ಮೇ 26 ರಂದು ಗದಗ ಬಂದ್ ಕರೆ
ಗದಗ, 24 ಮೇ (ಹಿ.ಸ.) ಆ್ಯಂಕರ್:- ಗದಗನ ತೊಂಟದಾರ್ಯ ಮಠದ ಜಾತ್ರೆ ವಿರೋಧಿಸಿ. ಹಾಗೂ ಬಡ ಬೀದಿ ಬದಿ ವ್ಯಾಪಾರಸ್ಥರ ಬದುಕಿಗಾಗಿ ಮೇ.26 ರಂದು ಬೆಳಗ್ಗೆ 6ರಿಂದ ಹಿಂದೂ ವೀರಶೈವ ಲಿಂಗಾಯತ ಯುವ ವೇದಿಕೆ, ಶ್ರೀರಾಮ ಸೇನೆ, ಶ್ರೀರಾಮ ಸೇನೆ ದಲಿತ ಮಿತ್ರ ಮೇಳ, ಆಟೋ ಸೇನಾ ಹಾಗೂ ಹಿಂದುಳಿದ ಹಾಗೂ ವಿವಿಧ ಕನ್ನಡಪರ ಸ
ಪೋಟೋ


ಗದಗ, 24 ಮೇ (ಹಿ.ಸ.)

ಆ್ಯಂಕರ್:- ಗದಗನ ತೊಂಟದಾರ್ಯ ಮಠದ ಜಾತ್ರೆ ವಿರೋಧಿಸಿ. ಹಾಗೂ ಬಡ ಬೀದಿ ಬದಿ ವ್ಯಾಪಾರಸ್ಥರ ಬದುಕಿಗಾಗಿ ಮೇ.26 ರಂದು ಬೆಳಗ್ಗೆ 6ರಿಂದ ಹಿಂದೂ ವೀರಶೈವ ಲಿಂಗಾಯತ ಯುವ ವೇದಿಕೆ, ಶ್ರೀರಾಮ ಸೇನೆ, ಶ್ರೀರಾಮ ಸೇನೆ ದಲಿತ ಮಿತ್ರ ಮೇಳ, ಆಟೋ ಸೇನಾ ಹಾಗೂ ಹಿಂದುಳಿದ ಹಾಗೂ ವಿವಿಧ ಕನ್ನಡಪರ ಸಂಘಟನೆ ವತಿಯಿಂದ ಗದಗ ಬಂದ್ ಗೆ ಕರೆ ನೀಡಲಾಗಿದೆ ಎಂದು ಶ್ರೀರಾಮ ಸೇನೆ ರಾಜ್ಯ ಕಾರ್ಯದರ್ಶಿ ರಾಜು ಖಾನಪ್ಪನವರ ಹೇಳಿದರು.

ಗದಗ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 6ಕ್ಕೆ ನಗರದ ಕಾಶಿ ಕರಬಸಪ್ಪನವರ ಗದ್ದುಗೆಗೆ 11 ಬಿಂದಿಗೆಗಳಿಂದ ಅಭಿಷೇಕ ಮಾಡಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಮನವಿ ಸಲ್ಲಿಸಲಾಗುವುದು. ಮೆರವಣಿಗೆಯಲ್ಲಿ ವಿವಿಧ ಸಂಘಟನೆಯ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದು, ಯಾವುದೇ ಅಹಿತಕರ ಘಟನೆ ನಡೆದರೂ ಅಚ್ಚರಿ ಪಡಬೇಕಿಲ್ಲ. ಇದೇ ವೇಳೆ ಜಾತ್ರಾ ಮಳಿಗೆಗಳಿಗೆ ಮುತ್ತಿಗೆ ಹಾಕಬಹುದು, ಜತೆಗೆ ಸಂಘರ್ಷ ಕೂಡ ನಡೆಯಬಹುದು ಎಂದು ಎಚ್ಚರಿಕೆ ನೀಡಿದರು.

ಮೇ.26ರಂದು ನಡೆಯುವ ಬಂದ್ ವೇಳೆ ಅಗತ್ಯ ವಸ್ತುಗಳಿಗೆ ಅನುವು ಮಾಡಿಕೊಡಲಾಗಿದೆ.

ಹಾಲು, ಪತ್ರಿಕೆ, ಆಸ್ಪತ್ರೆ, ಅಂಬುಲೆನ್ಸ್, ಮೆಡಿಕಲ್ ಶಾಪ್ ಸೇರಿದಂತೆ ವಿವಿಧ ಅಗತ್ಯ ವಸ್ತುಗಳ ಮಾರಾಟಕ್ಕೆ ಹಾಗೂ ಅಂಗಡಿಗಳಿಗೆ ಅನುವು ಮಾಡಿಕೊಡಲಾಗಿದೆ. ಇವುಗಳನ್ನು ಹೊರತುಪಡಿಸಿ ಎಲ್ಲವನ್ನು ಬಂದ್ ಮಾಡಲಾಗುತ್ತದೆ. ಸ್ಥಳೀಯ ವ್ಯಾಪಾರಸ್ಥರು ಸಹಕಾರ ನೀಡಿ, ಸಣ್ಣ-ಪುಟ್ಟ ವ್ಯಾಪಾರಸ್ಥರ ಹಿತ ಕಾಪಾಡಬೇಕು ಎಂದರು.

ಜಿಲ್ಲಾಡಳಿತ, ಪೊಲೀಸ್ ಇಲಾಖೆ, ನಗರಸಭೆ, ಮಠದ ಆಡಳಿತ ಮಂಡಳಿಗಳಿಗೆ ಮನವಿ ಮಾಡಿಕೊಂಡು ಬಂದರೂ ಕೂಡ ಇವರೆಲ್ಲರೂ ಬೇರೆ ರಾಜ್ಯದ ವ್ಯಾಪಾರಸ್ಥರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇದು ಅತ್ಯಂತ ನೋವಿನ ಸಂಗತಿಯಾಗಿದೆ. ಮಠದ ಜಾತ್ರೆ ವಿರುದ್ಧ ಸ್ಥಳೀಯ ವ್ಯಾಪಾರಸ್ಥರಂತೂ ರೋಸಿ ಹೋಗಿದ್ದಾರೆ

ಎಂದು ಆರೋಪಿಸಿದರು.

ಜಾತ್ರೆ ನಡೆಯುವ ಒಂದು ತಿಂಗಳ ಮುನ್ನ ಸ್ಥಳೀಯ ವ್ಯಾಪಾರಸ್ಥರ ವ್ಯಾಪಾರ ಕುಂಠಿತಗೊಂಡಿದೆ. ಎರಡು ತಿಂಗಳು ಅವಧಿಗೂ ಮೀರಿದ ಜಾತ್ರೆ ನಡೆಯುವುದರಿಂದ ವ್ಯಾಪಾರಸ್ಥರಿಗೆ ದಿಕ್ಕು ತೋಚದಂತಾಗಿದ್ದು, ಒಂದು ವರ್ಷದಲ್ಲಿ ಬರೋಬ್ಬರಿ ಐದು ತಿಂಗಳು ಖಾಲಿ ಕೈಯಲ್ಲಿ ಇರುವ ಪರಿಸ್ಥಿತಿ ಇದೆ. ಇದಕ್ಕೆಲ್ಲ ತೋಂಟದಾರ್ಯ ಮಠದ ಆಡಳಿತ ಮಂಡಳಿ, ಜಿಲ್ಲಾಡಳಿತ, ನಗರಸಭೆ ಹಾಗೂ ಪೊಲೀಸ್ ಇಲಾಖೆ ನೇರ ಹೊಣೆಯಾಗಿದೆ ಎಂದು ರಾಜು ಖಾನಪ್ಪನವರ ಆರೋಪಿಸಿದರು.

ವ್ಯಾಪಾರಸ್ಥ ಪ್ರಹ್ಲಾದ ಅಗಸಿಮನಿ, ಶಂಕರ್ ಮಲಾಜಿ, ಕಾರ್ತಿಕ್ ಲದ್ವಾ, ಮಂಜುನಾಥ ಕುಂಟೆ, ಕುಮಾರ ನಡಗೇರಿ, ಕುಮಾರ ಮಿಟ್ಟಿಮಠ, ಸೋಮು ಗುಡಿ, ಮಹೇಶ ರೋಖಡೆ, ಶಿವಯೋಗಿ ಹಿರೇಮಠ, ವೆಂಕಟೇಶ ದೊಡ್ಡಮನಿ, ಸತೀಶ್ ಕುಂಬಾರ, ಮಹಾಂತೇಶ ಪಾಟೀಲ, ಕಿರಣ್ ಹಿರೇಮಠ, ಹುಲಗಪ್ಪ ವಾಲ್ಮೀಕಿ, ವಿಶ್ವನಾಥ ಸಿರಿ. ರವಿ ಜಾಲಗಾರ ಇದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande