ಸಂವಿಧಾನವನ್ನು ಅರಿತು ಗೌರವಿಸಬೇಕು : ಬೇಲೇರಿ
ಗದಗ, 26 ಏಪ್ರಿಲ್ (ಹಿ.ಸ.) : ಆ್ಯಂಕರ್ : ಭಾರತದ ಸಂವಿಧಾನವು ನಮ್ಮ ಹೆಮ್ಮೆಯಾಗಿದ್ದು, ಇದು ಭಾರತದ ಸರ್ವೋಚ್ಚ ಕಾನೂನು ಆಗಿದೆ. ಭಾರತೀಯ ಪೌರರಾದ ನಾವು ಸಂವಿಧಾನವನ್ನು ಅರಿತು ಗೌರವಿಸಬೇಕೆಂದು ಸಂಪನ್ಮೂಲ ಕವಿತಾ ಬೇಲೇರಿ ಹೇಳಿದರು. ಗದಗ ನಗರದ ಶಾಸ್ತ್ರೀಜಿ ಮಹಿಳಾ ಕಾಲೇಜಿನಲ್ಲಿ ಪ್ರಶಿಕ್ಷಣಾರ್ಥಿಗಳಿಗಾಗಿ
ಪೋಟೋ


ಗದಗ, 26 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಭಾರತದ ಸಂವಿಧಾನವು ನಮ್ಮ ಹೆಮ್ಮೆಯಾಗಿದ್ದು, ಇದು ಭಾರತದ ಸರ್ವೋಚ್ಚ ಕಾನೂನು ಆಗಿದೆ. ಭಾರತೀಯ ಪೌರರಾದ ನಾವು ಸಂವಿಧಾನವನ್ನು ಅರಿತು ಗೌರವಿಸಬೇಕೆಂದು ಸಂಪನ್ಮೂಲ ಕವಿತಾ ಬೇಲೇರಿ ಹೇಳಿದರು.

ಗದಗ ನಗರದ ಶಾಸ್ತ್ರೀಜಿ ಮಹಿಳಾ ಕಾಲೇಜಿನಲ್ಲಿ ಪ್ರಶಿಕ್ಷಣಾರ್ಥಿಗಳಿಗಾಗಿ ಏರ್ಪಡಿಸಿದ್ದ ಪೌರತ್ವ ತರಬೇತಿ ಶಿಬಿರದಲ್ಲಿ 'ನಮ್ಮ ಸಂವಿಧಾನ ನಮ್ಮ ಹೆಮ್ಮೆ' ವಿಷಯವಾಗಿ ಉಪನ್ಯಾಸ ನೀಡಿದರು. ನಮ್ಮ ದೇಶವು ಸರ್ವ ಜನಾಂಗದ ತೋಟವಾಗಿದೆ. ಸಮನ್ವಯತೆ, ಭ್ರಾತೃತ್ವ, ಭಾವೈಕ್ಯತೆ ನೆಲೆ ನಿಂತಿದೆ. ಪ್ರತಿಯೊಬ್ಬರಿಗೂ ಹಕ್ಕು ಮತ್ತು ಕರ್ತವ್ಯಗಳಿದ್ದು, ಅವುಗಳನ್ನು ಸದ್ವಿನಿಯೋಗಗೊಳಿಸಬೇಕೆಂದರು.

ಜೆ.ಸಿ.ಎಸ್ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಮಹಾಂತ ಕಾರ್ಯಕ್ರಮ ಮಾತನಾಡಿ, ಹಿರೇಮಠ ಉದ್ಘಾಟಿಸಿ ಭಾರತವು ಸುಖ, ಶಾಂತಿ, ಸಮೃದ್ಧಿಯ ಆಗರವಾಗಿದ್ದು, ಇಲ್ಲಿಯ ಪೌರರಾದ ನಾವು ಪುಣ್ಯವಂತರು.

ಮುಖ್ಯವಾಗಿ ದೇಶಾಭಿಮಾನ ಬರಬೇಕು ಎಂದರು.

ಪೌರತ್ವ ತರಬೇತಿ ಶಿಬಿರದ ಸಂಯೋಜಕರಾದ ಪ್ರೊ. ಎಂ.ಸಂದೀಪ ಮಾತನಾಡಿ, ಭವ್ಯ ಭಾರತಕ್ಕೆ ಬಹು ದೊಡ್ಡ ಇತಿಹಾಸವಿದ್ದು, ಪ್ರಜಾಪ್ರಭುತ್ವ ರಾಷ್ಟ್ರವಾದ ನಮ್ಮಲ್ಲಿ ಸಂಸ್ಕೃತಿ, ಮೌಲ್ಯಗಳು ನಮಗೆ ಸದಾ ದಾರಿ ತೋರುತ್ತವೆ ಎಂದರು.

ಪ್ರೊ. ನಿರ್ಮಲಾ ಮಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ದೇಶದ ಇತಿಹಾಸದ ಪುಟಗಳಲ್ಲಿ ಧರ್ಮ, ತ್ಯಾಗದ ಮೂಡಿ ಬಂದಿವೆ. ಹಿರಿಯರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದರು.

ವೇದಿಕೆಯ ಮೇಲೆ ಶಾಲಾ ಆಡಳಿತ ಮಂಡಳಿಯ

ಪ್ರಾಚಾರ್ಯರಾದ, ಶಿಲ್ಪಾ ಹೊನ್ನಗುಡಿ ವಹಿಸಿ, ಮಾತನಾಡಿ, ವಿದ್ಯಾರ್ಥಿ ಹಂತದಲ್ಲಿ ಮಕ್ಕಳಿಗೆ ದೇಶಾಭಿಮಾನ ಮೂಡಿಸುವ ಕೆಲಸವಾಗಬೇಕು. ಪೌರತ್ವ ಶಿಬಿರವು ಇದಕ್ಕೆ ಪೂರಕವಾಗಿದೆ ಎಂದರು.

ಸದಸ್ಯರಾದ ಅಕ್ಷಯ ಹಿರೇಮಠ, ಕುಸುಮಾ ಹಿರೇಮಠ, ಪ್ರೊ. ಎಸ್.ಡಿ. ದೇಶಪಾಂಡೆ, ಪ್ರೊ. ರಾಜೇಸಾಬ ಕೆರೂರ, ಪ್ರೊ. ಗಂಗಪ್ಪ ಎಚ್.

ಸಂಜನಾ ಹಿರೇಮಠ, ಸುಷ್ಮಾ ಗಾಣಿಗೇರ ಪ್ರಾರ್ಥಿಸಿದರು. ಪೂಜಾ ಮದಗುಣಕಿ ಸ್ವಾಗತಿಸಿದರು. ಪ್ರೊ. ವನಜಾಕ್ಷೀ ಅರಳೇಲೇಮಠ ಪರಿಚಯಿಸಿದರು. ಮೇಘಾ ತಾಂತಿ ನಿರೂಪಿಸಿದರು. ಶಕುಂತಲಾ ಗುಳೇದ ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande