ನವದೆಹಲಿ, 20 ಮೇ (ಹಿ.ಸ.) :
ಆ್ಯಂಕರ್ : ಐಪಿಎಲ್ 2025 ಪ್ಲೇಆಫ್ ರೇಸ್‌ನಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೋಮವಾರ ಹೊರಬಿದ್ದಿದೆ. ಹೈದರಾಬಾದ್ ವಿರುದ್ಧದ ಸೋಲಿನಿಂದ ಟೂರ್ನಿಯಿಂದ ಹೊರಗುಳಿದ ಐದನೇ ತಂಡವಾಯಿತು. ಈಗ ಮೂರು ತಂಡಗಳಾದ ಜಿಟಿ, ಆರ್‌ಸಿಬಿ, ಪಿಬಿಕೆಎಸ್ ಪ್ಲೇಆಫ್‌ಗೆ ಅರ್ಹತೆ ಪಡೆದಿವೆ.
ನಾಲ್ಕನೇ ಸ್ಥಾನಕ್ಕಾಗಿ ಮುಂಬೈ ಇಂಡಿಯನ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ಪೈಪೋಟಿ ನಡೆಯುತ್ತಿದೆ. ಮೇ 21ರಂದು ಮುಂಬೈ-ದೆಹಲಿ ಪಂದ್ಯ ನಡೆಯಲಿದ್ದು, ಮುಂಬೈ ಗೆದ್ದರೆ ಪ್ಲೇಆಫ್‌ಗೆ ಪ್ರವೇಶ ಪಡೆಯಬಹುದು. ದೆಹಲಿ ಗೆದ್ದರೆ, ಮೇ 26ರಂದು ಮುಂಬೈ-ಪಂಜಾಬ್ ನಡುವೆ ಪಂದ್ಯದ ನಂತರ ನಿರ್ಧಾರವಾಗಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa