ಕೋಲಾರ, ೦೨ ಏಪ್ರಿಲ್ (ಹಿ.ಸ) :
ಆ್ಯಂಕರ್ : ನಗರದ ಹೊರ ವಲಯದ ಶತಶೃಂಗ ಪರ್ವತ ಶ್ರೇಣಿ ಜಲ ಮೂಲವಾಗಿದೆ. ಅಲ್ಲದೆ ಜೀವ ಜಲ ಮೂಲವಾಗಿದ್ದು, ಬೇಸಿಗೆಯಿಂದಾಗಿ ಜಲ ಮೂಲಗಳು ಬತ್ತಿ ಹೋಗಿವೆ. ಪ್ರಾಣಿ ಮತ್ತು ಪಕ್ಷಿಗಳು ಆಹಾರ ಮತ್ತು ನೀರು ಇಲ್ಲದೆ ಅಳಿವನ ಹಂಚಿನಲ್ಲಿದೆ. ಅಳಿಲು ಸೇವೆ ತಂಡದಿAದ ನೀರು ಮತ್ತು ಆಹಾರ ಒದಗಿಸಲಾಯಿತು.
ಕೋಲಾರ ನಗರದ ಅಂತರಗAಗೆ ತಪ್ಪಲಿನಲ್ಲಿ ಅಳಿಲು ಸೇವೆ ತಂದಿAದ ಕೋಲಾರ ವತಿಯಿಂದ ಬೆಟ್ಟದ ವನ್ಯ ಜೀವಗಳಿಗೆ ನೀರು ಮತ್ತು ಆಹಾರ ನೀಡಲಾಯಿತು. ಅಳಿಲು ಸೇವೆ ತಂಡದ ಸಚ್ಚಿದನಂದ ಮಾತನಾಡಿ ಕಳೆದ ೫- ೬,ವರ್ಷಗಳಿಂದ ಪ್ರಾಣಿ ಪಕ್ಷಿಗಳಿಗೆ, ಬೇಸಿಗೆ ಕಾಲದಲ್ಲಿ ಈ ಕಾರ್ಯವನ್ನು ಮಾಡುತ್ತ ಬಂದಿದ್ದೇವೆ ,ಈ ವರ್ಷ ಸಹ ನಾವು ಜೀವ ಸಂಕುಲ ಉಳಿಸುವ ಸಲುವಾಗಿ ನಮ್ಮ ಅಳಿಲು ಸೇವೆ ತಂಡದೊ0ದಿಗೆ ನಡೆಸಲಾಗುತ್ತಿದೆ, ಅಳಿಲುಬಸೇವೆ ತಂಡದ ಎಲ್ಲಾ ಸ್ವಯಂಸೇವಕರು ಮತ್ತು ಸ್ನೇಹಿತರ ಸಹಕಾರದಿಂದ ಕಾರ್ಯ ನಡೆಯುತ್ತಿದ್ದು ಅವರಿಗೂ ಸಹ ಧನ್ಯವಾದ ತಿಳಿಬಯಸುತ್ತೇನೆಂದರು.
ಸುದರ್ಶನ ಮಾತನಾಡಿ ಅಂತರಗAಗೆ ಬರುವ ಪ್ರವಾಸಿಗರು ಪ್ಲಾಸ್ಟಿಕ್ ಬಾಟಲ್ ನಿಯಂತ್ರಿಸಿ ಸ್ವಚ್ಚತೆ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ, ಅರಣ್ಯ ಮತ್ತು ವನ್ಯ ಸಂಪತ್ತು ಉಳಿಸಿದರೆ ಪರ್ಯಾವರಣ (ಪರಿಸರ) ಉಳಿಯುವುದು, ಇಲ್ಲವಾದರೆ ಮುಂದಿನ ಮಕ್ಕಳಿಗೆ ನಮ್ಮ ಕೊಡುಗೆ ಏನು ಎಂಬುದು ಪ್ರಶ್ನೆ ಉಳಿಯುತ್ತದೆ, ಹಾಗೂ ಬೇಸಿಗೆ ಕಾಲದಲ್ಲಿ ಕಾಡ್ಗಿಚ್ಚು ಹಬ್ಬುತ್ತದೆ, ಇದು ಪ್ರಕೃತಿಯ ನಿಯಮವಲ್ಲ, ಇದು ಮನುಷ್ಯನ ಬುದ್ದಿ ಹೀನದ ಕೃತ್ಯ ಎಂದು ಹೇಳಿದರು,
ಕಾರ್ಯಕ್ರಮದಲ್ಲಿ ಬರಯವಂತಹ ಪ್ರವಾಸಿಗರಿಗೆ ಕರಪತ್ರದ ಮೂಲಕ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಸಚಿನ್, ಅಕ್ಷತಾ, ಯುವನ್, ಸ್ನೇಹ ಮನೋಜ್, ಶ್ರವಣ್, ಸುಷ್ಮಾ, ಅಚ್ಯುತ್ ಸುದರ್ಶನ್, ಕುಸುಮ, ರಜತ್, ಮುರುಳಿ,ಭರತ್, ಪರ್ಯಾವರಣ ಗತಿವಿಧಿ ಸಂಯೋಜಕ ಮಹೇಶ್ ರಾವ್ ಕದಂ ಭಾಗವಹಿಸಿದ್ದರು.
ಚಿತ್ರ : ಕೋಲಾರ ತಾಲ್ಲೂಕು ಶತಶೃಂಗ ಪರ್ವತ ಶ್ರೇಣಿಯ ಅಂತರಗAಗೆ ಬೆಟ್ಟದಲ್ಲಿ ಅಳಿಲು ಸೇವೆ ತಂಡದಿ0ದ ಪ್ರಾಣಿ ಪಕ್ಷಿಗಳಿಗೆ ನೀರು ಮತ್ತು ಆಹಾರ ಒದಗಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್