ಕೋಲಾರ ಬಸ್ ನಿಲ್ದಾಣದ ಕೀಲುಕೋಟೆ ಆಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕೆ ಯೋಜನೆ
ಕೋಲಾರ ಬಸ್ ನಿಲ್ದಾಣದ ಕೀಲುಕೋಟೆ ಆಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕೆ ಯೋಜನೆ
ಕೋಲಾರ ಶಾಸಕ ಕೊತ್ತೂರು ಮಂಜುನಾಥ್


ಕೋಲಾರ, ೦೮ ಏಪ್ರಿಲ್ (ಹಿ.ಸ) :

ಆ್ಯಂಕರ್ : ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನಲ್ಲಿ ಸುಮಾರು ೭೦೦ ಕ್ಕೂ ಹೆಚ್ಚು ದೇವಾಲಯಗಳಿಗೆ ತಮ್ಮ ಸ್ವಂತ ಹಣದಿಂದ ಮರುಜೀವ ನೀಡಿದ ಶಾಸಕ ಕೊತ್ತೂರು ಮಂಜುನಾಥ್ ಮತ್ತೆ ದೇವಾಲಯಗಳ ಜೀರ್ಣೋದ್ದಾರಕ್ಕೆ ಮುಂದಾಗುವ ಮೂಲಕ ಕೋಲಾರ ವಿಧಾನಸಭಾ ಕ್ಷೇತ್ರದ ಜನರ ಋಣ ತೀರಿಸಲು ಮುಂದಾಗಿದ್ದಾರೆ

ಕೋಲಾರ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಇರುವ ಪುರಾತನವಾದ ಕೀಲುಕೋಟೆ ಅಂಜನೇಯ ದೇವಾಲಯವು ಶಿಥಿಲಾವಸ್ಥೆ ತಲುಪಿತ್ತು ಇದನ್ನ ಮನಗಂಡ ಶಾಸಕ ಕೊತ್ತೂರು ಮಂಜುನಾಥ್ ತಮ್ಮ ಸ್ವಂತ ಹಣದಿಂದ ಜೀರ್ಣೋದ್ದಾರಕ್ಕೆ ಮುಂದಾಗಿದ್ದಾರೆ.

ಮಂಗಳವಾರ ನಗರದ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಸೇರಿದಂತೆ ಮುಜರಾಯಿ ಇಲಾಖೆ, ನಿರ್ಮಿತಿ ಕೇಂದ್ರ ಹಾಗೂ ನಗರಸಭೆ ಅಧ್ಯಕ್ಷರು, ಸದಸ್ಯರೊಟ್ಟಿಗೆ ಮಹತ್ವ ಸಭೆ ನಡೆಸಿ ಕೀಲುಕೋಟೆ ಅಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ದಾರಕ್ಕೆ ಪಕ್ಷಾತೀತವಾಗಿ ಕೈಜೋಡಿಸಬಹುದು ಎಂದರು.

ಸಭೆಯಲ್ಲಿ ಮಾತನಾಡಿದ ಶಾಸಕ ಕೊತ್ತೂರು ಮಂಜುನಾಥ್ ಕೀಲುಕೋಟೆಯ ಅಂಜನೇಯಸ್ವಾಮಿ ದೇವಾಲಯ ಪುರಾತನ ದೇವಾಲಯವಾಗಿದೆ ಆದರೆ ಈ ದೇವಾಲಯ ಶಿಥಿಲಾವಸ್ಥೆ ತಲುಪಿರುವುದು ಮಾತ್ರ ದುರಂತ ಕೂಡಲೇ ದೇವಾಲಯದ ಕುರಿತು ಏನೇ ವಿವಾದಗಳಿದ್ದರೂ ಅತಿ ಶೀಘ್ರದಲ್ಲಿ ಪರಿಹರಿಸಿ ದೇವಾಲಯಕ್ಕೆ ಮರು ಜೀವ ನೀಡಲು ಅಧಿಕಾರಿಗಳು ಸಹಕರಿಸಬೇಕು ಆ ನಿಟ್ಟಿನಲ್ಲಿ ಸಾರ್ವಜನಿಕರು ಸ್ಥಳಿಯ ಮುಖಂಡರು ಸಹ ಸಹಕಾರ ಅಗತ್ಯವಿದೆ ಎಂದರು.

ಕೀಲುಕೋಟೆ ಆಂಜನೇಯ ದೇವಾಲಯ ಹಿಂದೂ ಧರ್ಮದ ಸಂಖೇತವಾಗಿದೆ ಈ ದೇವಾಲಯ ಕೋಲಾರದ ನಗರದ ಮಧ್ಯಭಾಗದಲ್ಲಿದ್ದು ಪಕ್ಕದಲ್ಲೇ ಕೆಎಸ್.ಆರ್.ಟಿಸಿ ಬಸ್ ನಿಲ್ದಾಣ ಇರುವ ಕಾರಣ ಸಾರ್ವಜನಿಕರ ಗಮನ ಸೆಳೆಯುವಂತೆ ಅಭಿವೃದ್ದಿ ಪಡಿಸಲಾಗುವುದು ನೂತನವಾಗಿ ಜೀರ್ಣೋದ್ದಾರಕ್ಕೆ ಭಕ್ತಾಧಿಗಳು ಸಾರ್ವಜನಿಕರು ಎಷ್ಟೆ ಹಣ ಕೊಟ್ಟರು ಅದಕ್ಕೆ ತಲಗುವ ಸಂಪೂರ್ಣ ವೆಚ್ಚವನ್ನು ನನ್ನ ವೈಯುಕ್ತಿಕವಾಗಿ ಭರಿಸಿ ಧಾರ್ಮಿಕ ಕ್ಷೇತ್ರವನ್ನಾಗಿ ಅಭಿವೃದ್ದಿ ಪಡಿಸಲಾಗುವುದು ಅದಕ್ಕೆ ಅಧಿಕಾರಿಗಳು ಸಹ ನಮ್ಮೊಟ್ಟಿಗೆ ಸಹಕರಿಸಬೇಕು ಈ ದೇವಾಲಯದ ಕುರಿತು ಇರುವ ವಿವಾದಗಳನ್ನು ಕೂಡಲೇ ಬಗೆಹರಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಭೆಯಲ್ಲಿ ತಹಶಿಲ್ದಾರ್ ನಯನ, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಸದಸ್ಯರಾದ ಅಂಬರೀಶ್, ಅಮರನಾಥ್, ನಿರ್ಮಿತಿ ಕೇಂದ್ರ ಅಶ್ವಿನ್ ಕುಮಾರ್, ಮುಜರಾಯಿ ಇಲಾಖೆಯ ಸೆಲ್ಬರಾಜ್, ಕಂದಾಯ ಇಲಾಖೆಯ ರಾಜೇಂದ್ರ ಪ್ರಸಾದ್, ಮುಖಂಡರಾದ ಮೈಲಾಂಡಹಳ್ಳಿ ಮುರಳಿ, ಗಂಗಣ್ಣ ಮುಂತಾದವರು ಇದ್ದರು.

ಚಿತ್ರ : ಕೋಲಾರ ಶಾಸಕ ಕೊತ್ತೂರು ಮಂಜುನಾಥ್

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande