ಗದಗ, 24 ಮೇ (ಹಿ.ಸ.)
ಆ್ಯಂಕರ್:- ಕರ್ನಾಟಕದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆರೋಗ್ಯ ಮಂತ್ರಿಯಾದ ದಿನೇಶ ಗುಂಡುರಾವ್ ಅವರು ಸರ್ಕಾರಿ ಆಸ್ಪತ್ರೆ ಹಾಗು ಸುತ್ತಮುತ್ತಲಿನ ವಾತಾವರಣದಲ್ಲಿ ಕೇಂದ್ರ ಸರ್ಕಾರದ ಬಡವರ ಪಾಲಿಗೆ ಮಹತ್ತರ ಯೋಜನೆಯಾದ ಜನ ಔಷದಿ ಕೇಂದ್ರವನ್ನು ಮುಚ್ಚುವ ನಿರ್ಧಾರ ಬಹಳಷ್ಟು ಸಾರ್ವಜನಿಕರಿಂದ ಟೀಕೆಗೆ ಗುರಿಯಾಗುತ್ತಿರುವ ಕರ್ನಾಟಕದ ಕಾಂಗ್ರೆಸ್ ಸರ್ಕಾರ.
ಸರ್ಕಾರದ ಆರೋಗ್ಯಮಂತ್ರಿ ದಿನೇಶ ಗುಂಡುರಾವ್ ರವರು ತೆಗೆದುಕೊಂಡಿರುವ ಜನ ಔಷಧಿ ಕೇಂದ್ರವನ್ನು ಮುಚ್ಚುವ ನಿರ್ಧಾರ ಖಂಡನೀಯವಾಗಿದೆ. ಕೇಂದ್ರ ಸರ್ಕಾರವು ದೇಶಾಧ್ಯಂತ ಬಡವರಿಗೆ, ದೀನದಲಿತರಿಗೆ ಕಡಿಮೆ ಧರದಲ್ಲಿ ಔಷಧಿ ದೊರೆಯಬೇಕೆಂದು ಬಹುದೊಡ್ಡ ಕನಸಿನೊಂದಿಗೆ ಮೋದಿಜೀರವರು ಜನ ಔಷಧಿ ಯೋಜನೆಯನ್ನು ದೇಶಾದ್ಯಂತ ಜಾರಿಯಲ್ಲಿ ತಂದಿದ್ದರು. ಸಾರ್ವಜನಿಕರೂ ಕೂಡಾ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ.
ಯೋಜನೆಯ ಉದ್ದೇಶ ಹಾಗು ಗುರಿಯನ್ನು ರಾಜ್ಯ ಸರ್ಕಾರವು ಹೊಟ್ಟೆಕಿಚ್ಚಿನಿಂದ ಹಾಗು ಮೋದಿಜಿ ರವರ ಮೇಲೆ ದ್ವೇಷ ರಾಜಕಾರಣ ಮಾಡಲು ಹೊರಟಿರುವ ಸರ್ಕಾರಕ್ಕೆ ಜನರು ಚಿಮಾರಿ ಹಾಕುತ್ತಿದ್ದಾರೆ.
ಈ ಯೋಜನೆಯಿಂದ ಸಾಕಷ್ಟು ಬಡ ಜನರು ತಮ್ಮ ಖಾಯಿಲೆಗಳಿಗೆ ಕಡಿಮೆ ಧರದಲ್ಲಿ ಮಾತ್ರೆಗಳನ್ನು ಪಡೆದುಕೊಳ್ಳುತ್ತಿದ್ದರು. ಅದನ್ನು ಸಾರ್ವಜನಿಕರಿಂದ ಕಿತ್ತುಕೊಂಡಿರುವ ಕರ್ನಾಟಕದ ಲಜ್ಜೆಗೆಟ್ಟ ಕಾಂಗ್ರೇಸ್ ಸರ್ಕಾರ ಬಡಜನರ ಹಕ್ಕನ್ನು ಕಸಿಯುತ್ತಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಈ ಯೋಜನೆಯನ್ನು ಮತ್ತೆ ಮೊದಲು ಹೇಗೆ ಎಲ್ಲ ಕಡೆಯಲ್ಲು ದೊರೆಯುತ್ತಿತ್ತು ಹಾಗೆಯೇ ಸರ್ಕಾರವು ತಮ್ಮ ಜನ ಔಷಧಿ ಕೇಂದ್ರದ ಮುಚ್ಚುವ ಹುನ್ನಾರವನ್ನು ಕೈಬಿಟ್ಟು ಖಾಸಗಿ ಔಷಧಿ ಕೇಂದ್ರಗಳಿಗೆ ಲಾಭ ಕೊಡುವ ಉದ್ದೇಶ ಮತ್ತು ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡಬಾರದೆಂದು ಒತ್ತಾಯಿಸುತ್ತೇನೆ ಎಂದು ಅನೀಲ ಅಬ್ಬಿಗೇರಿ ರವರು ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Lalita MP