ಗದಗ, 12 ಮೇ (ಹಿ.ಸ.)
ಆ್ಯಂಕರ್:
ಗದಗ- ಬೆಟಗೇರಿ ಅವಳಿ ನಗರ ಸೇರಿದಂತೆ ತಾಲೂಕು ಗ್ರಾಮ ಹಳ್ಳಿಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಾ ಸಾಗುತ್ತಿದ್ದು ಇದರಿಂದಾಗಿ ಅನೇಕ ಅನಾಹುತಗಳಿಗೆ ಕಾರಣವಾಗಿವೆ, ಸಂಬಂಧಪಟ್ಟ ಜಿಲ್ಲಾಡಳಿತ ಹಾಗೂ ಅಧಿಕಾರಿ ಸಿಬ್ಬಂದಿಗಳು ನಿರ್ಲಕ್ಷ ಯಾಕೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಬೀದಿ ನಾಯಿಗಳ ಹಾವಳಿಯಿಂದಾಗಿ ನಿನ್ನೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಚೋಳಿನವರ ಓಣಿಯ ನಿವಾಸಿ ಪ್ರೇಮಾ ಶರಣಪ್ಪ ಚೋಳಿನ (53) ಮೃತಪಟ್ಟಿದ್ದು, ಪ್ರೇಮಾ ಚೋಳಿನ ನಿನ್ನೆ ಬೆಳಗಿನ ಜಾವ ಮನೆ ಹತ್ತಿರ ಹೂ ಕೀಳುತ್ತಿದ್ದಾಗ ಬೀದಿ ನಾಯಿಗಳು ಸಾಮೂಹಿಕವಾಗಿ ದಾಳಿ ಮಾಡಿ,
ನೆಲಕ್ಕೆ ಬೀಳಿಸಿ ಕಚ್ಚಿವೆ.
ಬೀದಿ ನಾಯಿಗಳ ದಾಳಿಯಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಪ್ರೇಮಾ ಚೋಳಿನ ಅವರನ್ನು
ಸ್ಥಳೀಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತರಲಾಯಿತು. ಆದರೆ, ಚಿಕಿತ್ಸೆ
ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಬೀದಿ
ನಾಯಿಗಳ ಹಾವಳಿಯನ್ನು ಸಂಬಂಧಪಟ್ಟ
ಅಧಿಕಾರಿಗಳು ಹಾಗೂ ಪುರಸಭೆಯ ನಿರ್ಲಕ್ಷವೇ ಕಾರಣವೆಂದು ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಇಂತಹ ಘಟನೆಗಳು ಬೀದಿ ನಾಯಿಗಳ ಹಾವಳಿಂದ ಆಗುತ್ತಿದ್ದು ಮುಂಜಾನೆಯಲ್ಲಿ ವಾಯು ವಿಹಾರಕ್ಕೆ ಹೋಗುವ ವೃದ್ಧರು ಹಾಗೂ ಮಹಿಳೆಯರು ಮಕ್ಕಳ ಮೇಲೆ ಬೀದಿ ನಾಯಿಗಳು ಹಾವಳಿ ಮಾಡಿರುವ
ಘಟನೆಗಳು ಸಹ ಜಿಲ್ಲೆ ತಾಲೂಕು ಹಳ್ಳಿಗಳಲ್ಲಿ ಜರುಗುತ್ತಿವೆ.
ದ್ವಿಚಕ್ರ ವಾಹನ ಸವಾರರು ವಾಹನ ಚಾಲನೆ ಮಾಡುವಾಗ ಬೀದಿ ನಾಯಿಗಳು ಸಾಮೂಹಿಕವಾಗಿ ದಾಳಿ ಮಾಡವದರಿಂದ ಬಿದ್ದು ಗಾಯಗಳಾಗುವ ಹಾಗೂ ಅನಾಹುತಗಳಾಗುತ್ತಿರುವ ಘಟನೆಗಳು ಸಹ
ಜರುಗುತ್ತಿವೆ.
ಬೀದಿ ನಾಯಿಗಳ ಹಾವಳಿಗಳಿಂದಾಗಿ ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಲು ಸಹ ಹೆದರುವಂತಹ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದ್ದು ಸಂಬಂಧಪಟ್ಟ ಜಿಲ್ಲಾ ಆಡಳಿತ ಹಾಗೂ ನಗರಸಭೆ
ಪುರಸಭೆ ಗ್ರಾಮ ಪಂಚಾಯಿತಿಯವರು ಅಧಿಕಾರಿಗಳು ಗಮನಹರಿಸಿ ನಾಯಿಗಳ ಹಾವಳಿಯನ್ನು ತಪ್ಪಿಸಿ ಸಾರ್ವಜನಿಕರಿಗೆ
ಅನುಕೂಲಮಾಡಿಕೊಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Lalita MP