ಪಶು ಪಾಲನಾ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರ ತನಿಖೆಗೆ ರೈತ ಸಂಘದ ಒತ್ತಾಯ
ಪಶು ಪಾಲನಾ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರ ತನಿಖೆಗೆ ರೈತ ಸಂಘದ ಒತ್ತಾಯ
ಪಶುಪಾಲನಾ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲು ಕೋಲಾರ ಜಿಲ್ಲೆ ಬಂಗಾರಪೇಟೆಯಲ್ಲಿ ನಡೆದ ಸಭೆಯಲ್ಲಿ ರೈತ ಸಂಘದ ಕಾರ್ಯಕರ್ತರು ಒತ್ತಾಯಿಸಿದರು.


ಕೋಲಾರ, ಮೇ ೧೦ (ಹಿ.ಸ) :

ಆ್ಯಂಕರ್ : ಪಶುಪಾಲನಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಸಮರ್ಪಕ ಗ್ರಾಮೀಣ ಪಶು ವೈದ್ಯಕೀಯ ಸೇವೆ ಸಲ್ಲಿಸುವ ಜೊತೆಗೆ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರ ತನಿಖೆ ಮಾಡಲು ವಿಶೇಷ ತಂಡ ರಚನೆ ಮಾಡಬೇಕೆಂದು ಮೇ-೧೫ ರ ಗುರುವಾರ ಜಾನುವಾರುಗಳ ಸಮೇತ ಪಶು ಇಲಾಖೆ ಮುತ್ತಿಗೆ ಹಾಕಲು ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಬಂಗಾರಪೇಟೆ ನಗರದ ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆ ಆವರಣದಲ್ಲಿ ಕರೆದಿದ್ದ ಸಭೆೆಯಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಪಶು ಇಲಾಖೆಯಲ್ಲಿ ಖಾಲಿ ಹುದ್ದೆಗಳ ನೆಪದಲ್ಲಿ ಗಡಿಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕವಾದ ಪಶು ವೈದ್ಯಕೀಯ ಸೇವೆ ಸಿಗದೆ ಹಸುಗಳ ರಕ್ಷಣೆಗಾಗಿ ಬಡ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಖಾಸಗಿ ಪಶು ವೈದ್ಯರನ್ನು ಅವಲಂಭಿಸಬೇಕಾದ ಪರಿಸ್ತಿತಿ ಇದ್ದರೂ, ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಪಶು ಸಚಿವರು ವಿಫಲವಾಗಿದ್ದಾರೆಂದು. ಅವ್ಯವಸ್ಥೆ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.

ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಹಾಯಕ ನಿರ್ದೇಶಕರಾದ ಡಾ. ರಾಮು ರವರ ಗಮನಕ್ಕೆ ಪಶು ಇಲಾಖೆಯ ಅವ್ಯವಸ್ತೆ ವಿರುದ್ದ ಗಮನಕ್ಕೆ ತಂದರೆ ಸ್ಥಳೀಯ ಶಾಸಕರ ಅನುಮತಿ ಇಲ್ಲದೆ ಯಾವುದೇ ನಿರ್ಧಾರ ಕೈಗೊಳ್ಳಲ್ಲ ಎಂಬ ಬೇಜವಬ್ದಾರಿ ಉತ್ತರ ನೀಡುವುದರ ಜೊತೆಗೆ ಸರ್ಕಾರದಿಂದ ಬರುವ ಗ್ರಾಮೀಣ ಪಶುಗಳ ಔಷಧಿಗಳು ಮ್ಯಾಟ್‌ಗಳು ಮತ್ತಿತರ ಎಲ್ಲಾ ಸೌಲಭ್ಯಗಳನ್ನು ರೈತರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಬರುವ ಅನುದಾನಗಳಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡುವ ದೊಡ್ಡ ಜಾಲವೇ ಪಶು ಇಲಾಖೆಯಲ್ಲಿ ಹತ್ತಾರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆಂದು ಆರೋಪ ಮಾಡಿದರು.

ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಮಾತನಾಡಿ ಪಶು ಇಲಾಖೆ ಅಲ್ಲಿನ ಸಿಬ್ಬಂದಿಗೆ ಚಿನ್ನದ ಮೊಟ್ಟೆ ಇಡುವ ಇಲಾಖೆಯಾಗಿ ಮಾರ್ಪಟ್ಟಿದೆ. ಪ್ರತಿ ಹೆಜ್ಜೆ ಹೆಜ್ಜೆಗೂ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮೀಣ ಸೇವೆ ಮಾಡಬೇಕಾದ ವೈದ್ಯರು ನಾಪತ್ತೆಯಾಗಿದ್ದಾರೆ. ಇನ್ನು ಗಡಿಭಾಗದ ಪಶು ಇಲಾಖಾ ಕೇಂದ್ರಗಳಲ್ಲಿ ಗುತ್ತಿಗೆ ನೌಕರರೇ ಪಶು ವೈದ್ಯರಾಗಿ ಕೆಲಸ ನಿರ್ವಹಿಸಿ ಅಲ್ಲಿ ಕೆಲಸ ನಿರ್ವಹಿಸಬೇಕಾದ ವೈದ್ಯರು ಗ್ರಾಮೀಣ ಸೇವೆಗೆ ಇದ್ದು ಇಲ್ಲದಂತಾಗಿದ್ದಾರೆ0ದು ಆಕ್ರೋಷ ವ್ಯಕ್ತಪಡಿಸಿದರು.

ಹಸುಗಳಿಗೆ ಬೇಸಿಗೆಯಲ್ಲಿ ಬಾದಿಸುತ್ತಿರುವ ಚರ್ಮರೋಗ, ಗಂಟು ರೋಗ ಹಾಗೂ ಕೆಚ್ಚಲಬಾವು ಒಂದು ಕಡೆಯಾದರೆ, ಮೊತ್ತೊಂದು ಕಡೆ ಗರ್ಭ ಧರಿಸುವ ಹಸುಗಳಿಗೆ ಕರು ಹಾಕಿದಾಗ ಅದಕ್ಕೆ ಚಿಕಿತ್ಸೆ ನೀಡಬೇಕಾದರೆ ಬಡವನು ೫೦ ಸಾರಿ ವೈದ್ಯರಿಗೆ ಕರೆ ಮಾಡಿದರೂ ಕರೆ ಸ್ವೀಕರಿಸುವುದಿಲ್ಲ. ಕಡೆಯದಾಗಿ ಹಸು ರಕ್ಷಣೆಗೆ ರೈತನು ಆಂಧ್ರ, ತಮಿಳುನಾಡು ಮೂಲದ ನಕಲಿ ಪಶು ವೈದ್ಯರನ್ನು ಅವಲಂಭಿತಬೇಕಾದ ಪರಿಸ್ಥಿತಿ ಜೊತೆಗೆ ಸರ್ಕಾರದಿಂದ ಬರುವ ಔಷಧಿಗಳನ್ನು ಸಮರ್ಪಕವಾಗಿ ವಿತರಣೆ ಮಾಡದೆ ಗೋದಾಮುಗಳಲ್ಲಿ ಅವಧಿ ಮೀರುತ್ತಿದೆ. ಜೊತೆಗೆ ಆ ಔಷದಿಗಳನ್ನು ರೈತರ ಲೆಕ್ಕದಲ್ಲಿ ದಾಖಲೆ ತೋರಿಸಿ ಖಾಸಗಿ ಮೆಡಿಕಲ್ ಸ್ಟೋರ್‌ಗಳಿಗೆ ಮಾರಾಟ ಮಾಡುವ ದಂದೆಯನ್ನು ಮಾಡಿಕೊಂಡಿದ್ದಾರೆAದು ಕಿಡಿಕಾರಿದರು.

ಹತ್ತಾರು ವರ್ಷಗಳಿಂದ ಇಲಾಖೆಯಲ್ಲಿ ಬೇರೆ ಬಿಟ್ಟು ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ ನಡೆಸುತ್ತಿರುವ ಸಿಬ್ಬಂದಿಯನ್ನು ಬೇರೆ ಕಡೆ ವರ್ಗಾವಣೆ ಮಾಡಿ, ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಸಮರ್ಪಕವಾದ ಗ್ರಾಮೀಣ ಸೇವೆ ಒದಗಿಸುವಂತೆ ಮೇ-೧೫ ರ ಗುರುವಾರ ಜಾನುವಾರುಗಳ ಸಮೇತ ಪಶು ಇಲಾಖೆ ಮುತ್ತಿಗೆ ಹಾಕುವ ನಿರ್ದಾರವನ್ನು ಕೈಗೊಳ್ಳಲಾಯಿತು ಎಂದರು.

ಸಭೆಯಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ತಾಲ್ಲೂಕು ಅಧ್ಯಕ್ಷ ಕದರಿನತ್ತ ಅಪ್ಪೋಜಿರಾವ್, ಯಲ್ಲಣ್ಣ, ಕಾಮಸಮುದ್ರ ಹೋಬಳಿ ಅಧ್ಯಕ್ಷ ಮುನಿಕೃಷ್ಣ, ವಿಶ್ವ, ಮುನಿರಾಜು, ಚಾಂದ್‌ಪಾಷ, ಬಾಬಾಜಾನ್, ಸುರೇಶ್‌ಬಾಬು, ರಾಮಸಾಗರ ವೇಣು, ಯಲ್ಲಣ್ಣ, ಶೈಲಜ, ಅಕ್ಕಮ್ಮ, ವೆಂಕಟಮ್ಮ ಮುಂತಾದವರು ಇದ್ದರು.

ಚಿತ್ರ : ಪಶುಪಾಲನಾ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲು ಕೋಲಾರ ಜಿಲ್ಲೆ ಬಂಗಾರಪೇಟೆಯಲ್ಲಿ ನಡೆದ ಸಭೆಯಲ್ಲಿ ರೈತ ಸಂಘದ ಕಾರ್ಯಕರ್ತರು ಒತ್ತಾಯಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande