ಕೋಲಾರ, ೦೬ ಏಪ್ರಿಲ್ (ಹಿ.ಸ) :
ಆ್ಯಂಕರ್ : ಸಿವಿಲ್ ನ್ಯಾಯಾಧೀಶರ ಪರೀಕ್ಷೆ ಆಕಾಂಕ್ಷಿಗಳು ಮೊದಲು ಇತಿಹಾಸ ಅರಿತು, ನ್ಯಾಯಾಂಗ ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳಬೇಕು, ನ್ಯಾಯನಿರ್ಣಯದಲ್ಲಿ ನಿಸ್ವಾರ್ಥತೆಯೊಂದಿಗೆ ನಿಷ್ಪಕ್ಷಪಾತದಿಂದ ವರ್ತಿಸುವ ಸಂಕಲ್ಪ ಮಾಡಬೇಕು ಎಂದು ಹೈಕೋರ್ಟ್ ನ್ಯಾಯಾಧೀಶರಾದ ಹೆಚ್.ಪಿ.ಸಂದೇಶ್ ಕರೆ ನೀಡಿದರು.
ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ನಗರದ ವಕೀಲರ ಭವನದಲ್ಲಿ ಹಮ್ಮಿಕೊಂಡಿದ್ದ ಸಿವಿಲ್ ನ್ಯಾಯಾಧೀಶರ ಪರೀಕ್ಷೆಗೆಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳ ತರಬೇತಿ ಶಿಬಿರ ಹಾಗೂ ಅಂತರರಾಷ್ಟಿçÃಯ ಮಹಿಳಾದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಸ್ವಾತಂತ್ರö್ಯ ಹೋರಾಟದಲ್ಲಿ ಅನೇಕ ವಕೀಲರು ತಮ್ಮ ವೃತ್ತಿಯನ್ನು ತೊರೆದು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ, ನಮ್ಮ ದೇಶ ಗುಲಾಮಗಿರಿಯಿಂದ ಮುಕ್ತವಾಗಲು ವಕೀಲರ ಪಾತ್ರ ಅತ್ಯಂತ ಅಮೂಲ್ಯವಾದುದು ಎಂದ ಅವರು, ನ್ಯಾಯಾಧೀಶರಾಗುವವರು ಮೊದಲು ನ್ಯಾಯಾಂಗ ವ್ಯವಸ್ಥೆ ಕುರಿತು ಅರಿಯಬೇಕು ಎಂದರು.
ಮಹಾತ್ಮಾಗಾಂಧೀಜಿಯವರೊAದಿಗೆ ಹೋರಾಟದಲ್ಲಿ ಕೆಲಸ ಮಾಡಿದ ಅನೇಕರು ನ್ಯಾಯವಾದಿಗಳು ಎಂದ ಅವರು, ಲಾಲ್‌ಬಹುದ್ದೂರ್ ಶಾಸ್ತಿçಯವರು ವಿದ್ಯಾಭ್ಯಾಸ ತೊರೆದು ಸ್ವಾತಂತ್ರö್ಯ ಹೋರಾಟಕ್ಕೆ ಧುಮುಕಿದರು ಅವರಂತಹ ಮಹನೀಯರ ಪ್ರಾಮಾಣಿಕತೆ, ಬದ್ದತೆ ವಕೀಲರಿಗೆ ಬರಬೇಕು ಎಂದರು.
ಸಮಾಜದಲ್ಲಿನ ಭ್ರಷ್ಟಾಚಾರ, ಶೋಷಣೆ ತಡೆಯಲು ವಕೀಲರು ಹೆಚ್ಚಿನ ಜವಾಬ್ದಾರಿ ವಹಿಸಬೇಕು, ಶಾಸಕಾಂಗ ವ್ಯವಸ್ಥೆಯಲ್ಲಿನ ಲೋಪಗಳ ಕುರಿತಾದ ಪ್ರಕರಣಗಳಲ್ಲಿ ನ್ಯಾಯ ರಕ್ಷಣೆಯ ಜವಾಬ್ದಾರಿ ನಿಮ್ಮದೂ ಆಗಿದೆ ಎಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎ.ಮಂಜುನಾಥ್ ಮಾತನಾಡಿ, ಉತ್ತಮ ವಕೀಲರು, ನ್ಯಾಯಾಧೀಶರಾಗಲು ನಿರಂತರ ಅಧ್ಯಯನ ಅಗತ್ಯವಿದೆ, ಕಾನೂನು ಪುಸ್ತಕಗಳ ಜತೆಗೆ ನಮ್ಮ ದೇಶದ ಇತಿಹಾಸ ಪುಸ್ತಕಗಳ ಅಧ್ಯಯನವೂ ಅಗತ್ಯವಿದೆ, ಕೋಲಾರ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯ ವಕೀಲರು ನ್ಯಾಯಾಧೀಶರ ಹುದ್ದೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿ ಎಂದು ಹಾರೈಸಿದರು.
ಹಣ ಗಳಿಕೆಯೊಂದೇ ಮುಖ್ಯ ಕಾರ್ಯವಾಗಬಾರದು, ಸಮಾಜದಲ್ಲಿನ ಶೋಷಿತರ ನೆರವಿಗೆ ನಿಲ್ಲುವ ಸಂಕಲ್ಪವೂ ಅಗತ್ಯವಿದೆ, ಈ ನಿಟ್ಟಿನಲ್ಲಿ ನ್ಯಾಯ ಪಡೆಯಲಾಗದ ಅನೇಕರ ಬಾಳಿಗೆ ನೀವು ನೆರಳಾಗಬೇಕು ಎಂದು ಕೋರಿದರು.
ಹೈಕೋರ್ಟ್ನ ನೇಮಕಾತಿ ವಿಲೇಖನಾಧಿಕಾರಿ ಇ.ಚಂದ್ರಕಲಾ ಮಾತನಾಡಿ, ಸಿವಿಲ್ ನ್ಯಾಯಾಧೀಶರಾಗಲು ನಿರಂತರ ಅಧ್ಯಯನ ಅಗತ್ಯವಿದೆ, ದೇಶ ಕಟ್ಟವ ಕಾರ್ಯದಲ್ಲಿ ಪಾತ್ರ ವಹಿಸಿರುವ ವಕೀಲರಲ್ಲಿ ದೇಶಪ್ರೇಮ ಇರಬೇಕು, ದೇಶದ ರಕ್ಷಣೆಗೆ ಸಂಬAಧಿಸಿದ ವಿಷಯಗಳಲ್ಲಿ ತೀರ್ಪು ನೀಡುವಾಗಿ ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದರು.
ಮಹಿಳಾ ವಕೀಲರು ನ್ಯಾಯಾಧೀಶರಾಗಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬನ್ನಿ ಎಂದು ಕರೆ ನೀಡಿದ ಅವರು, ಇಂದು ಮಹಿಳೆಯರು ಸಬಲರಾಗಿದ್ದಾರೆ, ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಶಕ್ತಿಯನ್ನು ಸಾಕ್ಷೀಕರಿಸಿದ್ದಾರೆ, ಮಹಿಳೆಯರಲ್ಲಿ ಅನಕ್ಷರಸ್ಥರು, ಶೋಷಿತರು ನಿಮ್ಮ ಬಳಿ ಬಂದಾಗ ಅವರ ಹಿತರಕ್ಷಣೆ ಮಾಡುವುದರ ಜತೆಗೆ ಅವರ ನೆರವಿಗೆ ನಿಲ್ಲುವ ನಿರ್ಧಾರ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ ಮಾತನಾಡಿ, ವಕೀಲರ ಸಂಘ ವಕೀಲರಲ್ಲಿ ವೃತ್ತಿ ನೈಪುಣ್ಯತೆ ಹೆಚ್ಚಿಸಲು ಅನೇಕ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ, ವಕೀಲರ ಹಿತ ರಕ್ಷಣೆಗೆ ಸಂಘ ಬದ್ದವಾಗಿದೆ ಎಂದು ತಿಳಿಸಿದರು.
ನ್ಯಾಯಾಂಗ ವ್ಯವಸ್ಥೆಯಲ್ಲಿ ಉತ್ತಮ ಕಾರ್ಯ ನಿರ್ವಹಣೆಗೆ ಅಗತ್ಯವಾದ ಅಧ್ಯಯನಕ್ಕಾಗಿ ಪುಸ್ತಕಗಳ ಭಂಡಾರ ವಕೀಲರ ಸಂಘದಲ್ಲಿದ್ದು, ಇದರ ಸದುಪಯೋಗ ಪಡೆಯಬೇಕು ಎಂದ ಅವರು, ಕಿರಿಯ ವಕೀಲರು ನಿರಂತರವಾಗಿ ಓದಿ ತಮ್ಮ ವೃತ್ತಿ ಕೌಶಲ್ಯ ಹೆಚ್ಚಿಸಿಕೊಳ್ಳಿ ಎಂದು ಕೋರಿದರು.
ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಜಯಶ್ರೀ ,ಅಪರ ಜಿಲ್ಲಾಧಿಕಾರಿ ಮಂಗಳಾ, ವಿಭಾಗಾಧಿಕಾರಿ ಡಾ.ಮೈತ್ರಿ, ನ್ಯಾಯಾಧೀಶರಾದ ದಿವ್ಯ, ಪ್ರಸಾದ್,ನಿರ್ಮಲ, ಸುನಿಲ ಎಸ್.ಹೊಸಮನಿ, ನಟೇಶ್, ಶ್ರೀನಿವಾಸ ಪಾಟೀಲ್, ಚೇತನ ಅರಿಕಟ್ಟೆ, ಮದನ್, ಹರ್ಷ, ಲಕ್ಷಿ, ಹಿರಿಯ ವಕೀಲರಾದ ಕೋದಂಡಪ್ಪ, ಕೆ.ವಿ.ಶಂಕರಪ್ಪ, ಟಿ.ಜಿ.ಮನ್ಮಥರೆಡ್ಡಿ, ಬಿಸಪ್ಪಗೌಡ ಮತ್ತಿತರರಿದ್ದು, ಕಂಜುನೇತ್ರಿ ಪ್ರಾರ್ಥಿಸಿ, ವಕೀಲರಾದ ಉಮಾ ನಿರೂಪಿಸಿ,ವಕೀಲರಾದ ಎಂ.ವಿ.ರತ್ನಮ್ಮ ಸ್ವಾಗತಿಸಿ,ಮುನಿರತ್ನ ವಂದಿಸಿದರು.
ಚಿತ್ರ ; ಕೋಲಾರಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ನಗರದ ವಕೀಲರ ಭವನದಲ್ಲಿ ಹಮ್ಮಿಕೊಂಡಿದ್ದ ಸಿವಿಲ್ ನ್ಯಾಯಾಧೀಶರ ಪರೀಕ್ಷೆಗೆಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್