೀ ಪರಶುರಾಮ ಸಮಗಾರ ಇವರ ಗುತ್ತಿಗೆ ಅವಧಿ ಇದೇ ದಿನಾಂಕ : 29-05-2025 ಕ್ಕೆ ಮುಕ್ತಾಯವಾಗುತ್ತದೆ. ಈ ಜಾತ್ರೆಯು ಶಾಲೆಯ ರಜೆಯ ದಿನಗಳಲ್ಲಿ ಬರುತ್ತಿರುವುದರಿಂದ, ಈ ಮಾರಾಟ ಮಳಿಗೆಗಳಲ್ಲಿ ಅತೀ ಕಡಿಮೆ ಬೆಲೆಗಳಲ್ಲಿ ಈ ಮೇಲೆ ಹೇಳಲಾದ ವಸ್ತುಗಳು ದೊರೆಯುತ್ತಿರುವುದರಿಂದ ಸದರಿ ಅಂಗಡಿಗಳ ಗುತ್ತಿಗೆ ಅವಧಿಯನ್ನು ವಿಸ್ತರಿಸಬೇಕೆಂದು ಅನೇಕ ಬಡ ಪಾಲಕರು, ಭಕ್ತರು ಶ್ರೀ ಮಠಕ್ಕೆ ಸಾಕಷ್ಟು ಮನವಿ ಸಲ್ಲಿಸಿದ್ದರೂ ಕೂಡ, ಒಪ್ಪಂದದ ಅವಧಿಯನ್ನು ಆಡಳಿತಮಂಡಳಿಯವರು ವಿಸ್ತರಿಸಿರುವುದಿಲ್ಲ ಎಂಬ ಸಂಗತಿಯನ್ನು ಸಹ ಈ ಮೂಲಕ ಸಾರ್ವಜನಿಕರ ಗಮನಕ್ಕೆ ತರಲಾಗಿದೆ. ಆದ್ದರಿಂದ ದಿನಾಂಕ 29-05-2025 ರಿಂದ ಯಾವೂದೇ ವ್ಯವಹಾರಕ್ಕೆ ಅವಕಾಶ ಇರುವುದಿಲ್ಲ.
ಈ ವಸ್ತುಸ್ಥಿತಿ ಗೊತ್ತಿದ್ದು ಪ್ರತಿಷ್ಠಿತ ಶ್ರೀ ಮಠದ ವಿರುದ್ದ ಅಪಪ್ರಚಾರ ಮಾಡಿ ಹೆಸರು ಪಡೆಯಲು, ಕೆಲವು ದುಷ್ಠ ಶಕ್ತಿಗಳು ಶ್ರೀ ಮಠದ ವಿರುದ್ದ ಕರಪತ್ರ ಹಂಚುವುದು, ಗದಗ ಬಂದ ಮಾಡಿಸುತ್ತೇವೆ ಅಂತ ಬೆದರಿಸುವ ಬ್ಲಾಕಮೇಲ ತಂತ್ರಕ್ಕೆ ಶ್ರೀ ಮಠದ ಭಕ್ತ ಮಂಡಳಿ ಮತ್ತು ಜಾತ್ರಾ ಸಮೀತಿಯ ಪದಾಧಿಕಾರಿಗಳು ಇಂಥ ಬೆದರಿಕೆಗಳಿಗಳಿಗೆ ಎಂದೂ ಮಣಿಯುವುದಿಲ್ಲ. ಈ ಕುರಿತು ಈಗಾಗಲೇ ಇಂತಹ ಶಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಹಾಗೂ ಈ ಹೇಳಿಕೆಗಳನ್ನು ನೀಡುತ್ತಿರುವ ವ್ಯಕ್ತಿಯನ್ನು ಹಾಗೂ ಕಾನೂನುಬಾಹಿರವಾಗಿ ಮಾತನಾಡುತ್ತಿರುವ ಕೆಲವು ವಿರೋಧಿಗಳ ಈ ಹೋರಾಟ ಶ್ರೀಮಠದ ಭಕ್ತರ ಭಾವನೆಗಳಿಗೆ, ಧಾರ್ಮಿಕ ಸ್ವಾತಂತ್ರ್ಯಕ್ಕೆ ತೀವ್ರ ಧಕ್ಕೆ ಉಂಟಾಗಿದೆ. ಕಾರಣ ಇಂತಹ ಸಮಾಜಘಾತುಕ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಈಗಾಗಲೇ ಜಿಲ್ಲಾಡಳಿತಕ್ಕೆ ಸರ್ವ ಸಮುದಾಯದ ಭಕ್ತರಾದ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರಾದ ಡಾ. ಧನೇಶ ದೇಸಾಯಿ, ನಗರಸಭೆ ಅಧ್ಯಕ್ಷರಾದ ಕೃಷ್ಣಾ ಪರಾಪೂರ, ಜಿಲ್ಲಾ ಗ್ಯಾರಂಟೀ ಸಮೀತಿಯ ಅಧ್ಯಕ್ಷರಾದ ಬಿ. ಬಿ ಅಸೂಟಿ, ಜಾತ್ರಾ ಸಮೀತಿಯ ಉಪಾಧ್ಯಕ್ಷರಾದ ಡಿ. ಜಿ ಜೋಗಣ್ಣವರ, ಹುಬ್ಬಳ್ಳಿ ಚೇಂಭರ ಆಫ ಕಾಮರ್ಸ ಅಧ್ಯಕ್ಷರಾದ ಪಿ.ಎಸ್ ಸಂಶಿಮಠ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡರ, ಬಿಜೆಪಿ ಜಿಲ್ಲಾಧ್ಯಕ್ಷರಾದ ರಾಜು ಕುರಡಗಿ, ಸದಸ್ಯರಾದ ವಿನಾಯಕ ಮಾನ್ವಿ, ಮಾಜಿ ನಗರಸಭೆ ಅಧ್ಯಕ್ಷರಾದ ಶಿವಣ್ಣ ಮುಳಗುಂದ, ರಾಮಣ್ಣ ಫಲದೊಡ್ಡಿ, ಯಂಗ್ ಇಂಡಿಯಾ ಸಂಘಟನೆ ಮುಖ್ಯಸ್ಥರಾದ ವಿ.ಆರ್ ಗೋವಿಂದಗೌಡ್ರ, ಕೆ.ಎಚ್ ಬೇಲೂರ, ಎಸ್. ಎನ್. ಬಳ್ಳಾರಿ, ಜಾಗತಿಕ ಲಿಂಗಾಯತ ಮಹಾ ಸಭಾದ ಜಿಲ್ಲಾ ಅಧ್ಯಕ್ಷ ಕೆ. ಎಸ್. ಚೆಟ್ಟಿ, ಸದಾಶಿವಯ್ಯ ಮದರಿಮಠ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷ ರಾಜು ಗುಡಿಮನಿ, ಮಾರ್ತಾಂಡಪ್ಪ ಹಾದಿಮನಿ, ಗಂಗಾಧರ ಹಿರೇಮಠ, ಶ್ರೀ ಮಠದ ವ್ಯವಸ್ಥಾಪಕ ಎಂ.ಎಸ್ ಅಂಗಡಿ, ಗುರುಬಸವ ತಡಸದ, ಮಲ್ಲಿಕಾರ್ಜುನ ಐಲಿ ಇಂಜಿನೀಯರ, ದಾನಯ್ಯ ಗಣಾಚಾರಿ, ಪ್ರಕಾಶ ಅಸುಂಡಿ, ಶೇಖಣ್ಣ ಕವಳಿಕಾಯಿ, ಗದಗ ಚೆಂಬರ ಆಫ ಕಾಮರ್ಸ ಮಾಜಿ ಅಧ್ಯಕ್ಷ ಈಶಣ್ಣ ಮುನವಳ್ಳಿ, ಬಲರಾಮ ಬಸವ, ಜಯ ಕರ್ನಾಟಕ ಸಂಘಟನೆಯ ಕಾರ್ಯದರ್ಶಿ ಚಂದ್ರಕಾಂತ ಚವ್ಹಾಣ, ರಾಮು ಬಳ್ಳಾರಿ, ಮುರುಗೇಶ ಬಡ್ನಿ, ವೀರಣ್ಣ ಜ್ಯೋತಿ, ಪ್ರಕಾಶ ಕೆರೂರು, ಎಮ್. ಎಸ್. ಪಾಟೀಲ, ಜೆ. ಟಿ. ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್ ಪಟ್ಟಣಶೆಟ್ಟರ, ವಿರೂಪಾಕ್ಷಪ್ಪ ಬಳ್ಳೊಳ್ಳಿ, ಸಿದ್ಧಣ್ಣ ಬಂಗಾರಶೆಟ್ಟರ, ಅಮರೇಶ ಅಂಗಡಿ, ಅಶೋಕ ಕುಡತಿನಿ, ಕೆ. ಎಸ್. ಪಲ್ಲೆದ, ರಾಚಪ್ಪ ಮಿಣಜಗಿ, ಶೇಖಣ್ಣ ಕಳಸಾಪೂರ, ಎಸ್.ಎಸ್ ಭಜಂತ್ರಿ, ಮಾರುತಿ ಬುರಡಿ, ಪ್ರಕಾಶ ಉಗಲಾಟದ, ವೀರಣ್ಣ ಗೊಡಚಿ, ಸಿಧ್ದರಾಮಪ್ಪ ಗೊಜನೂರ, ಜಯಣ್ಣ ಶೆಟ್ಟರ, ವೈಜನಾಥ ಕೌತಾಳ, ಕುಮಾರ ಮಾದರ, ಪರಶುರಾಮ ಸಮಗಾರ, ಶಿವಯೋಗಿ ತಡಸದ ಮುಂತಾದವರು ದೂರು ಸಲ್ಲಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ದಿನಾಂಕ 26-05-2025 ಗದಗ ಬಂದ ಮಾಡುವ ಬಗ್ಗೆ ಶ್ರೀ ಮಠದ ವಿರೋಧಿಗಳು ನೀಡುತ್ತಿರುವ ಈ ಹೇಳಿಕೆಗಳನ್ನ ಸಾರ್ವಜನಿಕರು ಗಣನೆಗೆ ತೆಗೆದುಕೊಳ್ಳಬಾರದೆಂದು ಜಾತ್ರಾ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಶ್ರೀ ಮಠದ ಆಡಳಿತ ಮಂಡಳಿ ಈ ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ಸ್ಪಷ್ಟಿಕರಣ ನೀಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಲಾಗಿದೆ.
-----.----------
ಹಿಂದೂಸ್ತಾನ್ ಸಮಾಚಾರ್ / Lalita MP