ಎನ್.ನಾಗರಾಜ್ ಗೆ ಮುಖ್ಯಮಂತ್ರಿಗಳ ಚಿನ್ನದ ಪದಕದ ಗೌರವ
ಎನ್.ನಾಗರಾಜ್ ರವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕದ ಗೌರವ
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎನ್.ನಾಗರಾಜ್1


ಕೋಲಾರ, ಏ.೦೩:

ಆ್ಯಂಕರ್ : ಕೋಲಾರ ಮೂಲದ ವೈಟ್‌ಫೀಲ್ಡ್ ಪೊಲೀಸ್ ಸ್ಟೇಷನ್‌ನಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ದಕ್ಷ, ಪ್ರಾಮಾಣಿಕೆತಯಿಂದ ಕಾರ್ಯನಿರ್ವಹಿಸುತ್ತಿರುವ ಕೋಲಾರ ಜಿಲ್ಲೆಯ ಕ್ಯಾಲನೂರು ಗ್ರಾಮದ ಎನ್.ನಾಗರಾಜ್ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಎನ್.ನಾಗರಜ್ ಅವರನ್ನು ಎಸ್.ಡಿ.ಸಿ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ನವೀನ್ ಕುಮಾರ್ ಹಾಗೂ ಕ್ಯಾಲನೂರು ಗ್ರಾಮಸ್ಥರು ಶುಭ ಹಾರೈಸಿದ್ದಾರೆ.

ನಾಗರಾಜ್ ಎನ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರಸ್ತುತ ವೈಟ್‌ಫೀಲ್ಡ್ ಪೊಲೀಸ್ ಸ್ಟೇಷನ್ ಬೆಂಗಳೂರು ಇಲ್ಲಿ ದಕ್ಷ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮಧ್ಯಮ ರೈತ ವರ್ಗದ ಕುಟುಂಬದಲ್ಲಿ ಜನಿಸಿದ ಇವರು ಪಿ.ಎಸ್.ಐ, ಬಿ.ಎ, ಎಲ್.ಎಲ್.ಬಿ, ಎಲ್.ಎಲ್.ಎಂ ಪದವೀಧರರು ಆಗಿದ್ದು, ಕೋಲಾರ ಬಾಲಕರ ಕಾಲೇಜಿನ ಆವರಣದಲ್ಲಿ ಕೊನೆಯ ಎಲ್.ಎಲ್.ಬಿ ಬ್ಯಾಚ್‌ನ ವಿದ್ಯಾರ್ಥಿಯಾಗಿರುತ್ತಾರೆ.

ಕ್ಯಾಲನೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ೧೦ನೇ ತರಗತಿಯವರೆಗೂ ವಿದ್ಯಾಭ್ಯಾಸದ ನಂತರ ಕೋಲಾರದಲ್ಲಿ ಪದವಿ ಪಡೆದ ನಂತರ ಸ್ವಲ್ಪಕಾಲ ವಕೀಲ ವೃತ್ತಿ ಮಾಡಿ ತದನಂತರ ೨೦೧೪ನೇ ಸಾಲಿನಲ್ಲಿ ಪಿ.ಎಸ್.ಐ ಆಗಿ ನೇಮಕ ಆಗಿ ಇಲಾಖೆಗೆ ಸೇರಿ ೧೦ ವರ್ಷಗಳಾಗಿದ್ದು, ಮಡಿವಾಳ, ದೇವನಹಳ್ಳಿ, ಕೆಂಗೇರಿ ಪೊಲೀಸ್ ಠಾಣೆಗಳಲ್ಲಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಅತ್ಯುತ್ತಮ ಸೇವೆಯನ್ನು ಒದಗಿಸಿರುತ್ತಾರೆ.

ಇದನ್ನು ಗುರುತಿಸಿ ರಾಜ್ಯ ಸರ್ಕಾರ ಇವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ನೀಡಿ ಗೌರವಿಸಿರುವುದು ನಿಜಕ್ಕೂ ಕೋಲಾರ ಜಿಲ್ಲೆಗೆ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ.

ಚಿತ್ರ : ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎನ್.ನಾಗರಾಜ್

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande