ಬಳ್ಳಾರಿ, 19 ಮೇ (ಹಿ.ಸ.) :
ಆ್ಯಂಕರ್ : ಬಳ್ಳಾರಿ ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಏರ್ಪಟ್ಟಿರುವ `ಬೆಣಕಲ್ ಪ್ರೀಮಿಯರ್ ಲೀಗ್ ಸೀಸನ್ - 1' ಕ್ರಿಕೆಟ್ ಪಂದ್ಯಾವಳಿಯನ್ನು ಧ್ರುವ ಆಸರೆ ಫೌಂಡೇಶನ್‍ನ ಅಧ್ಯಕ್ಷ ಹಾಗೂ ಅಹಿಂದ ಬಳ್ಳಾರಿ ಜಿಲ್ಲಾಧ್ಯಕ್ಷ ಎಂ.ಜಿ. ಕನಕ ಅವರು ಬ್ಯಾಟಿಂಗ್ ಮಾಡುವ ಮೂಲಕ ಕ್ರಿಕೆಟ್ ಪಂದ್ಯಾವಳಿಗೆ ಸೋಮವಾರ ಚಾಲನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಮೊಹಮ್ಮದ್ ರಿಯಾಜ್, ಅಹಿಂದ ಗೌರವಾಧ್ಯಕ್ಷ ಬಿ. ಮಾರುತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮರ್ ಫಾರೂಕ್, ಜಿಲ್ಲಾ ಉಪಾಧ್ಯಕ್ಷ ಚೇಳ್ಳಗುರ್ಕಿ ನಾಗರಾಜ್, ಗ್ರಾಮಾಂತರ ಅಧ್ಯಕ್ಷ ಹರಗಿನಡೋಣಿ ಗಾದಿಲಿಂಗ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿ. ಗಂಗಾಧರ್, ಬೆಣಕಲ್ ತಳವಾರ ಶಿವಪ್ಪ, ಎಂ.ಟಿ. ಮಲ್ಲಿ ಸೇರಿದಂತೆ ಬೆಣಕಲ್ ಗ್ರಾಮದ ಕ್ರೀಡಾಪಟುಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್