ಸಿರುಗುಪ್ಪ, 17 ಏಪ್ರಿಲ್ (ಹಿ.ಸ.)
ಆ್ಯಂಕರ್: ಸಿರುಗುಪ್ಪ ಪಟ್ಟಣದಲ್ಲಿರುವ ವಕ್ಫ್ ಸಂಸ್ಥೆಯಾದ ಮುಸ್ಲಿಂ ಈದ್ಗಾ ಮತ್ತು ಖಬರಸ್ತಾನ್(ಸುನ್ನಿ) ವಕ್ಫ್ ಸಂಸ್ಥೆಗೆ ಹೊಸ ಸಮಿತಿ ರಚಿಸುವ ನಿಮಿತ್ತ ಏ.21 ರಿಂದ ಮೇ 10 ರ ವರೆಗೆ ಚುನಾವಣಾ ಪ್ರಕ್ರಿಯೆ ನಡೆಯಲಿದೆ ಎಂದು ಸಿರುಗುಪ್ಪದ ಮುಸ್ಲಿಂ ಈದ್ಗಾ ಮತ್ತು ಖಬರಸ್ತಾನ್(ಸುನ್ನಿ) ಆಡಳಿತಾಧಿಕಾರಿ ನೂರ್ ಪಾಷಾ ಅವರು ತಿಳಿಸಿದ್ದಾರೆ.
ಅರ್ಹ ಅಭ್ಯರ್ಥಿಗಳು ಚುನಾವಣಾ ನಾಮಪತ್ರವನ್ನು ಏ.21 ರ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2.30 ಗಂಟೆವರೆಗೆ ಸಿರುಗುಪ್ಪದ ಮುಸ್ಲಿಂ ಈದ್ಗಾ ಮತ್ತು ಖಬರಸ್ತಾನ್(ಸುನ್ನಿ) ಕಚೇರಿಯಿಂದ ಪಡೆದು ಭರ್ತಿ ಮಾಡಿ, ಸೂಕ್ತ ದಾಖಲೆಗಳೊಂದಿಗೆ ಏ.27 ರ ಮಧ್ಯಾಹ್ನ 2.30 ಗಂಟೆಯೊಳಗೆ ಸಲ್ಲಿಸಬಹುದು.
ಏ.28 ರ ಬೆಳಿಗ್ಗೆ 11.30 ಗಂಟೆಯಿಂದ ನಾಮಪತ್ರ ಪರಿಶೀಲನೆ ನಡೆಯಲಿದೆ. ಏ.29 ರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 02 ಗಂಟೆಯವರೆಗೆ ನಾಮಪತ್ರ ಹಿಂದಕ್ಕೆ ಪಡೆಯಲು ಅವಕಾಶ ಇರುತ್ತದೆ. ಅದೇ ದಿನ ಮಧ್ಯಾಹ್ನ 03.30 ಗಂಟೆಯ ನಂತರ ಚುನಾವಣಾ ಚಿನ್ಹೆಗಳ ಹಂಚಿಕೆ ಮಾಡಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗುವುದು.
ಮೇ 10 ರ ಶನಿವಾರ ಬೆಳಿಗ್ಗೆ 08 ಗಂಟೆಯಿಂದ ಮಧ್ಯಾಹ್ನ 03 ಗಂಟೆಯವರೆಗೆ ಸಿರುಗುಪ್ಪ ಪಟ್ಟಣದ ತಾಲ್ಲೂಕು ಕ್ರೀಡಾಂಗಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಮುಸ್ಲಿಂ ಈದ್ಗಾ ಮತ್ತು ಖಬರಸ್ತಾನ್(ಸುನ್ನಿ)ವಕ್ಫ್ ಸಂಸ್ಥೆಗೆ ಚುನಾವಣೆ ನಡೆಸಿ, ಅದೇ ದಿನ ಸಂಜೆ 04 ಗಂಟೆಯಿಂದ ಮತ ಎಣಿಕೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್