ಬಾಗಲಕೋಟೆ, 03 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಹೈಕೋರ್ಟ್ ನಿಂದ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ರದ್ಧು ಮಾಡಿಸಿದ ಬಿಜೆಪಿ ಪಕ್ಷದ ವಿಧಾನ ಪರಿಷತ್ ಸದಸ್ಯ ಪಿ.ಹೆಚ್. ಪೂಜಾರಿ ವಿರುದ್ಧ ಬಿಜೆಪಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಆಕ್ರೋಶ ವ್ಯಕ್ತಪಡಿಸಿದರು.
ಬಾಗಲಕೋಟೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಶಾಸಕ ಚರಂತಿಮಠ, ಪರಿಷತ್ ಸದಸ್ಯನ ವಿರುದ್ಧ ಏಕ ವಚನದಲ್ಲೇ ವಾಗ್ದಾಳಿ ನಡೆಸಿದರು.
ಪಿ.ಹೆಚ್. ಪೂಜಾರಿಯನ್ನು ಬಿಜೆಪಿ ಪಕ್ಷಕ್ಕೆ ಕರೆತರುವುದರಲ್ಲಿ ನನ್ನದು ದೊಡ್ಡ ಪಾತ್ರ ಇದೆ. ಯಡಿಯೂರಪ್ಪ ಅವರ ಮಾತು ಕೇಳಿ ಪೂಜಾರಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದೇವೆ. ಆದರೆ, ಬಾಗಲಕೋಟೆ ಜನರ ಹಿತಕ್ಕಾಗಿ ಕೆಲಸ ಮಾಡಬೇಕಾಗಿದ್ದ ಈ ಅಯೋಗ್ಯ ಪೂಜಾರಿ ಪ್ರಾಧಿಕಾರದಲ್ಲಿ ತನ್ನನ್ನು ಸದಸ್ಯನನ್ನಾಗಿ ಮಾಡಲಿಲ್ಲ ಎಂಬ ಕಾರಣಕ್ಕೆ ಧಾರವಾಡ ಹೈಕೋರ್ಟ್ ಗೆ ಹೋಗಿ ಬಿಟಿಡಿಎ ರದ್ದು ಆದೇಶ ಮಾಡಿಸಿಕೊಂಡು ಬಂದಿದ್ದಾನೆ ಎಂದು ಚರಂತಿಮಠ ಬೇಸರ ವ್ಯಕ್ತಪಡಿಸಿದರು.
ಒಬ್ಬ ಅಯೋಗ್ಯನಿಗೆ ಅಧಿಕಾರ ಕೊಟ್ರೆ ಯಾವ ಮಟ್ಟಕ್ಕೆ ಹೊಗುತ್ತಾನೆ ಎನ್ನೋದಕ್ಕೆ ಪರಿಷತ್ ಸದಸ್ಯ ಪೂಜಾರಿನೇ ಸಾಕ್ಷಿ ಎಂದ ಅವರು, ಬಾಗಲಕೋಟೆ ಅಭಿವೃದ್ಧಿ ಚಿಂತನೆ ಇಲ್ಲದೇ ಪ್ರಾಧಿಕಾರ ರದ್ಧತಿಯ ಸಾಧಕ, ಬಾಧಕ ಏನು ಎನ್ನುವ ಅರಿವಿಲ್ಲ ಅವನಿಗೆ ಲಕ್ಷಾಂತರ ಜನ ಬೀದಿಗೆ ಬರುವಂತೆ ಮಾಡಿದ್ದಾನೆ ಎಂದರು.
ಮುಳುಗಡೆ ಆದವರಿಗೆ ಜಾಗ ಕೋಡಿಸಬೇಕು, ಪರಿಹಾರ ಕೊಡಿಸಬೇಕು. ಅಂಥದರಲ್ಲಿ 40 ವರ್ಷದಿಂದ ಪ್ರಾಧಿಕಾರ ಅಸ್ತಿತ್ವದಲ್ಲಿ ಇತ್ತು, ಬಜೆಟ್ ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಬರುವ ಅಲೋಕೇಶನ್ ಬಿಟಿಡಿಎ ಗೂ ಬರ್ತಿತ್ತು. ಇದೀಗ ತನ್ನ ಸ್ವಾರ್ಥಕ್ಕೆ ಬಿಟಿಡಿಎ ಪೂರ್ತಿ ರದ್ದು ಮಾಡಿಸಿದ್ದಾರೆ ಎಂದರು.
ಕಿಂಚಿತ್ತು ಮಾನ ಮರ್ಯಾದೆ ಇದ್ರೆ ವಿಧಾನ ಪರಿಷತ್ ಸ್ಥಾನಕ್ಕೆ ಅವನು ರಾಜೀನಾಮೆ ಕೊಟ್ಟು ಹೋಗಬೇಕು ಎಂದು ತೀವ್ರ ಆಕ್ರೋಶ ಹೊರ ಹಾಕಿದ ಚರಂತಿಮಠ, ಇವನು ಬಾಗಲಕೋಟೆ ಉದ್ಧಾರ ಮಾಡಿದ್ದು ಅಷ್ಟರಲ್ಲೇ ಇದೆ. ಇವನು ಏನು ಮಾಡಿದ್ದಾನೆ ಅದೆಲ್ಲವೂ ಗೊತ್ತಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / ಪ್ರಸನ್ನ