ಕೋಲಾರ, ೨೬ ಏಪ್ರಿಲ್ (ಹಿ.ಸ) :
ಆ್ಯಂಕರ್ : ಜಿಲ್ಲಾ ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ದಿವಾಕರ್ ಯಾದವ್ ಅವರನ್ನು ಜಿಲ್ಲಾ ಯಾದವ ಸಂಘದ ಆಶ್ರಯದಲ್ಲಿ ಸಂಘದ ಅಧ್ಯಕ್ಷ ಹಾಗೂ ಉದ್ಯಮಿ ವಕ್ಕಲೇರಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಸಮುದಾಯದ ಮುಖಂಡರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಉದ್ಯಮಿ ವಕ್ಕಲೇರಿ ನಾರಾಯಣಸ್ವಾಮಿ ಮಾತನಾಡಿ ಅತಿ ಹಿಂದುಳಿದ ಅನೇಕ ಜಾತಿಗಳ ಜತೆಗೆ ಯಾದವ ಸಮುದಾಯವೂ ಗುರುತಿಸಿಕೊಂಡಿದೆ, ಈ ಎಲ್ಲಾ ಸಮುದಾಯಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಡೆಸುವ ಯಾವುದೇ ಪ್ರಯತ್ನ ಹಾಗೂ ಹೋರಾಟಕ್ಕೆ ನಿಮ್ಮೊಂದಿಗೆ ನಿಲ್ಲುವುದಾಗಿಯೂ ಎಲ್ಲರೂ ಕೂಡಿ ಸಂಘಟಿತ ಹೋರಾಟ ನಡೆಸೋಣ ಎಂದು ತಿಳಿಸಿದರು.
ಸಮಾದಲ್ಲಿನ ಹಲವಾರು ಅತಿ ಹಿಂದುಳಿದ ವರ್ಗಗಳು ಸಮರ್ಪಕ ಮಾಹಿತಿ ಕೊರತೆ, ಸರ್ಕಾರದಿಂದ ಸಿಗಬಹುದಾದ ಸೌಲಭ್ಯಗಳಿಂದ ಹಾಗೂ ಅವಕಾಶಗಳಿಂದ ವಂಚಿತವಾಗಿವೆ ಅಂತಹ ಸಮುದಾಯಗಳಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸುವಲ್ಲಿ ವೇದಿಕೆ ಶ್ರಮಿಸಬೇಕು ಎಂದು ತಿಳಿಸಿದರು.
ಮೇಲ್ವರ್ಗಗಳ ಅಧಿಕಾರ,ಶಕ್ತಿಯ ನಡುವೆ ಹಿಂದುಳಿದ ವರ್ಗಗಳಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ, ಈ ನಿಟ್ಟಿನಲ್ಲಿ ರಾಜಕೀಯ ಶೈಕ್ಷಣಿಕ ಸಾಮಾಜಿಕವಾಗಿ ನಾವು ಹಿಂದುಳಿದಿದ್ದೇವೆ. ಈ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ನಿರಂತರವಾಗಿ ನಡೆಸಬೇಕಿದೆ ಎಂದರು.ಪ್ರವರ್ಗದಲ್ಲಿ ೯೦ ಜಾತಿಗಳು ಹಾಗೂ ಕ್ಯಾಟಗರಿ `ಎ' ದಲ್ಲಿ ೧೧೭ ಕ್ಕೂ ಉಪಜಾತಿಗಳು ಸೇರಿದಂತೆ ಸುಮಾರು ೨೦೭ ಜಾತಿಗಳಿದ್ದು, ಇವರು ಸರ್ಕಾರದಿಂದ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳಿಂದ ವಂಚಿತವಾಗಿವೆ ಎಂದರು.
ವೇದಿಕೆಯ ನೂತನ ಅಧ್ಯಕ್ಷ ದಿವಾಕರ್ ಯಾದವ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಪ್ರವರ್ಗ ೧ ಮತ್ತು ೨ ಎ ಗೆ ಸೇರ್ಪಡೆಯಾಗಿರುವ ವರ್ಗಗಳಲ್ಲಿ ೧೦೦ಕ್ಕೂ ಹೆಚ್ಚು ಉಪಜಾತಿಗಳು ಇರುವುದು ಅದರೆ ಇವುಗಳಿಗೆ ಶೇ ೧೫ ರಷ್ಟು ಮಾತ್ರ ಮೀಸಲಾತಿಯನ್ನು ನೀಡಲಾಗಿದೆ.ಇದರ ಜತೆಗೆ ಕೆಲವು ಮೇಲ್ಜಾತಿಗಳು ೨ಎ ವರ್ಗಕ್ಕೆ ಸೇರ್ಪಡೆ ಮಾಡಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ ಈ ನಿಟ್ಟಿನಲ್ಲಿ ಈ ಸಮುದಾಯಗಳ ಧ್ವನಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸರ್ವೇ ಇಲಾಖೆ ನೌಕರರ ಸಂಘದ ಗೌರವಾಧ್ಯಕ್ಷ ಜಿ.ಸುರೇಶ್‌ಬಾಬು, ಯಾದವ ಸಂಘದ ರಾಜ್ಯ ಸಮಿತಿ ಸದಸ್ಯ ಶ್ರೀನಿವಾಸಯಾದವ್, ಕೆಯುಡಿಎ ನಿರ್ದೇಶಕ ಕಿಲಾರಿಪೇಟೆ ಮಣಿ, ಸಮುದಾಯದ ಮುಖಂಡರಾದ ಕೆಎಂಕೆ ಗೋಪಾಲ್,ಕಿಲಾರಿಪೇಟೆ ಗೋಪಾಲ್,ನಿವೃತ್ತ ಪಿಡಿಒ ನಾಗರಾಜ್, ನರೇಶ್‌ಯಾದವ್, ನಿತೀಶ್ ಯಾದವ್, ಗಣೇಶ್, ರಾಕೇಶ್, ಚಾಕರಸನಹಳ್ಳಿ ಮಂಜು,ಮಣಿ,ಯುವ ಮುಖಂಡರಾದ ಮನೋಜ್, ಚಲಪತಿ, ಸಂದೀಪ್, ಚಂದು,ಸುನಿಲ್ ಮತ್ತಿತರರು ಹಾಜರಿದ್ದರು.
ಚಿತ್ರ : ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ದಿವಾಕರ್ ಯಾದವ್ ಅವರನ್ನು ಕೋಲಾರ ಜಿಲ್ಲಾ ಯಾದವ ಸಂಘದಿ0ದ ಸನ್ಮಾನಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್