ವಿಜಯಪುರ, 11 ಮೇ (ಹಿ.ಸ.) :
ಆ್ಯಂಕರ್ : ಭಾರತದಲ್ಲಿ ಈಗ ಯುದ್ಧದ ಪರಿಸ್ಥಿತಿಯಿದೆ. ಪಾಕಿಸ್ಥಾನದ ದಾಳಿಗೆ ಭಾರತ ಪ್ರತಿ ದಾಳಿ ಮೂಲಕ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದೆ. ಇವುಗಳ ಮಧ್ಯೆ ಭಾರತವನ್ನು ಅಸ್ಥಿರಗೊಳಿಸುವ ಸಂಚಿನ ಭಾಗವಾಗಿ ಸುಳ್ಳು ಮಾಹಿತಿಗಳು, ವದಂತಿಗಳು ವ್ಯಾಪಕವಾಗಿ ಹರಡುತ್ತಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಮನವಿ ಮಾಡಿದ್ದಾರೆ.
ಪೆಟ್ರೋಲ್, ಎಲ್‌ಪಿಜಿ ಕೊರತೆ, ಬ್ಯಾಂಕ್ ಸೇವೆ ಸ್ಥಗಿತ ಎಂಬೆಲ್ಲ ಸುದ್ದಿಗಳು ಭಾರತದ ನಾಗರಿಕರನ್ನು ಭಯ ಭೀತಗೊಳಿಸುವ ಡಿಜಿಟಲ್ ಯುದ್ಧವಾಗಿದೆ. ಈ ರಕ್ತ ರಹಿತ ಯುದ್ಧಕ್ಕೆ ನಾವು ಭಾರತೀಯರು ಬಲಿಯಾಗದಂತೆ ಎಚ್ಚರ ವಹಿಸಬೇಕಿದೆ. ಈ ಕ್ಷಣದಲ್ಲಿ ದೇಶದೊಂದಿಗೆ, ಭಾರತ ಸರ್ಕಾರದೊಂದಿಗೆ, ಸೈನಿಕರೊಂದಿಗೆ ನಾವು ನಿಲ್ಲಬೇಕಿದೆ. ಜೈ ಹಿಂದ್ 🇮🇳 ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande