ಮಹಾರಾಜರು ಬೈರ ಮತ್ತು ದಾಸನಿಗೆ ಮಂಜೂರು ಮಾಡಿದ್ದ ಭೂಮಿ ಅರಣ್ಯ ಪಾಲು
ಮಹಾರಾಜರು ಬೈರ ಮತ್ತು ದಾಸನಿಗೆ ಮಂಜೂರು ಮಾಡಿದ್ದ ಭೂಮಿ ಅರಣ್ಯ ಪಾಲು
ಕೋಲಾರ ತಾಲ್ಲೂಕು ಶಿಳ್ಳಂಗೆರೆ ಗ್ರಾಮದ ವ್ಯಾಪ್ತಿಯ ರೈತರು ಖರೀದಿ ಮಾಡಿರುವ ಭೂಮಿಯಲ್ಲಿ ಬೆಳೆಸಲಾಗಿದ್ದ ಮರಗಿಡಗಳನ್ನು ನಾಶಪಡಿಸಿ ಅರಣ್ಯ ಇಲಾಖೆಯವರು ರೈತರನ್ನು ಒಕ್ಕಲೆಬ್ಬಿಸಿದ್ದಾರೆ.1


ಕೋಲಾರ, ಏಪ್ರಿಲ್ 0೨ :

ಆ್ಯಂಕರ್ : ಮೈಸೂರು ಸಂಸ್ಥಾನದ ಆಳರಸರು ಹಲವಾರು ಜನಪರ ಯೋಜನೆಗಳನ್ನು ರೂಪಿಸಿ ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾರಾಜರು ಜಮೀನು ಇಲ್ಲದ ರೈತರಿಗೆ ಭೂಮಿ ಮಂಜೂರು ಮಾಡಿದ್ದರು. ಆದರೆ, ಮಹಾರಾಜರು ಸ್ವಾತಂತ್ರ್ಯ ಪೂರ್ವದಲ್ಲಿ ಮಂಜೂರು ಮಾಡಿದ್ದ ಭೂಮಿ ಈಗ ವಿವಾದಗಳನ್ನು ಸೃಷ್ಠಿ ಮಾಡಿದೆ.

ಸಣ್ಣ ಹಿಡುವಳಿದಾರರ ಜಮೀನನ್ನು ಅರಣ್ಯ ಇಲಾಖೆ ವಶಕ್ಕೆ ತೆಗೆದುಕೊಳ್ಳಲು ಮುಂದಾಗಿದೆ. ಯಾವುದೇ ಮುಲಾಜಿಲ್ಲದೆ ಜೆಸಿಬಿ ಯಂತ್ರಗಳ ಮೂಲಕ ತೆರವುಗೊಳಿಸಲಾಗಿದೆ. ಆದರೆ ಬಲಾಡ್ಯರ ಜಮೀನುಗಳ ಜಂಟಿ ಸರ್ವೇಯನ್ನು ಅರಣ್ಯ ಇಲಾಖೆ ಮತ್ತ ಕಂದಾಯ ಇಲಾಖೆ ನಡೆಸಿವೆ. ಬಲಾಡ್ಯರಿಗೆ ಒಂದು ಕಾನೂನು ಬಡವರಿಗೆ ಒಂದು ಕಾನೂನು ಅನುಸರಿಸಲಾಗುತ್ತಿದೆ.

ಕೋಲಾರ ತಾಲ್ಲೂಕಿನ ಹುತ್ತೂರು ಹೋಬಳಿ ಶಿಳ್ಳಂಗೆರೆ ಗ್ರಾಮದ ಸರ್ವೇ ನಂ.೧೨೯ರಲ್ಲಿ ೨೯೧.೧೦ಎಕರೆ ಜಮೀನಿನ ಪೈಕಿ ತಿಮ್ಮ ಮತ್ತು ದಾಸ ಎಂಬುವರಿಗೆ ತಲಾ ೨.೦೧ ಎಕರೆ ಜಮೀನು ಮಂಜೂರು ಮಾಡಿದ್ದರು. ಆ ನಂತರ ಬೈರ ಮತ್ತು ದಾಸ ಇತರರಿಗೆ ಜಮೀನು ಮಾರಾಟ ಮಾಡಿದ್ದರು. ಖರೀದಿ ಮಾಡಿದರು ಇತರರಿಗೆ ಮಾರಾಟ ಮಾಡಿದ್ದರು. ಸರ್ವೇ ನಂಬರ್ ೩೬೧ ಮತ್ತು ೩೬೨ರ ಜಮೀನನ್ನು ಶ್ರೀ ನಂಜು0ಡರೆಡ್ಡಿ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ರವರಿಂದ ದಿನಾಂಕ ೨೮-೧೧-೨೦೧೪ ಹಾಗೂ ೨೭-೦೨-೨೦೧೫ರಲ್ಲಿ ಶುದ್ಧ ಕ್ರಯಕ್ಕೆ ಕೃಷ್ಣಪ್ಪ ಮತ್ತು ಆನಂದ್ ಕುಮಾರ್ ರವರು ಖರೀದಿ ಮಾಡಿದ್ದರು.

. ಈ ಕ್ರಯದ ಪತ್ರಗಳನ್ನು ಪರಿಶೀಲಿಸಲಾಗಿ ೧೯೩೩ರಲ್ಲಿ ಮೈಸೂರು ಮಹಾರಾಜರು ದಾಸ ಮತ್ತು ಬೈರ ಎಂಬುವರಿಗೆ ಮಂಜೂರು ಮಾಡಿರುತ್ತಾರೆ. ತದ ನಂತರ ನಾರಾಯಣಸ್ವಾಮಿ, ತಿಮ್ಮಯ್ಯ ಹಾಗೂ ನಂಜು0ಡರೆಡ್ಡಿ ಮತ್ತು ಜಯಲಕ್ಷ್ಮಿ ರವರಿಗೆ ಕ್ರಯಕ್ಕೆ ವರ್ಗಾವಣೆಯಾಗಿರುತ್ತದೆ. ಇದು ಬಂಜರು ಭೂಮಿಯಾಗಿದ್ದು, ನೀಲಿಗಿರಿ ಮರಗಳಿದ್ದು, ಇದನ್ನು ೧೯೩೩ರಲ್ಲೇ ಪೋಡಿ ಮಾಡಿ ನಕಾಶೆ ತಯಾರು ಮಾಡಿರುತ್ತಾರೆ.

ಅರಣ್ಯ ಇಲಾಖೆಯವರು ೧೬-೧೧-೨೦೨೩ರಂದು ನೋಟಿಸ್ ನೀಡಿ ಭೂ ಮಾಲೀಕತ್ವದ ಬಗ್ಗೆ ದಾಖಲೆಗಳನ್ನು ಒದಗಿಸುವಂತೆ ತಿಳಿಸಿದ್ದರು. ಅದರ ಪ್ರಕಾರ ಖರೀದಿದಾರರಾದ ಕೃಷ್ಣಪ್ಪ ಮತ್ತು ಆನಂದ್ ಕುಮಾರ್ ರವರು ದಾಖಲೆಗಳನ್ನು ಹಾಜರುಪಡಿಸಿದ್ದರು.

ಆದರೆ ಅರಣ್ಯ ಇಲಾಖೆಯವರು ಕಳೆದ ಮಾರ್ಚ್ ೨೬ ರಂದು ಕೃಷ್ಣಪ್ಪ ಮತ್ತು ಆನಂದ್ ಕುಮಾರ್ ಖರೀದಿ ಮಾಡಿರುವ ಜಮೀನು ಅರಣ್ಯ ಇಲಾಖೆಗೆ ಸೇರಿದೆ ಎಂದು ಜೆಸಿಬಿ ಯಂತ್ರಗಳ ಮೂಲಕ ತೆರವುಗೊಳಿಸಿದ್ದಾರೆ. ಕಾಂಪೌ0ಡ್‌ಗಳನ್ನು ಹೊಡೆದುಹಾಕಿ ಅದರ ಒಳಗೆ ಬೆಳೆದಿದ್ದ ಮಾವು, ತೆಂಗು, ನಿಂಬೆ, ಕರಿಬೇವು, ಕೋಸುಬೆಳೆ, ಡ್ರಿಪ್ ಇರಿಗೇಶನ್ ಪೈಪಗಳು, ನೀರಾವರಿ ಪೈಪುಗಳನ್ನು ಧ್ವಂಸಮಾಡಿದ್ದಾರೆ ಎಂದು ಖರೀದಿದಾರರ ಅಣ್ಣ ಶ್ರೀನಿವಾಸನ್ ಆರೋಪಿಸಿದ್ದಾರೆ.

ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಜಮೀನು ಮಂಜೂರಾತಿಯ ದಾಖಲೆಗಳನ್ನು ಪರಿಶೀಲಿಸುವಂತೆ ಶ್ರೀನಿವಾಸ್ ಒತ್ತಾಯಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಅರಣ್ಯ ಇಲಾಖೆ ಮತ್ತು ರೈತರ ನಡುವೆ ಸಂಘರ್ಷ ನಡೆಯುತ್ತಿದೆ. ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅರಣ್ಯ ಭೂಮಿಯನ್ನು ಕಂದಾಯ ಭೂಮಿ ಎಂದು ಮಂಜೂರು ಮಾಡಲಾಗಿತ್ತು. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ತನಿಖೆ ನಡೆಸಿ ಮಂಜೂರಾತಿಯನ್ನು ರದ್ದುಗೊಳಿಸಿದ್ದಾರೆ.

ಈ ಹಿಂದೆ ಕೋಲಾರ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ ಏಡುಕೊಂಡಲು ರವರು ಸುಮಾರು ಮೂರು ಸಾವಿರ ಎಕರೆ ಜಮೀನಿನ ಒತ್ತುವರಿಯನ್ನು ತೆರವುಗೊಳಿಸಿದ್ದಾರೆ. ಮಾಜಿ ಸಂಸದ ಎಸ್.ಮುನಿಸ್ವಾಮಿ ಶ್ರೀನಿವಾಸಪುರದಲ್ಲಿ ಒತ್ತುವರಿ ವಿರುದ್ಧ ಹೋರಾಟ ನಡೆಸಿದ್ದರು. ಅರಣ್ಯ ಇಲಾಖೆ ಅಕ್ರಮವಾಗಿ ರೈತರ ಜಮೀನನ್ನು ತೆರವುಗೊಳಿಸುತ್ತಿದೆ ಎಂದು ಆರೋಪಿಸಿದ್ದರು. ಆದರೆ ರಾಜಕೀಯ ಕಾರಣಗಳಿಗಾಗಿ ಒತ್ತುವರಿ ಕೆಲಸ ನೆನೆಗುದಿಗೆ ಬಿದ್ದಿದೆ.

ಶ್ರೀನಿವಾಸಪುರದಲ್ಲಿ ಬಲಾಡ್ಯರ ಪರ ಮಾಜಿ ಸಂಸದ ಮುನಿಸ್ವಾಮಿ ಹೋರಾಟ ನಡೆಸಿದ್ದರು. ಆದರೆ ಹೋರಾಟದ ಸಮಯದಲ್ಲಿ ಅವರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾಡಿರುವ ಬಗ್ಗೆ ಚಕಾರ ಎತ್ತಲಿಲ್ಲ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅರವತ್ತನಾಲ್ಕು ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ. ತಾನು ಈ ಭೂಮಿಯನ್ನು ಖರೀದ್ದು ಮಾಡಿದ್ದು, ನಾನು ಒತ್ತುವರಿದಾರನಲ್ಲ. ಖರೀದಿ ಮಾಡಿರುವ ಭೂಮಿಯಿಂದ ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಪ್ರಯತ್ನಿಸುತ್ತಿದೆ. ಆದ್ದರಿಂದ ಜಂಟಿ ಸರ್ವೇ ಮಾಡಬೇಕೆಂದು ಹೈ ಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಕಳೆದ ಜನವರಿಯಲ್ಲಿ ಹೈಕೋರ್ಟ್ ಆದೇಶದ ಮೇರೆಗೆ ಅರಣ್ಯ ಮತ್ತು ಕಂದಾಯ ಇಲಾಖೆಗಳು ಜಂಟಿ ಸರ್ವೇಗಳು ನಡೆಸಿದ್ದವು.

ಚಿತ್ರ : ಕೋಲಾರ ತಾಲ್ಲೂಕು ಶಿಳ್ಳಂಗೆರೆ ಗ್ರಾಮದ ವ್ಯಾಪ್ತಿಯ ರೈತರು ಖರೀದಿ ಮಾಡಿರುವ ಭೂಮಿಯಲ್ಲಿ ಬೆಳೆಸಲಾಗಿದ್ದ ಮರಗಿಡಗಳನ್ನು ನಾಶಪಡಿಸಿ ಅರಣ್ಯ ಇಲಾಖೆಯವರು ರೈತರನ್ನು ಒಕ್ಕಲೆಬ್ಬಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande