ಕೊಪ್ಪಳ, 29 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ಜಿಲ್ಲೆಯ ಯುವ ಕ್ರೀಡಾಪಟುಗಳಿಗೆ ಹಾಗೂ ಬಾಲಕ, ಬಾಲಕಿಯರಿಗೆ ಚೆಸ್ ಬೇಸಿಗೆ ತರಬೇತಿ ಶಿಬಿರ ಮತ್ತು 2025ನೇ ಸಾಲಿನ ರಾಜ್ಯ ಮಟ್ಟದ ಚೆಸ್ ಸ್ಪರ್ಧೆಗೆ ಆಯ್ಕೆ ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ ಯುವ ಕ್ರೀಡಾಪಟುಗಳಿಗೆ ಹಾಗೂ ಬಾಲಕ, ಬಾಲಕಿಯರಿಗೆ ಮಾನಸಿಕ ಸಾಮರ್ಥ್ಯ ಹೊಂದುವ ಹಿತದೃಷ್ಟಿಯಿಂದ ಹಾಗೂ ಚೆಸ್‌ನಲ್ಲಿ ಸಾಧನೆ ಮಾಡುವ ದೃಷ್ಟಿಯಿಂದ ಮೇ. 4 ರಂದು ಕೊಪ್ಪಳ ಜಿಲ್ಲಾ ಕ್ರೀಡಾಂಗದಲ್ಲಿ ಚೆಸ್ ತರಬೇತಿ ಶಿಬಿರ ಏರ್ಪಡಿಸಲಾಗಿದ್ದು, ಚೆಸ್ ಸ್ಪರ್ಧೆಗೆ ಭಾಗವಹಿಸುವ ಆಸಕ್ತರು ಮೇ.2 ರ ಒಳಗಾಗಿ ದೂರವಾಣಿ ಮುಖಾಂತರ ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಬಹುದಾಗಿದೆ.
ನಿಬಂಧನೆಗಳು: ಚೆಸ್ ತರಬೇತಿ ಶಿಬಿರದ ಪ್ರವೇಶ ಶುಲ್ಕ ರೂ.200 ಆಗಿದ್ದು, ಚೆಸ್ ತರಬೇತಿ ಶಿಬಿರವು ಅಂದು ಬೆಳಿಗ್ಗೆ 9 ರಿಂದ ಬೆಳಿಗ್ಗೆ 11 ಗಂಟೆಯವರೆಗೆ ನಡೆಸಲಾಗುವುದು. ನಂತರ ಮಧ್ಯಾಹ್ನ 12 ಗಂಟೆಯಿAದ ಚೆಸ್ ಸ್ಪರ್ಧೆ ಪ್ರಾರಂಭವಾಗುವುದು. ವಿಜೇತರಾದ ಸ್ಪರ್ಧಾಳುಗಳನ್ನು ಮುಂಬರುವ ದಿನಗಳಲ್ಲಿ 2025ನೇ ರಾಜ್ಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು.
ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಲು ವಯೋಮಿತಿ 7, 9, 11, 15, 17, 19, ವರ್ಷದೊಳಗಿನ ಬಾಲಕ/ ಬಾಲಕಿಯರಿಗೆ ಅವಕಾಶವಿರುತ್ತದೆ. ದೂರವಾಣಿ ಮೂಲಕ ಮುಂಚಿತವಾಗಿ ನೋಂದಣಿಯಾದ 100 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಸ್ಪರ್ಧಾಳುಗಳು ಸಮಯಕ್ಕೆ ಸರಿಯಾಗಿ ಹಾಜರಿರಬೇಕು. ನಿರ್ಣಾಯಕರ ನಿರ್ಣಯಕ್ಕೆ ಬದ್ದರಾಗಿರಬೇಕು ಮತ್ತು ನಿರ್ಣಾಯಕರ ನಿರ್ಣಯವೇ ಅಂತಿಮವಾಗಿರುತ್ತದೆ.
ಚೆಸ್ ತರಬೇತಿ ಶಿಬಿರ ಮತ್ತು ಸ್ಪರ್ಧೆ ಮುಗಿದ ನಂತರ ಪ್ರಮಾಣ ಪತ್ರ ವಿತರಿಸಲಾಗುವುದು. ಭಾಗವಹಿಸುವ ಸ್ಪರ್ಧಾಳುಗಳು ಕಡ್ಡಾಯವಾಗಿ ಆಧಾರ ಕಾರ್ಡ ಅಥವಾ ಜನ್ಮ ದಿನಾಂಕ ದಾಖಲಾತಿ ತರಬೇಕು.
ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕ್ರೀಡಾ ಇಲಾಖೆ ಕಛೇರಿ ಸಿಬ್ಬಂದಿಗಳಾದ ಆರ್.ತುಕಾರಾಮ್ ಮೊ.ಸಂ: 8197398600, ದೀಪಾ ಮೊ.ಸಂ: 8088143003 ಹಾಗೂ ಕಛೇರಿ ದೂರವಾಣಿ ಸಂಖ್ಯೆ: 08539-230121 ಗೆ ಅಥವಾ ಕಛೇರಿಗೆ ಖುದ್ದಾಗಿ ಭೇಟಿ ನೀಡಿ ಸಂಪರ್ಕಿಸುವಂತೆ ಕೊಪ್ಪಳ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ್ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್