ಕಲಬುರಗಿ, 19 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕಲಬುರಗಿಯಲ್ಲಿ ಬಿಜೆಪಿ/ ಕಾಂಗ್ರೆಸ್ ಜಟಾಪಟಿ ಮುಂದುವರೆದಿದ್ದು, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮತ್ತೆ ಗುಡುಗಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕ್ ಖರ್ಗೆ ಅವರಿಗೆ ಮಣಿಕಂಠ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಿನಿಸ್ಟರ್ ಪಿಕೆ ಇನ್ನು ಮುಂದೆ ನಿನ್ನ ಆಟ ನಡೆಯುವುದಿಲ್ಲ. ನೀವು ಮಾಡುತ್ತಿರುವ ಅವ್ಯವಹಾರಗಳನ್ನು ಇಲ್ಲಿ ನಿಲ್ಲಿಸಿ, ನಿಮ್ಮ ಪಾಪದ ಕೋಡ ತುಂಬಿದೆ.. ನೀವು ಮಾಡಿದ ಹಗರಣಗಳ ಪಟ್ಟಿ ರೆಡಿಯಾಗುತ್ತಿದೆ.! ನೀನಗೂ ನಿನ್ನ ಚೇಲಾಗಳಿಗೆ ಇನ್ನು ಮುಂದೆ ಉಳಿಗಾಲವಿಲ್ಲ. ನನ್ನ ಮೇಲೆ ಸುಳ್ಳು ಕೇಸ್ ಹಾಕಿದ್ರೆ ನಾನು ಹೆದರಿ ಹಿಂದೆ ಸರಿಯುವುದಿಲ್ಲ. ಎಂದು ಪ್ರಿಯಾಂಕ್ ಖರ್ಗೆ ಅವರಿಗೆ ಮಣಿಕಂಠ ಸವಾಲು ಹಾಕಿದ್ದಾರೆ.
ಇನ್ನು ನಿನ್ನೆಯಷ್ಟೆ ಕಲಬುರಗಿಗೆ ಆಗಮಿಸಿ ಜನಾಕ್ರೋಶ ಯಾತ್ರೆ ನಡೆಸಿದ್ದ ಬಿ. ವೈ. ವಿಜಯೇಂದ್ರ, ಬಿಜೆಪಿ ನಾಯಕರಿಗೆ ಪ್ರಿಯಾಂಕ್ ಖರ್ಗೆ ವ್ಯಂಗ್ಯ ಭರಿತ ಸ್ವಾಗತ ಮಾಡಿ ಪೋಸ್ಟ್ ಹಾಕಿದ್ರು. ಅದಕ್ಕೆ ಮಣಿಕಂಠ ರಾಠೋಡ್ ಪ್ರಿಯಾಂಕ್ ಖರ್ಗೆ ಅವರಿಗೆ ಸವಾಲು ಹಾಕಿದ್ದಾರೆ
ಹಿಂದೂಸ್ತಾನ್ ಸಮಾಚಾರ್ / Samarth biral