ಬೆಂಗಳೂರು, 28 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕಾಂಗ್ರೆಸ ಸರ್ಕಾರ ಕೇವಲ ದುರಾಡಳಿತದಲ್ಲಿ ಮಾತ್ರವಲ್ಲ ದುರಹಂಕಾರದಲ್ಲೂ ಪರಮಾವಧಿ ಮೀರಿದೆ.
ಅಧಿಕಾರದ ಮದದಲ್ಲಿ ಮುಖ್ಯಮಂತ್ರಿಗೆ ಕರ್ತವ್ಯ ನಿರತ ಪೋಲಿಸ್ ಅಧಿಕಾರಿಯ ಮೇಲೆ ಕೈ ಎತ್ತುವಷ್ಟು ದರ್ಪ ಬಂದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆ ವೇಳೆ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ಪ್ರದರ್ಶಿಸಿದ ವೇಳೆ ತಾಳ್ಮೆ ಕಳೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ ಮೇಲೆ ಕೈ ಎತ್ತಿರುವ ದೃಶ್ಯ ಉಲ್ಲೇಖಿಸಿ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಜೋಶಿ, ಸಂವಿಧಾನದ ರಕ್ಷಣೆ ಎಂದು ನಾಟಕ ಮಾಡಿ, ಕಾನೂನಿನ ರಕ್ಷಕರ ಮೇಲೆ ಕೈ ಎತ್ತುತ್ತಿರುವದು ಅತಿರೇಕದ ವರ್ತನೆ ಹಾಗೂ ದರ್ಪವನ್ನು ಎಸೆಗುವ ಕೃತ್ಯ. ಇದು ಖಂಡನೀಯ ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa