ಕೋಲಾರ ತಾಲ್ಲುಕು ನರಸಾಪುರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕುಮಾರ್ ಆಯ್ಕೆ
ಕೋಲಾರ ತಾಲ್ಲುಕು ನರಸಾಪುರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕುಮಾರ್ ಆಯ್ಕೆ
ಕೋಲಾರ ತಾಲ್ಲೂಕು ನರಸಾಪುರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕುಮಾರ್ ಆಯ್ಕೆಯಾಗಿದ್ದಾರೆ.


ಕೋಲಾರ, ೨೬ ಏಪ್ರಿಲ್ (ಹಿ.ಸ) :

ಆ್ಯಂಕರ್ : ತಾಲೂಕಿನ ನರಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗ್ರಾಮದ ಎನ್ ಎಂ ಕುಮಾರ್ ಎರಡು ಮತಗಳ ಅಂತರದಿAದ ಆಯ್ಕೆಯಾಗಿದ್ದಾರೆ,

ಈ ಹಿಂದೆ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಎನ್ ಕೃಷ್ಣಪ್ಪ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ನವೀನ್ ಚಂದೃ ಮತ್ತು ಸುಮಾನ್ ಚಂದೃ ಬಣ ಮತ್ತು ಕುಮಾರ್ ಬಣ ನಾಮಪತ್ರ ಸಲ್ಲಿಸಿದ್ದರು. ನರಸಾಪುರ ಗ್ರಾಮ ಪಂಚಾಯಿತಿಯ ಒಟ್ಟು ೧೮ ಸದಸ್ಯರ ಪೈಕಿ ಎನ್.ಎಂ. ಕುಮಾರ್ ಬಣವು ೧೦ ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಗ್ರಾಮದ ನವೀನ್ ಚಂದೃ ಮತ್ತು ಸುಮನ್ ಚಂದೃ ಬಣವು ೮ ಮತಗಳನ್ನು ಪಡೆದು ೨ ಮತಗಳ ಅಂತರದಿ0ದ ಸೋಲನ್ನು ಕಂಡಿತು.

ನೂತನ ಅಧ್ಯಕ್ಷರಾಗಿ ಎನ್ ಎಂ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲಾಗುವುದು. ಸದಸ್ಯರ ವಿಶ್ವಾಸದಿಂದ ಆಡಳಿತ ನಡೆಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪದ್ಮಮ್ಮ, ಸದಸ್ಯರುಗಳಾದ ಪ್ರಭಾಕರ್, ಕೃಷ್ಣಪ್ಪ, ಅಮರಾವತಿ ಶ್ರೀನಿವಾಸ್, ಚಂದ್ರಪ್ಪ, ಮುನಿರಾಜು, ತಬಸುಮ್ ಝಾಕೀರ್, ಗಾಯತ್ರಿ ಶ್ರೀವತ್ಸ, ಗೋಪಿನಾಥ್. ಕೆ ಹಾಗೂ ಗ್ರಾಮದ ಮುಖಂಡರುಗಳಾದ ಎನ್. ಪಿ. ಶ್ರೀನಿವಾಸ್, ಎಸ್.ಎಲ್ ವಿ ಗೋಪಿ, ಚಿನ್ನಯ್ಯ, ನವೀನ ಎನ್, ಕರವೇ ಶೇಖರ್, ಸತೀಶ್, ಪಾನಿಪುರಿ ವೆಂಕಟೇಶ್, ಚಿನ್ನಪ್ಪ ದಾಸ್, ದೇವ, ಮುರುಗೇಶ್, ಟಿ. ಬಾಬು, ಶಶಿ, ಕುಳ್ಳ ಮಂಜು, ಸುಜದ್ ಖಾನ್, ಹಾಗೂ ಫೈರೋಜ್ ಮತ್ತಿತರರು ಹಾಜರಿದ್ದರು.

ಚಿತ್ರ : ಕೋಲಾರ ತಾಲ್ಲೂಕು ನರಸಾಪುರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕುಮಾರ್ ಆಯ್ಕೆಯಾಗಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande