ಹುಬ್ಬಳ್ಳಿ, 1 ಮೇ (ಹಿ.ಸ.) :
ಆ್ಯಂಕರ್ : ಮೇ 1ನ್ನು ನಾವು ಕಾರ್ಮಿಕ ದಿನಾಚರಣೆಯಾಗಿ ಆಚರಿಸುತ್ತೇವೆ. ಇದು ಕಾರ್ಮಿಕರ ಹಕ್ಕುಗಳಿಗಾಗಿ ನಡೆದ ಹೋರಾಟಗಳ ಸ್ಮರಣಾರ್ಥವಾಗಿದೆ.
1886ರಲ್ಲಿ ಅಮೆರಿಕದ ಶಿಕಾಗೋದಲ್ಲಿ ನಡೆದ ಹೈಮಾರ್ಕೆಟ್ ಹೋರಾಟ ಈ ದಿನದ ಹಿನ್ನೆಲೆ. ಎಂಟು ಗಂಟೆಗಳ ಕೆಲಸದ ಸಮಯದ ಗುರಿ ಈ ಹೋರಾಟದ ಮುಖ್ಯ ಉದ್ದೇಶವಾಗಿತ್ತು.
ಈ ದಿನ ಕಾರ್ಮಿಕರ ಅವಿರತ ಶ್ರಮ ಮತ್ತು ಸಮರ್ಪಣೆಗೆ ಗೌರವ ಸಲ್ಲಿಸಲಾಗುತ್ತದೆ.
ಕಾರ್ಖಾನೆ, ನಿರ್ಮಾಣ ಕ್ಷೇತ್ರ, ಕೃಷಿ, ಸಾರಿಗೆ, ಸೇವಾ ಕ್ಷೇತ್ರ—ಎಲ್ಲೆಡೆ ಶ್ರಮಿಕರ ಪಾತ್ರ ಅತ್ಯಂತ ಮಹತ್ವದದು. ಅವರ ಶ್ರಮವಿಲ್ಲದೆ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ.
ಇಂದು ನಾವು ಕಾರ್ಮಿಕರ ಬದುಕು, ಹಕ್ಕುಗಳು, ಮತ್ತು ಸಮಾನ ಅವಕಾಶಗಳ ಬಗ್ಗೆ ಚಿಂತನೆ ಮಾಡುವ ದಿನ. ಎಲ್ಲರಿಗೂ ಮಾನವೀಯ ಕೆಲಸದ ಪರಿಸರ ಮತ್ತು ಗೌರವಯುತ ವೇತನ ದೊರಕಬೇಕೆಂಬದು ಈ ದಿನದ ಸಂದೇಶ.
ಕಾರ್ಮಿಕರಿಗೆ ಕೇವಲ ಒಂದು ದಿನದ ಗೌರವವಲ್ಲ, ಎಲ್ಲ ದಿನವೂ ಗೌರವ ಮತ್ತು ಮಾನವೀಯತೆ ಇರಲಿ ಎಂಬ ಆಶಯದೊಂದಿಗೆ ಈ ಕಾರ್ಮಿಕ ದಿನಾಚರಣೆಯನ್ನು ಆಚರಿಸೋಣ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa