ಕೋಲಾರ, ಏ.೦೮ (ಹಿ.ಸ) :
ಆ್ಯಂಕರ್ : ಕೋಲಾರ ಖೋ-ಖೋ ಸಂಸ್ಥೆ ವತಿಯಿಂದ ೨೦೨೫-೨೬ನೇ ಸಾಲಿಗೆ ಬಾಲಕ, ಬಾಲಕಿಯರಿಗೆ ಉಚಿತ ಬೇಸಿಗೆ ಖೋ-ಖೋ ತರಬೇತಿ ಶಿಬಿರವನ್ನು ೧೦-೦೪-೨೦೨೫ ರಿಂದ ೧೦-೦೫-೨೦೨೫ ರವರೆಗೆ ಆಯೋಜಿಸಲಾಗಿದೆ ಎಂದು ಕೋಲಾರ ಖೋ-ಖೋ ಸಂಸ್ಥೆ ಅಧ್ಯಕ್ಷ ಕೆ.ವಿ.ಶಂಕರಪ್ಪ ತಿಳಿಸಿದ್ದಾರೆ.
ಆಸಕ್ತ ಅಭ್ಯರ್ಥಿಗಳು ಸಂಸ್ಥೆಯ ಪ್ರವೇಶ ಪತ್ರವನ್ನು ಪಡೆದು ನೋಂದಣಿ ಮಾಡಿಕೊಂಡು ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ. ಆಧಾರ್ ಕಾರ್ಡ್ ಜೆರಾಕ್ಸ್ ಹಾಗೂ ಭಾವಚಿತ್ರ ಕಡ್ಡಾಯವಾಗಿರುತ್ತದೆ.
೧೦ ರಿಂದ ೧೬ ವರ್ಷದ ವಯೋಮಿತಿಯೊಳಗೆ ಪ್ರತಿದಿನ ಬೆಳಿಗ್ಗೆ : ೬.೩೦ ರಿಂದ ೮.೩೦, ಸಂಜೆ ೪.೩೦ ರಿಂದ ೬.೩೦ ರವರೆಗೆ ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣ ತರಬೇತಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಿ ಮಾಹಿತಿಗಾಗಿ ಹಿರಿಯ ಖೋ-ಖೋ ತರಬೇತುದಾರ ಎನ್. ಶ್ರೀಧರ, ೯೧೪೧೫೭೨೫೨೮, ರೈತ ಸಂಘದ ಮುಖಂಡ ಅಬ್ಬಣಿ ಶಿವಪ್ಪ ೮೦೭೩೬೯೯೨೨೬, ಎ.ಇ.ಎಸ್ ಸಂಸ್ಥೆಯ ಸಂಸ್ಥಾಪಕ ಫಾಲ್ಗುಣ ೯೪೪೮೭೧೪೯೨೭, ಎ.ಇ.ಎಸ್ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ರವೀಂದ್ರನಾಥ್ ೯೯೦೨೫೩೩೮೧೨, ಮಾಜಿ ಸೈನಿಕ ಗಣೇಶ್ ೯೪೬೨೭೫೦೭೧೬, ಹಿರಿಯ ಖೋ-ಖೋ ಕ್ರೀಡಾಪಟು ಎಸ್.ಎಂ. ಗೋವಿಂದರಾಜು ೯೪೪೮೪೪೮೦೦೪ ಸಂಪರ್ಕಿಸಬಹುದು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್