ಭಾರತೀಯ ಸೈನಿಕರಿಗೆ ಬ್ರಹ್ಮ ಸಮಾಜದಿಂದ ಅಭಿನಂದನೆ
ಗದಗ, 11 ಮೇ (ಹಿ.ಸ.) : ಆ್ಯಂಕರ್ : ಭಾರತೀಯ ಮಹಿಳೆಯರ ಸಿಂಧೂರವನ್ನು ಅಳಿಸಿ ಹಾಕಿದ ನರಹಂತಕ ಉಗ್ರರ ವಿರುದ್ಧ ಅದೇ ಸಿಂಧೂರದ ಹೆಸರಿನಲ್ಲಿ ಪ್ರತೀಕಾರದ ಕ್ರಮವನ್ನು ಕೈಗೊಂಡು ಯಶಸ್ವಿಯಾಗಿರುವ ಭಾರತೀಯ ಸೈನಿಕರಿಗೆ ಇಲ್ಲಿನ ಬ್ರಹ್ಮ ಸಮಾಜ ಹೃತ್ತೂರ್ವಕವಾದ ಅಭಿನಂದನೆಯನ್ನು ಸಲ್ಲಿಸಿತು. ಗದಗ ಜಿಲ್ಲೆ ನರೇಗಲ್
ಪೋಟೋ


ಗದಗ, 11 ಮೇ (ಹಿ.ಸ.) :

ಆ್ಯಂಕರ್ : ಭಾರತೀಯ ಮಹಿಳೆಯರ ಸಿಂಧೂರವನ್ನು ಅಳಿಸಿ ಹಾಕಿದ ನರಹಂತಕ ಉಗ್ರರ ವಿರುದ್ಧ ಅದೇ ಸಿಂಧೂರದ ಹೆಸರಿನಲ್ಲಿ ಪ್ರತೀಕಾರದ ಕ್ರಮವನ್ನು ಕೈಗೊಂಡು ಯಶಸ್ವಿಯಾಗಿರುವ ಭಾರತೀಯ ಸೈನಿಕರಿಗೆ ಇಲ್ಲಿನ ಬ್ರಹ್ಮ ಸಮಾಜ ಹೃತ್ತೂರ್ವಕವಾದ ಅಭಿನಂದನೆಯನ್ನು ಸಲ್ಲಿಸಿತು.

ಗದಗ ಜಿಲ್ಲೆ ನರೇಗಲ್ ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಶ್ರೀ ದತ್ತಭಕ್ತ ಮಂಡಳಿಯ ಅಧ್ಯಕ್ಷ ಡಾ. ನಾಗರಾಜ ಗ್ರಾಮಪುರೋಹಿತ ಡಾ. ನಾಗರಾಜ ಮಾತನಾಡಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ಸರಕಾರ ಉಗ್ರರ ಬೆಂಬಲಿಗರಿಗೆ ತಕ್ಕ ಪಾಠವನ್ನು ಕಲಿಸುತ್ತಿದೆ. ಪಹಲ್ಲಾಮ ದಾಳಿಯಲ್ಲಿ ಪಾಲ್ಗೊಂಡ ಆ ನಾಲ್ವರು ಉಗ್ರರನ್ನು ಸದೆಬಡಿಯಬೇಕು. ಅವರಿಂದ ನೊಂದು-ಬೆಂದ ಕುಟುಂಬದವರಿಗೆ ಸಾಂತ್ವನ ನೀಡಬೇಕು ಎಂದರು.

ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ್ದ ಬ್ರಹ್ಮ ಸಮಾಜವು ಸೈನಿಕರಿಗೆ ಇನ್ನಷ್ಟು ಬಲವನ್ನು ತುಂಬಲು ಶ್ರೀ ದತ್ತಾತ್ರೇಯನಲ್ಲಿ ಪ್ರಾರ್ಥಿಸಿತು.

ರಘುನಾಥ ಮಾತನಾಡಿ, ಮನುಷ್ಯತ್ವವನ್ನೇ ಕೊಂಡಿ ಉಗ್ರರು ಮರೆತ ರಕ್ತ ಪಿಪಾಸುಗಳು. ಅವರಿಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನಕ್ಕೆ ಎಂದಿಗೂ ಅಪರಾಧಿ ಮನೋಭಾವ ಕಾಡಿಲ್ಲ. ತನ್ನ ದೇಶದಲ್ಲಿ ಉಗ್ರರಿದ್ದರೆ ಇಡೀ ಜಗತ್ತೇ ತನಗೆ ಹೆದರುತ್ತದೆ ಎಂಬ ಧೋರಣೆಯನ್ನು ಅದು ಎಂದಿನಿಂದಲೂ ಬೆಳೆಸಿಕೊಂಡು ಬಂದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಹಲ್ಲಾಮ ದಾಳಿಯ ನಂತರ ಘೋಷಿಸಿದಂತೆ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ ನಡೆಸುವ ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಟ್ಟಿದ್ದಾರೆ. ಅದರ ಸೊಕ್ಕು ಮುರಿಯಬೇಕಾದರೆ ನಮ್ಮ ಸೈನಿಕರು ಪಾಕಿಸ್ತಾನವನ್ನೇ ನಿರ್ನಾಮ ಮಾಡಬೇಕು. ಅಂದರೆ ಜಗತ್ತಿನಲ್ಲಿ ಉಗ್ರವಾದ ನಿಲ್ಲುತ್ತದೆ ಎಂದರು.

ಆರ್ಚಕ ಶ್ರೀವಲ್ಲಭಭಟ್ಟ ಸದರಜೋಷಿ ವಿಶೇಷ ಪೂಜೆ ನೆರವೇರಿಸಿದರು. ಶ್ರೀಪಾದಭಟ್ಟ ಈವೇಳೆ ಜೋಷಿ, ಶ್ರೀಪಾದ ಕುಲಕರ್ಣಿ, ಅರುಣ ಕುಲಕರ್ಣಿ(ಕುರಗಡ್ಡಿ), ಆನಂದ ಕುಲಕರ್ಣಿ, ಮುಕುಂದಭಟ್ಟ ಸೂರಭಟ್ಟನವರ, ನಾಗೇಶಭಟ್ಟ ಗ್ರಾಮಪುರೋಹಿತ, ಪ್ರಶಾಂತ ಗ್ರಾಮಪುರೋಹಿತ, ಅಜಿತ ಕುಲಕರ್ಣಿ, ರಾಮಕೃಷ್ಣ ಸದರಜೋಷಿ, ಅರುಣ ಕುಲಕರ್ಣಿ, ಶೋಭಾ ಕುಲಕರ್ಣಿ, ಕುಲಕರ್ಣಿ, ಗ್ರಾಮಪುರೋಹಿತ, ಕುಲಕರ್ಣಿ, ಅನಿತಾ ರಾಜಶ್ರೀ ಪರಿಮಳಾ ಗ್ರಾಮಪುರೋಹಿತ, ಪದ್ಮಾ ಕುಲಕರ್ಣಿ, ಪ್ರಭಾ ರಾಯಭಟ್ಟನವರ, సివికా ಗ್ರಾಮಪುರೋಹಿತ, ಜ್ಯೋತಿ ನಾಡಿಗೇರ, ರೂಪಾ ಗ್ರಾಮಪುರೋಹಿತ, ಜಯಶ್ರೀ ಗ್ರಾಮಪುರೋಹಿತ, ಸನ್ನತಿ ಸದರಜೋಷಿ, ವಿಮಲಾಬಾಯಿ ಗ್ರಾ ವ ಪುರೋಹಿತ, ಇನ್ನಿತರರಿದ್ದರು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande