ಗದಗ, 11 ಮೇ (ಹಿ.ಸ.) :
ಆ್ಯಂಕರ್ : ಜಮು-ಕಾಶ್ಮೀರ ದ ಪಹಲ್ಟಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನಾಪಡೆಗಳು ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಮೂಲಕ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಒಂಬತ್ತು ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಿರುವುದು ಶ್ಲಾಘನೀಯ ಕಾರ್ಯಾಚರಣೆಯಾಗಿದೆ ಎಂದು ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಭಾರತೀಯ ಸೈನಿಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಭಾರತದ ಕಿರೀಟಪ್ರಾಯವಾದ ಜಮ್ಮು-ಕಾಶ್ಮೀರದ ಪಹಲ್ಟಾಮ್‌ನಲ್ಲಿನ ಘಟನೆಯಲ್ಲಿ ಭಾರತೀಯ ಮಹಿಳೆಯರ ಸಿಂಧೂರ ಅಳಿಸಿದ ಉಗ್ರ ಸಂಘಟನೆಗಳಿಗೆ ಮತ್ತು ಆಂತರಿಕವಾಗಿ ಉಗ್ರವಾದಕ್ಕೆ ಬೆನ್ನೆಲುಬಾಗಿರುವ ಪಾಕಿಸ್ತಾನಕ್ಕೆ, ಉಗ್ರರ ನೆಲೆಗಳನ್ನು ನಾಶಪಡಿಸುವ ಮೂಲಕ ಹಾಗೂ ದೇಶದ ನಾಗರಿಕರ ಹಾಗೂ ಮುಗ್ಧ ಪ್ರವಾಸಿಗರನ್ನು ಗುರಿಯಾಗಿಸಿ ದಾಳಿ ಮಾಡಿ 26 ಜನ ನಾಗರಿಕರನ್ನು ಹತ್ಯೆಗೈದ ಉಗ್ರರಿಗೆ ಆಪರೇಷನ್ ಸಿಂಧೂರ ದಾಳಿಯ ಮೂಲಕ ಯಶಸ್ವಿ ಕಾರ್ಯಾಚರಣೆ ಕೈಗೊಂಡು ಭಾರತೀಯರಿಗೆ ನೆಮ್ಮದಿಯನ್ನು ದೊರಕಿಸಿದ ಭಾರತೀಯ ಸೈನಿಕರೆಲ್ಲರೂ ಅಭಿನಂದನಾರ್ಹರು.
ಪಾಕಿಸ್ತಾನ ಇಲ್ಲಿಗೇ ತನ್ನ ಕೆಟ್ಟ ಚಾಳಿಯನ್ನು ಕೈಬಿಟ್ಟರೆ ಒಳ್ಳೆಯದು. ಇಲ್ಲವಾದರೆ ಇದರ ಅಂತ್ಯ ಇನ್ನೂ ಘೋರವಾಗಿರುತ್ತದೆ. ಭಯೋತ್ಪಾದಕತೆಯನ್ನು ಮಟ್ಟ ಹಾಕಲು ಪಣತೊಟ್ಟಿರುವ ಭಾರತೀಯ ಸೈನಿಕರಿಗೆ ಪಕ್ಷಾತೀತವಾಗಿ ದೇಶದ ಸಮಸ್ತ ನಾಗರಿಕರು ಬೆಂಬಲಿಸಬೇಕು ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Lalita MP