ಗದಗ, 11 ಮೇ (ಹಿ.ಸ.) :
ಆ್ಯಂಕರ್ : ಶ್ರೀರಾಮ ಸೇನಾ, ಅಟೋ ಸೇನಾ ಹಾಗೂ ದಲಿತ ಮಿತ್ರ ಮೇಳ ವತಿಯಿಂದ ಜಾತ್ರೆ ನೆಪದಲ್ಲಿ ತಿಂಗಳಾನುಗಟ್ಟಲೆ ಸಾರ್ವಜನಿಕ ರಸ್ತೆಯಲ್ಲಿ ಅನ್ಯ ಧರ್ಮದ, ಅನ್ಯ ರಾಜ್ಯ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳಿಗೆ ಪೋಲೀಸ್ ಇಲಾಖೆ ಸಮಯದ ಗಡವನ್ನು ನೀಡದೇ ಸ್ಥಳೀಯ ವ್ಯಾಪಾರಸ್ಥರಿಗೆ ರಾತ್ರಿ 10:೦೦ ಗಂಟೆಗೆ ಮಳಿಗೆಗಳ ಮುಂದೆ ಬಂದು ಅಂಗಡಿಯನ್ನು ಮುಚ್ಚಿಸುತಾ ಪೋಲೀಸ್ ಇಲಾಖೆ ತಾರತಮ್ಯ ನೀತಿಯನ್ನು ಅನುಸರಿಸಿ ಸ್ಥಳೀಯ ವ್ಯಾಪಾರಿಗಳು ಹೊಟ್ಟೆ ಮೇಲೆ ಕಲ್ಲು ಹಾಕುತ್ತಿದ್ದಾರೆ ಎಂದು ಎರಡನೇ ದಿನದ ಅನಿರ್ದಿಷ್ಟಾವಧಿ ಕಾಲ ಧರಣಿಯಲ್ಲಿ ಗದಗ ಜಿಲ್ಲಾ ಶ್ರೀರಾಮ ಸೇನಾ ಜಿಲ್ಲಾಧ್ಯಕ್ಷ ಸೋಮು ಗುಡಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶ್ರೀರಾಮ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ, ದಲಿತ ಮಿತ್ರ ಮೇಳ ಅಧ್ಯಕ್ಷರಾದ ಕುಮಾರ ನಡಗೇರಿ, ಉಪಾಧ್ಯಕ್ಷ ವೆಂಕಟೇಶ ದೊಡ್ಡಮನಿ, ಸತೀಶ ಕುಂಬಾರ, ಕಿರಣ ಹಿರೇಮಠ, ಶ್ರೀರಾಮ ಗದಗ ತಾಲೂಕಾಧ್ಯಕ್ಷ ಭರತ ಲದ್ದಿ, ಶಿವಯೋಗಿ ಹಿರೇಮಠ, ಮಂಜು ಗುಡಿಮನಿ, ಈರಣ್ಣ ಗಾಣೀಗೇರ, ಸಂಜು ಸೂರ್ಯವಂಶಿ, ಕುಮಾರ ಮಿಟ್ಟಿಮಠ, ಮಹಾಂತೇಶ ಹೊನ್ನಪ್ಪನವರ, ಮಂಜು ಪೂಜಾರ ಆಟೋ ಸೇನಾ ಜಿಲ್ಲಾಧ್ಯಕ್ಷರಾದ ಮಹಾಬಲೇಶ್ವರ ಶೆಟ್ಟರ, ಪ್ರಕಾಶ ಗುಜರಾತಿ, ಬಸವರಾಜ ಬನ್ನಿಮರದ ಮುಂತಾದ ಶ್ರೀರಾಮ ಸೇನಾ, ಆಟೋ ಸೇನಾ ಹಾಗೂ ದಲಿತ ಮಿತ್ರ ಮೇಳ ಕಾರ್ಯಕರ್ತರು ಅನಿರ್ದಿಷ್ಟಾವಧಿ ಕಾಲ ಧರಣಿಗೆ ಸಾಥ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Lalita MP