ಲಿಂಗಸುಗೂರು, 12 ಮೇ (ಹಿ.ಸ.) :
ಆ್ಯಂಕರ್ : ಲಿಂಗಸುಗೂರಿನ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ದಲ್ಲಿ 2025-26ನೇ ಸಾಲಿನ ಉನ್ನತ ಕೌಶಲ್ಯಾಧಾರಿತ ತಾಂತ್ರಿಕ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಈ ಸಂಸ್ಥೆಯು ಪ್ರಸಕ್ತ ಸಾಲಿನ 3+1 Year ಕೋsರ್ಸ್ಗಳಿಗೆ ಎಸ್‌ಎಸ್‌ಎಲ್‌ಸಿ/ ಐಟಿಐ/ ಪಿಯುಸಿ ಸೈನ್ಸ್ ಪಾಸಾದ ಅರ್ಹ ಅಭ್ಯರ್ಥಿಗಳಿಗೆ ಮೊದಲ ಆದ್ಯತೆಯ ಮೇರೆಗೆ ಪ್ರವೇಶಾತಿ ನೀಡಲಾಗುವುದು.
ಈ ಕೋರ್ಸ್ಗಳು 03+01 ವರ್ಷದ ಅವಧಿಯಾಗಿದ್ದು, ಮೊದಲ 03 ವರ್ಷ ಸಂಸ್ಥೆಯಲ್ಲಿ ತರಬೇತಿ ನೀಡಲಾಗುವುದು. ನಂತರ 04 ನೇಯ ವರ್ಷದಲ್ಲಿ ಪ್ರತಿಷ್ಠಿತ ಕೈಗಾರಿಕೆಗಳಲ್ಲಿ ಕಡ್ಡಾಯ 01 ವರ್ಷ ಕೈಗಾರಿಕಾ ತರಬೇತಿಗಾಗಿ ಕಳುಹಿಸಲಾಗುವುದು, ಈ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಆಕರ್ಷಕ ಸ್ಪೈಫಂಡ್ ಮತ್ತು ಇನ್ನಿತರ ಸೌಲಭ್ಯಗಳು ದೊರೆಯುತ್ತವೆ.
ಈ ಕೋರ್ಸಗಳ ಪ್ರವೇಶಾತಿಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಶೇ.33 ಪ್ರತಿಶತ ಹಾಗೂ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ 371 (ಜೆ) ಮೀಸಲಾತಿ ಸೌಲಭ್ಯವಿರುತ್ತದೆ.
ಈ ತರಬೇತಿಯು ಇನ್ನಿತರ ಡಿಪ್ಲೊಮಾ ಕೋರ್ಸ್ಗಳಿಗಿಂತ ವಿಭಿನ್ನವಾಗಿದ್ದು, ಹಲವಾರು ವಿಶೇಷತೆಗಳನ್ನು ಹೊಂದಿದ್ದು, ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಪ್ರತಿಶತ 100ರಷ್ಟು ಉದ್ಯೋಗ ಒದಗಿಸಿಕೊಟ್ಟ ಸಂಸ್ಥೆಯಾಗಿದೆ. ಸಂಸ್ಥೆಯಿಂದ ತರಬೇತಿಯನ್ನು ಪಡೆದ ವಿದ್ಯಾರ್ಥಿಗಳು ಇಂದು ಪ್ರತಿಷ್ಠಿತ ಖಾಸಗಿ ಕಂಪನಿಗಳಲ್ಲಿ ದೇಶ ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ತರಬೇತಿಗಳಿಗೆ ಸೇರುವ ಅರ್ಹ ಅಭ್ಯರ್ಥಿಗಳಿಗೆ ರಾಷ್ಟಿಕೃತ ಬ್ಯಾಂಕುಗಳಲ್ಲಿ ಶಿಕ್ಷಣ ಸಾಲದ ಸಹಾಯ ಕೂಡ ದೊರೆಯುತ್ತದೆ. ಈ ಕೋರ್ಸ್ಗಳು ಪೂರ್ಣಗೊಂಡ ನಂತರ ಉನ್ನತ ವಿದ್ಯಾಭ್ಯಾಸ ಮಾಡಲು ನೇರವಾಗಿ 3ನೇ ಸೇಮೆಸ್ಟರ್‌ಗೆ ಪಾರ್ಶ್ವ ಪ್ರವೇಶಾತಿಯ ಅವಕಾಶವೂ ನೀಡಲಾಗುವುದು. ಆಸಕ್ತರು ಅರ್ಜಿಯನ್ನು ಮೇ.15ರೊಳಗಾಗಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9902072101,7411421775ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಲಿಂಗಸುಗೂರು ಜಿಟಿಟಿಸಿ ಸಂಸ್ಥೆಯ ಪ್ರಾಂಶುಪಾಲರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್