ಶಾಂತಿ, ಸಮಾನತೆ, ಏಕತೆಗಾಗಿ ಹೋರಾಡಿದವರು ಬುದ್ದ- ಶಾಸಕ ಕೆ. ರಾಘವೇಂದ್ರ ಹಿಟ್ನಾಳ
ಕೊಪ್ಪಳ, 12 ಮೇ (ಹಿ.ಸ.) : ಆ್ಯಂಕರ್ : ಶಾಂತಿ, ಸಮಾನತೆ, ಏಕತೆಗಾಗಿ ಹೋರಾಡಿದವರು ಭಗವಾನ್ ಬುದ್ದರೆಂದು ಇತಿಹಾಸದ ಚರಿತ್ರೆಗಳಲ್ಲಿದೆ ಎಂದು ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ತಿಳಿಸಿದ್ದಾರೆ. ಕೊಪ್ಪಳ ನಗರದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು
ಕೊಪ್ಪಳ: ಶಾಂತಿ, ಸಮಾನತೆ, ಏಕತೆಗಾಗಿ ಹೋರಾಡಿದವರು ಬುದ್ದರು- ಶಾಸಕ ಕೆ. ರಾಘವೇಂದ್ರ ಹಿಟ್ನಾಳ


ಕೊಪ್ಪಳ: ಶಾಂತಿ, ಸಮಾನತೆ, ಏಕತೆಗಾಗಿ ಹೋರಾಡಿದವರು ಬುದ್ದರು- ಶಾಸಕ ಕೆ. ರಾಘವೇಂದ್ರ ಹಿಟ್ನಾಳ


ಕೊಪ್ಪಳ, 12 ಮೇ (ಹಿ.ಸ.) :

ಆ್ಯಂಕರ್ : ಶಾಂತಿ, ಸಮಾನತೆ, ಏಕತೆಗಾಗಿ ಹೋರಾಡಿದವರು ಭಗವಾನ್ ಬುದ್ದರೆಂದು ಇತಿಹಾಸದ ಚರಿತ್ರೆಗಳಲ್ಲಿದೆ ಎಂದು ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ತಿಳಿಸಿದ್ದಾರೆ.

ಕೊಪ್ಪಳ ನಗರದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಶ್ರೀ ಭಗವಾನ್ ಬುದ್ದರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತದಲ್ಲಿ ಅನೇಕ ಧರ್ಮಗಳು, ಪಂಥಗಳಿವೆ. ಅವುಗಳೆಲ್ಲವನ್ನು ಸುಧಾರಿಸಿ ಹಾಗೂ ಒಂದುಗೂಡಿಸುವ ಕಲ್ಪನೆ ಗೌತಮ್ ಬುದ್ದನವರದ್ದಾಗಿತ್ತು. `ಆಸೆಯೆ ದುಃಖಕ್ಕೆ ಮೂಲ' ಎಂಬ ಗಾದೆ ಮಾತಿನಂತೆ ಯಾವುದೇ ಆಸೆಯಿಲ್ಲದೇ ಧರ್ಮವನ್ನು ಕಟ್ಟುವಂತಹ ಕೆಲಸವನ್ನು ಭಗವಾನ್ ಬುದ್ದರು ಮಾಡಿದ್ದಾರೆ.

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬೌದ್ದ ಧರ್ಮ ಸ್ವೀಕಾರ ಮಾಡಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಮೊಟ್ಟಮೊದಲನೇ ಬಾರಿಗೆ ಭಗವಾನ್ ಬುದ್ದರ ಜಯಂತಿಯನ್ನು ಸರ್ಕಾರದಿಂದ ಆಚರಿಸಲು ಅವಕಾಶ ಕಲ್ಪಿಸಿದ್ದಕ್ಕಾಗಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮಹನಿಯರ ಜಯಂತಿಗಳನ್ನು ಆಚರಿಸುವ ಮೂಲಕ ಅವರ ಚರಿತ್ರೆಗಳನ್ನು ಮೆಲಕು ಹಾಕಲು ಅವಕಾಶವಾಗಿದೆ ಎಂದರು.

ಬಸವಣ್ಣನವರಿಂದ ಡಾ. ಅಂಬೇಡ್ಕರ್ ರವರೆಗೆ ಹಲವಾರು ಮಹನಿಯರು ಸಮಾಜ ಸುಧಾರಣೆಗಾಗಿ ಹಾಗೂ ಸರ್ವರಿಗೂ ಸಮ ಬಾಳು ಸಮ ಪಾಲು ನೀಡಲು ಪ್ರಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವುದರ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಶಕ್ತಿ ತುಂಬುವಂತಹ ಕೆಲಸ ಮಾಡಿದೆ.

ಇಂತಹ ಮಹತ್ತರ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮೀ ಯೋಜನೆಯಡಿ ಬಂದ ಹಣವನ್ನು ಕೂಡಿಟ್ಟು ನಮ್ಮ ಜಿಲ್ಲೆಯ ಮಹಿಳೆಯೊಬ್ಬರು ತಮ್ಮ ಜಮೀನಿನಲ್ಲಿ ಬೋರ್ವೆಲ್ ಕೊರೆಯಿಸಿ ನೀರಾವರಿ ಕೃಷಿಯನ್ನು ಮಾಡುತ್ತಿದ್ದಾರೆ. ಅಲ್ಲದೇ ಈ ಯೋಜನೆಯ ಹಣದಿಂದ ಮಹಿಳೆಯರು ತಮ್ಮ ಮಕ್ಕಳಿಗೆ ಪುಸ್ತಕ, ಲ್ಯಾಪ್‌ಟ್ಯಾಪ್ ಕೊಡಿಸಿ, ಸರ್ಕಾರದ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಅವರು ಮಾತನಾಡಿ, ಭಗವಾನ್ ಬುದ್ದರು ರಾಜಾಡಳಿತವನ್ನು ಬಿಟ್ಟು ಸನ್ಯಾಸತ್ವವನ್ನು ಸ್ವೀಕರಿಸಿದರು. ಸಿದ್ಧಾರ್ಥ ಬುದ್ಧನಾಗಬೇಕಾದರೆ, ತನ್ನ ಸಾಮ್ರಾಜ್ಯದಲ್ಲಿನ ಜನರ ಕಷ್ಟದಲ್ಲಿರುವುದನ್ನು ಕಂಡು ತನ್ನ ರಾಜ್ಯವೈಭೋಗ ತೋರದು ತಡರಾತ್ರಿಯಲ್ಲಿ ಮನೆಬಿಟ್ಟು ಬಂದು ಜಗತ್ತಿಗೆ ಶಾಂತಿ ಬೋಧನೆಗಳನ್ನು ಮಾಡಿದರು. ಬುದ್ದ, ಬಸವ ಹಾಗೂ ಅಂಬೇಡ್ಕರ್ ರವರ ಮಾರ್ಗದರ್ಶನದಲ್ಲಿ ನಾವೆಲ್ಲರು ನಡೆಯಬೇಕು ಎಂದರು.

ಕೊಪ್ಪಳ ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್ ಅವರು ಮಾತನಾಡಿ, ಭಗವಾನ್ ಬುದ್ದ, ವಿಶ್ವಗುರು ಬಸವಣ್ಣ ಹಾಗೂ ವಿಶ್ವಜ್ಞಾನಿ ಡಾ. ಬಿ.ಆರ್. ಅಂಬೇಡ್ಕರ್ ರವರು ಈ ಭೂಮಿಗೆ ಅವತರಿಸಿದ ಮಹಾನ ಪುರುಷರಾಗಿದ್ದಾರೆ. ಜಗತ್ತಿಗೆ ಭಗವಾನ್ ಬುದ್ದರು ಅರಿವೆಂಬ ಬೆಳಕನ್ನು ನೀಡಿದ್ದಾರೆ. ಬಸವಣ್ಣನವರು ಮಾನವೀಯತೆಯ ಭಾವನೆಗಳನ್ನು ನೀಡಿದರೆ, ಅಂಬೇಡ್ಕರ್ ರವರು ಸಮಾನತೆಯನ್ನು ನೀಡಿದ್ದಾರೆ. ಬುದ್ದ ಎಂಬ ಪದದ ಅರ್ಥ ತಿಳಿದವನು, ಜ್ಞಾನಿ, ಅರಿತವನು ಎಂದರ್ಥ. ಇಂತಹ ಮಹನೀಯರ ಮಾರ್ಗದಲ್ಲಿ ನಡೆದರೆ, ನಮ್ಮ ಜೀವನ ಯಶಸ್ವಿಯಾಗುತ್ತದೆ ಎಂದರು.

ಕೊಪ್ಪಳ ಶಿಕ್ಷಣಾಧಿಕಾರಿ ಶಂಕರಯ್ಯ ಟಿ.ಎಸ್. ಅವರು ಶ್ರೀ ಭಗವಾನ್ ಬುದ್ದರ ಕುರಿತು ವಿಶೇಷ ಉಪನ್ಯಾಸ ನೀಡಿ, 2500 ವರ್ಷಗಳ ಹಿಂದೆ ಕ್ರಿ.ಪೂ 563 ರಲ್ಲಿ ವೈಶಾಖ ಪೂರ್ಣಿಮೆ ದಿನದಂದು ಭಗವಾನ್ ಬುದ್ದರ ಜನನವಾಯಿತು. ಈ ದಿನ ಜಗತ್ತಿಗೆ ದೊಡ್ಡ ಜ್ಯೋತಿ ನೀಡುವ ಸಂಕೇತವಾಗಿದೆ. ಮೇಲು-ಕೀಳು, ಬಡವ-ಬಲ್ಲಿಗ, ಬಂಡವಾಳ ಶಾಹಿ ಮತ್ತು ಕಾರ್ಮಿಕ ವರ್ಗ, ಹೀಗೆ ವಿವಿಧ ವರ್ಗಗಳಲ್ಲಿ ತಾರತಮ್ಯ, ಸಮಾನತೆಗಳು, ಅಸಹಿಷ್ಣತೆಗಳು ತುಂಬಿರುವಂತಹ ಕಾಲದಲ್ಲಿ ಇಡೀ ಪ್ರಪಂಚದಲ್ಲಿರುವ ಎಲ್ಲಾ ಮನುಷ್ಯರು ಸರ್ವ ಸ್ವತಂತ್ರರು, ಸಮಾನರು. ಇವರೆಲ್ಲರು ಕೂಡ ಸ್ವತಂತ್ರ, ಸಮಾನತೆ ಮತ್ತು ಸಹಬಾಳ್ವೆಯಿಂದ ಬಧುಕಬೇಕು. ಒಬ್ಬ ಮನುಷ್ಯ, ಇನ್ನೊಬ್ಬ ಮನುಷ್ಯನನ್ನು ಮನುಷ್ಯತ್ವದ ಗುಣಗಳಿಂದ ಕಾಣಬೇಕೆಂದು ಬೋಧನೆ ಮಾಡಿರುವ ಏಕೈಕ ವ್ಯಕ್ತಿ ಭಗವಾನ್ ಬುದ್ದರು ಆಗಿದ್ದಾರೆಂದು ವಿವರವಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕೊಪ್ಪಳ ನಗರಸಭೆ ಸದಸ್ಯರಾದ ಸಿದ್ದಣ್ಣ ಮ್ಯಾಗೇರಿ, ಮುತ್ತುರಾಜ ಕುಷ್ಟಗಿ, ರಾಜಶೇಖರ ಆಡೂರ, ಗುರುರಾಜ ಹಲಗೇರಿ, ಅಕ್ಬರಪಾಶಾ ಪಲ್ಟನ್, ಸಮಾಜದ ಮುಖಂಡರಾದ ಯಲ್ಲಪ್ಪ ಬಳಗನೂರ, ಸಿದ್ರಾಮಪ್ಪ ಹೊಸಮನಿ, ರಾಮಣ್ಣ ಕಲ್ಲಣ್ಣವರ್, ಜಿ.ಎಂ.ಬೆಲ್ಲದ್, ಪ್ರಸನ್ನ ಗಡಾದ್, ಶಿವಣ್ಣ ಹಂದ್ರಾಳ, ಯಲ್ಲಮ್ಮ ಗಿಣಿಗೇರಿ, ಮಹಾಲಕ್ಷ್ಮೀ ಕಂದಾರಿ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande