ಕೋಲಾರ, ೦೩ ಏಪ್ರಿಲ್ (ಹಿ.ಸ) :
ಆ್ಯಂಕರ್ : ಈ ನೆಲ ಈಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ ಇವರ ವತಿಯಿಂದ ಏಪ್ರಿಲ್ ೯ ರಂದು ಕೋಲಾರ ತಾಲ್ಲೂಕಿನ ವಕ್ಕಲೇರಿ ಹೋಬಳಿ, ಲಕ್ಷ್ಮಿಪುರ ಗ್ರಾಮದಲ್ಲಿ ಉಚಿತ ಮಕ್ಕಳ ಬೇಸಿಗೆ ಸಿಬಿರ ಉದ್ಘಾಟನೆ ಆರಂಭವಾಗಲಿದೆ.
ಸ0ತೋಷದ ನೆನಪುಗಳ ಮನದಲ್ಲಿ ಉಳಿಸಲು ಹದಿನೈದು ದಿನಗಳ ಕಾಲ ಶಿಬಿರ ನಡೆಯಲಿದ್ದು, ಆಸಕ್ತ ಶಿಬಿರಾರ್ಥಿಗಳು ಪಾಸ್‌ಪೊರ್ಟ್ ಅಳತೆಯ ಎರಡು ಭಾವಚಿತ್ರ, ಆಧಾರ್ ಕಾರ್ಡ್ ಜೆರಾಕ್ಸ್ ಏಪ್ರಿಲ್ ೮ರ ಸಂಜೆಯೊಳಗೆ ಭರ್ತಿ ಮಾಡಿದ ಅರ್ಜಿಯೊಂದಿಗೆ ತಲುಪಿಸಬೇಕು.
ಶಿಬಿರದಲ್ಲಿ ಜನಪದ ಗೀತೆಗಳು, ಪರಸ್ಪರ ಗೀತೆಗಳು, ಮಕ್ಕಳ ನಾಟಕ, ನೃತ್ಯರೂಪ, ಕೋಲಾಟ, ಪೇಪರ್ ಕ್ರಾಪ್ಟಿಂಗ್, ಚಿತ್ರಕಲೆ ಹೇಳಿಕೊಡಲಾಗುವುದು. ಅರ್ಜಿಗಳಿಗಾಗಿ ಶಿಬಿರದ ಆಯೋಜಕರಾದ ಬಿ.ವೆಂಕಟಾಚಲಪತಿ ಮೊ.೯೦೦೮೭೪೩೨೫೬ ಮತ್ತು ಶಿಬಿರದ ಸಂಚಾಲಕ ಶರಣಪ್ಪ ಗಬ್ಬೂರ್ ಮೊ.೯೯೦೨೪೧೬೦೪೦. ಲಕ್ಷ್ಮಿ ಪುರ ಲೋಕೇಶ್ ಮೊ.೯೭೪೧೮೪೩೩೮೮ ಸಂಪರ್ಕಿಸಲು ಕೋರಿದೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್