ನೇಹಾ ಹಿರೇಮಠ್ ಕೊಲೆಗಡುಕನಿಗೆ ಗಲ್ಲು : ಮೆರವಣಿಗೆ ಸತ್ಯಾಗ್ರಹ
ನೇಹಾ ಹಿರೇಮಠ್ ಕೊಲೆಗಡುಕನಿಗೆ ಗಲ್ಲು : ಮೆರವಣಿಗೆ ಸತ್ಯಾಗ್ರಹ
ಸತ್ಯಾಗ್ರಹ


ಸತ್ಯಾಗ್ರಹ


ಬೆಂಗಳೂರು, 18 ಏಪ್ರಿಲ್ (ಹಿ.ಸ.):

ಆ್ಯಂಕರ್ : ಹುಬ್ಬಳ್ಳಿಯ ವಿದ್ಯಾರ್ಥಿನಿ

ನೇಹಾ ಹಿರೇಮಠ್ ರನ್ನು ಹತ್ಯೆ ಮಾಡಿದ ಕೊಲೆಗಡುಕನಿಗೆ ಗಲ್ಲು ಶಿಕ್ಷೆ ಆಗಲೇಬೇಕೆಂದು ಒತ್ತಾಯಿಸಿ ಮೇಣಬತ್ತಿಯ ಮೆರವಣಿಗೆಯ ಸತ್ಯಾಗ್ರಹ

ಹುಬ್ಬಳ್ಳಿಯ ವಿದ್ಯಾರ್ಥಿನಿ ಕುಮಾರಿ ನೇಹಾ ಹಿರೇಮಠ್ ಇವರನ್ನು ಹುಬ್ಬಳ್ಳಿಯ ಕಾಲೇಜು ಆವರಣದಲ್ಲಿ ಕೊಲೆ ಮಾಡಿದ ಪಾಪಿ ಫಯಾಜ್ ಎನ್ನುವ ದ್ರೋಹಿಗೆ ಗಲ್ಲು ಶಿಕ್ಷೆ ಆಗಲೇಬೇಕೆಂದು ಒತ್ತಾಯಿಸಿ

ಬಳ್ಳಾರಿಯ ಗಡಿಗಿ ಚನ್ನಪ್ಪ ವೃತ್ತದಿಂದ

ಮೇಣಬತ್ತಿಯ ಮೆರವಣಿಗೆ ಆರಂಭಿಸಿ

ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದ ಗಾಂಧಿ ಪ್ರತಿಮೆ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಯಿತು

ನೆಹಾ ಹಿರೇಮಠ್ ಕೊಲೆಯಾಗಿ ಇಂದಿಗೆ ಒಂದು ವರ್ಷವಾಗಿದೆ. ಕಳೆದ ವರ್ಷ ಇದೇ ದಿನ ಅವರ ಕೊಲೆಯಾಗಿದೆ. ಅವರ ಆತ್ಮಕ್ಕೆ ಶಾಂತಿ ಕೋರಿ ಗಾಂಧಿ ಪ್ರತಿಮೆ ಎದುರು ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಳೆದ ವರ್ಷ ಇವರ ಕೊಲೆಯಾದಾಗ

ಮುಖ್ಯಮಂತ್ರಿಗಳು ತ್ವರಿತ ನ್ಯಾಯಾಲಯ ರಚನೆ ಮಾಡುವುದರ ಮೂಲಕ ಕೊಲೆಗಡುಕ ರಿಗೆ ಶಿಕ್ಷೆ ಕೊಡಿಸುವುದಾಗಿ ಹೇಳಿದ್ದು ಇಲ್ಲಿಯವರೆಗೆ ವಿಶೇಷ ನ್ಯಾಯಾಲಯ ರಚನೆಯಾಗಲಿಲ್ಲ. ಕೂಡಲೇ ತ್ವರಿತ ನ್ಯಾಯಾಲಯದ ರಚನೆ ಆಗಬೇಕು.

ನ್ಯಾಯಾಧೀಶರು ಕೊಲೆಗಡುಕನಿಗೆ ಗಲ್ಲು ಶಿಕ್ಷೆ ವಿಧಿಸಲೇಬೇಕೆಂದು ಒತ್ತಾಯಿಸಿದರು.

ಸತ್ಯಾಗ್ರಹದಲ್ಲಿ ಜನಪರ ಹೋರಾಟಗಾರ

ಕೆ.ಎಂ.ಮಹೇಶ್ವರ ಸ್ವಾಮಿ, ಕಲಾವಿದರ ಸಂಘದ ಜಗದೀಶ್, ವೀರಶೈವ ಮಹಾಸಭಾದ ಪದಾಧಿಕಾರಿಗಳಾದ

ಕರೆಗೌಡ, ಗಂಗಾವತಿ ವೀರೇಶ್, ಅಧ್ಯಕ್ಷ ಪಂಚಾಕ್ಷರಿ, ನೌಕರ ಸಂಘದ ಅಧ್ಯಕ್ಷ ಚನ್ನಬಸವ ಸ್ವಾಮಿ, ಕಾರ್ಪೊರೇಟರ್ ಅಶೋಕ್, ಬಂದ್ರಾಳು ಮೃತ್ಯುಂಜಯ ಸ್ವಾಮಿ

ಗೋನಾಳ್ ನಾಗಭೂಷಣ್ ಗೌಡ,

ಸುಮಾ ರೆಡ್ಡಿ ಮುಂತಾದವರು ಮಾತನಾಡಿದರು.

ಬಳ್ಳಾರಿ ಜಿಲ್ಲಾ ವೀರಶೈವ ಮಹಾಸಭಾ

ಪ್ರಜ್ಞಾವಂತ ನಾಗರಿಕರ ವೇದಿಕೆ, ವೀರಶೈವ ನೌಕರರ ಸಂಘ, ಮುಂತಾದ ಸಂಘಟನೆ ಪದಾಧಿಕಾರಿಗಳಾದ ಪಿ. ಬಂಡೇಗೌಡ, ಕೋರಿ ವಿರೂಪಾಕ್ಷಪ್ಪ, ಎಣ್ಣೆ ಎರ್ರಿಸ್ವಾಮಿ,

ಎಚ್. ಕೆ. ಗೌರಿಶಂಕರ, ಪುಟ್ಟು, ಬಿಸಲಳ್ಳಿ ಬಸವರಾಜ್, ಕೆ.ಪಿ. ಚನ್ನಬಸವರಾಜ್, ಪಿ.ಪಿ. ಎರ್ರಿಸ್ವಾಮಿ, ಎ. ಪಿ. ಉಮೇಶ್, ಬಸವರಾಜ್ ಚಿನ್ನು ಉಪ್ಪಾರ್ ಹೊಸಳ್ಳಿ ಸುರೇಶ್ ಗೌಡ

ಭ್ರಮರಾಂಬ, ಶಿವಕುಮಾರ್ ಕೆ.ಎಂ.,

ಮಂಜುನಾಥ ಸ್ವಾಮಿ, ಆದೋನಿ ವೀರೇಶ್,

ಬಸವರಾಜ್ ಸ್ವಾಮಿ, ರಾಜಶೇಖರ್

ಜಾಲಿಹಾಳ, ಶ್ರೀಧರ್ ಗೌಡ

ಹೋರಾಟದಲ್ಲಿ ಭಾಗವಹಿಸಿದ್ದರು

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ


 rajesh pande