ಚನ್ನಗಿರಿ, 11 ಮೇ (ಹಿ.ಸ.) :
ಆ್ಯಂಕರ್ : ಪ್ರಸಕ್ತ ಸಾಲಿನ ಶೈಕ್ಷಣಿಕ ಸಾಲಿಗೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಐಟಿಐ ಪ್ರವೇಶಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಎನ್‍ಸಿವಿಟಿ ಯಿಂದ ಸಂಯೋಜನೆ ಪಡೆದ 2 ವರ್ಷದ ವಿವಿಧ ವೃತ್ತಿಗಳಿಗೆ ಸರ್ಕಾರಿ ಐಟಿಐ ಕಾಲೇಜು ಚನ್ನಗಿರಿ ಅಥವಾ ಹತ್ತಿರದ ಸೈಬರ್ ಸೆಂಟರ್‍ನಲ್ಲಿ ಅರ್ಜಿಯನ್ನು ಪಡೆದು ಮೇ.28 ರೊಳಗಾಗಿ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಚನ್ನಗಿರಿ ಮೊ.ಸಂ:9844710844, 9738782540 ನ್ನು ಸಂಪರ್ಕಿಸಲು ತರಬೇತಿ ಅಧಿಕಾರಿ ಮನೋಹರ್.ಹೆಚ್ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa