ಉಚಿತವಾಗಿ ಯೋಗ ಶಿಬಿರ ಆಯೋಜನೆ
Free yoga camp organized
ಪೋಟೋ


ಗದಗ, 11 ಮೇ (ಹಿ.ಸ.) :

ಆ್ಯಂಕರ್ : ಶ್ರೀಮನ್ನಿರಂಜನ ಯಳಂದೂರು ಬಸವಲಿಂಗ ಮಹಾಸ್ವಾಮಿಗಳವರ ಸ್ಮಾರಕ ಯೋಗಪಾಠಶಾಲೆ ಗದಗ ಸಂಸ್ಥೆಯ ಸುವರ್ಣ ಮಹೋತ್ಸವ ಆಚರಣೆ ಪ್ರಯುಕ್ತ ಗದಗ ಜಿಲ್ಲೆಯಾದ್ಯಂತ ಗದಗ ಶಹರ ಮತ್ತು ಗ್ರಾಮೀಣ ವಲಯದಲ್ಲಿನ ಕಾರ್ಯನಿರತ ವಿವಿಧ ಯೋಗ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಸೂಕ್ತವಾದ ಬೇರೆ ಬೇರೆ ಸ್ಥಳಗಳಲ್ಲಿ ಮೇ 12ರಿಂದ ಒಂದು ವಾರ ಪ್ರತಿದಿನ ಬೆಳಿಗ್ಗೆ 6ರಿಂದ 7.10ರವರೆಗೆ ಉಚಿತ ಆರೋಗ್ಯ-ಯೋಗ ತರಬೇತಿ ಶಿಬಿರ ಏರ್ಪಡಿಸಲಾಗಿದೆ.

ಶಿಬಿರಗಳು ಮುಖ್ಯವಾಗಿ ಸ್ಥಳೀಯ ಮುನ್ಸಿಪಲ್ ಮೈದಾನ, ಕಾಶೀವಿಶ್ವನಾಥ ಸಮುದಾಯ ಭವನ ವಿವೇಕಾನಂದ ನಗರ, ವೀರಭದ್ರೇಶ್ವರ ದೇವಸ್ಥಾನ ಬಸವೇಶ್ವರ ನಗರ, ತೋಂಟದಾರ್ಯ ಮಠದಲ್ಲಿನ ಶಿವಾನುಭವ ಮಂಟಪ, ಓಂಕಾರೇಶ್ವರ ಹಿರೇಮಠ . ಆದಿತ್ಯನಗರ, ನೀಲಕಂಠೇಶ್ವರಮಠ ಬೆಟಗೇರಿ, ಶ್ರೀನಿವಾಸ ಭವನ ಮತ್ತು ಮುಳಗುಂದ, ಮುಂಡರಗಿ, ಅಂತೂರ-ಬೆಂತೂರ, ಹುಲಕೋಟಿ, ನೀಲಗುಂದ, ಕೋಟುಮಚಗಿ, ಪಾಪನಾಶಿ, ಅಬ್ಬಿಗೇರಿ ಸೇರಿದಂತೆ ಒಟ್ಟು 25 ಸ್ಥಳಗಳಲ್ಲಿ ಏಕಕಾಲಕ್ಕೆ ನಡೆಯಲಿವೆ.

ಆಸಕ್ತರು ತಮಗೆ ಅನುಕೂಲಕರವಾದ ಸ್ಥಳಗಳಲ್ಲಿನ ಶಿಬಿರದಲ್ಲಿ ಪಾಲ್ಗೊಂಡು ಹೆಚ್ಚಿನ ಪ್ರಯೋಜನ ಪಡೆಯಲು ಕೋರಿದೆ. ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳೆಲ್ಲರೂ ಮೇ. 19ರಂದು ಬೆಳಿಗ್ಗೆ 10.30 ಗಂಟೆಗೆ ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಶಿವಾನುಭವ ಮಂಟಪ, ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದಲ್ಲಿ ನಡೆಯುವ ಎಸ್.ವಾರ್ಯ.ಬಿ.ಎಂ.ಎಸ್ ಯೋಗ ಪಾಠಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಎಸ್. ಎಸ್. ಪಟ್ಟಣಶೆಟ್ಟಿ, ಕಾರ್ಯದರ್ಶಿ ಕೆ.ಎಸ್. ಪಲ್ಲೇದ ವಿನಂತಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande