ಗದಗ, 12 ಮೇ (ಹಿ.ಸ.)
ಆ್ಯಂಕರ್:- ಗದಗನ ಬೆಟಗೇರಿಯ ಶ್ರೀ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯಲ್ಲಿ 2004-2005ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಅಭ್ಯಾಸ ಗೈದ ವಿದ್ಯಾರ್ಥಿಗಳು, ಶಿಕ್ಷಣ
ಸಂಸ್ಥೆಯಲ್ಲಿ ಗುರುವಂದನಾ ಕಾರ್ಯಕ್ರಮ
ಹಮ್ಮಿಕೊಂಡಿದ್ದರು.
ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ
ಮುಕ್ಕಣ್ಣೇಶ್ವರ ಮಠದ ಪೂಜ್ಯ ಶಂಕರಾನಂದ
ಸ್ವಾಮಿಗಳು ವಹಿಸಿ ಆಶೀರ್ವಚನ ನೀಡುತ್ತಾ ವಿದ್ಯಾರ್ಥಿಗಳು ಗುರುಗಳಕ್ಕಿಂತ ಉನ್ನತ ಸ್ಥಾನಕ್ಕೆ ಹೋಗಬೇಕು ಆವಾಗ ಗುರುಗಳಿಗೆ ಸಂತಸವಾಗುವುದು ಈ ನಿಟ್ಟಿನಲ್ಲಿ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು
ಸಾಧಿಸಿದ್ದು ವಿಶೇಷ ಪಾಶ್ಚಿಮಾತ್ಯ ಸಂಸ್ಕøತಿಗೆ
ಅಂಟಿಕೊಳ್ಳದೇ ನಮ್ಮ ದೇಶದ ಸಂಸ್ಕೃತಿಗೆ
ಅಂಟಿಕೊಳ್ಳಲು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ
ಶಿಕ್ಷಣ ಇಲಾಖೆಯ ನಿವೃತ್ತ ಡಿ.ಡಿ.ಪಿ.ಐ. ಎ. ಎನ್. ನಾಗರಳ್ಳಿ ಮಾತನಾಡಿ ಇಂದಿನ ದಿನಮಾನಗಳಲ್ಲಿ ಮಗ ಸೊಸೆ ಸ್ವದೇಶದಲ್ಲಿ ಅಥವಾ ವಿದೇಶಗಳಲ್ಲಿ ನೌಕರಿ ಮಾಡುತ್ತಿರುವುದು ಒಂದು ಕಡೆ ನೆಮ್ಮದಿ
ಇದ್ದರೆ ಅವರಲ್ಲಿ ಕೆಲವೊಂದು ಜನ ತಮ್ಮ
ತಂದೆ ತಾಯಿ ಮುಪ್ಪಾವಸ್ಥೆಯಲ್ಲಿ ಸೇವೆ ಸಲ್ಲಿಸದೇ ವೃದ್ಧಾಶ್ರವನ್ನು ಸೇರಿಸುತ್ತಾರೆ. ಅದರಿಂದ ವೃದ್ಧಾಶ್ರಮ ಸಂಖ್ಯೆ ಸಹ ಹೆಚ್ಚಳವಾಗುತ್ತಿದೆ ಅದ್ದರಿಂದ ಈ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ತಂದೆ ತಾಯಿ ಜೋಪಾನಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕೆಂದು ಕರೆ ನೀಡಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿದ್ದ
ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಮಾತನಾಡಿ ತಾವು ಅಭ್ಯಾಸಗೈದ ಶ್ರೀ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯ ಸಮಸ್ತ ಶಿಕ್ಷಕರುಗಳ ಹಾಗೂ ಅಂಧಿನ ವ್ಯವಸ್ಥೆ
ಮೆಲಕು ಹಾಕುವದರೊಂದಿಗೆ ತಮ್ಮ ಅಂದಿನ ವಿದ್ಯಾರ್ಥಿ ಜೀವನ ನೆನಪಿಸಿ ತಮಗೆ ಶಿಕ್ಷಣ ನೀಡಿದ ಗುರುಗಳಿಗೆ ಸ್ಮರಿಸಿ ವಂದಿಸಿದರು. ಅಕ್ಷರ ದಾಸೋಹದ ಶಂಕರ ಹಡಗಲಿ ಅವರು ಸಂದರ್ಭೋಚಿತವಾಗಿ ಮಾತನಾಡಿದರು.
ನಿವೃತ್ತ ಮತ್ತು 2005ನೇ ಸಾಲಿನಲ್ಲಿ ಶಿಕ್ಷಕರ ಪರವಾಗಿ ಸಿ.ಎಂ. ಮಾರನಬಸರಿ ಅವರು ಮಾತನಾಡಿ ಅಂದಿನ ವಿದ್ಯಾರ್ಥಿಗಳ
ಮತ್ತು ಶಿಕ್ಷಕರ ಬಾಂಧವ್ಯ ಮೆಲಕು ಹಾಕಿದರು.
ಅತಿಥಿಗಳಾಗಿ ಆಗಮಿಸಿದ ಗುರುವಂದನೆ
ಸ್ವೀಕರಿಸಿದ ಶ್ರೀಮತಿ ವೈ. ಆರ್. ಹಿರೇಗೌಡರ,
ಬಿ.ಎಲ್. ಹೊಸಳ್ಳಿ, ಸಿ.ಎಂ. ಮಾರನಬಸರಿ,
ಕೆ.ಎಂ. ಮೂಲಿಮನಿ, ವಿ.ಜಿ. ಕಾಂಬಳೇಕರ,
ಎಸ್. ಐ. ಹಡಪದ, ಆರ್.ಎಸ್. ರಜಪೂತ, ಎಚ್.ಎಸ್. ಬ್ಯಾಳಿ, ಎಸ್.ಎಂ. ಹರಿಜನ, ಆರ್.ಆರ್. ಮಿಠಡೆ, ಬಿ.ವೈ. ಶರಣಬಸಣ್ಣವರ ಸಂದರ್ಭೋಚಿತವಾಗಿ ಮಾತನಾಡಿ ಸನ್ಮಾನಕ್ಕೆ ಆಭಿನಂದನೆ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ
ಸಂಸ್ಥಾಪಕ ಗಣೇಶಸಿಂಗ್ ಬ್ಯಾಳಿ ಮಾತನಾಡಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಸಿಬ್ಬಂದಿ ಹಾಗೂ ಶಿಕ್ಷಣ ಪಡೆದ ವಿದ್ಯಾರ್ಥಿಗಳ ಸಹಾಯ ಸಹಕಾರದಿಂದ ಶಿಕ್ಷಣ ಸಂಸ್ಥೆ ಬೆಳೆಯಲು ಅವಕಾಶವಾಗಿದ್ದು ಅದಕ್ಕಾಗಿ ನಮ್ಮ ಸಿಬ್ಬಂದಿ ಹಾಗೂ ಸಮಸ್ತ ವಿದ್ಯಾರ್ಥಿ ವೃಂದಕ್ಕೆ ಸಂಸ್ಥೆಯ ಪರವಾಗಿ ಅಭಿನಂದಿಸುವೆ ಇದರಂತೆ ಮುಂದೆಯೂ
ಸಹಕಾರ ದೊರೆಯುವಂತೆ ಮನವಿ ಮಾಡಿದರು.
ಪ್ರಾರಂಭದಲ್ಲಿ ಗೌರಮ್ಮ ಕೊಳ್ಳಿ, ಸಂಗಡಿಗರಿಂದ ಪ್ರಾರ್ಥನೆ, ಮಹಮ್ಮದ ನದಾಫ್ ಅವರಿಂದ ಸ್ವಾಗತ, ಶ್ರೀಮತಿ ಎಸ್.ಎಂ. ಹಡಪದ ಅವರಿಂದ ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು.
ಹಳೇ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆಲ್ಲ
ನೆನಪಿನ ಕಾಣಿಕೆ ನೀಡಿ ಗೌರವಿಸುವುದಲ್ಲದೇ
ಶಾಲೆಯ ನೆನಪಿನಲ್ಲಿ ಪ್ರತಿಯೊಬ್ಬರೂ ಸಸಿಗಳನ್ನು ಪಡೆದುಕೊಂಡು ಹೋಗಿದ್ದು ವಿಶೇಷವಾಗಿತ್ತು.
---------------
ಹಿಂದೂಸ್ತಾನ್ ಸಮಾಚಾರ್ / Lalita MP