ಯುಗಾದಿ ಬೇಟೆ : ಶಾಸಕ ಪುತ್ರ, ಸಹೋದರನ ವಿರುದ್ಧ ಆಕ್ರೋಶ
ರಾಯಚೂರು, 01 ಏಪ್ರಿಲ್ (ಹಿ.ಸ.) : ಆ್ಯಂಕರ್ : ಯುಗಾದಿ ಹಬ್ಬದ ಅಂಗವಾಗಿ ಕಾಡು ಪ್ರಾಣಿಗಳನ್ನು ಬೇಟೆಯಾಡುವುದು ಸಹಜ. ಆದರೆ, ವನ್ಯಜೀವಿಗಳನ್ನು ಬೇಟೆಯಾಡಿ ದೊಡ್ಡದಾಗಿ ಮೆರವಣಿಗೆಯಲ್ಲಿ ಮನೆಗೆ ಬಂದಿರುವ ಮಸ್ಕಿಯ ಶಾಸಕ, ಕಾಂಗ್ರೆಸ್‍ನ ಆರ್. ಬಸನಗೌಡ ತುರುವಿಹಾಳ್ ಅವರ ಪುತ್ರ ಮತ್ತು ಸಹೋದರನ ಮೇಲೆ ಮೊಲ
ಯುಗಾದಿ ಬೇಟೆ : ಮೊಲಗಳನ್ನು ಕಟ್ಟಿಗೆಗೆ ಕಟ್ಟಿ ಮೆರವಣಿಗೆ  ಕಾಂಗ್ರೆಸ್ ಶಾಸಕನ ಪುತ್ರ, ಸಹೋದರನ ವಿರುದ್ಧ ಆಕ್ರೋಶ


ರಾಯಚೂರು, 01 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಯುಗಾದಿ ಹಬ್ಬದ ಅಂಗವಾಗಿ ಕಾಡು ಪ್ರಾಣಿಗಳನ್ನು ಬೇಟೆಯಾಡುವುದು ಸಹಜ. ಆದರೆ, ವನ್ಯಜೀವಿಗಳನ್ನು ಬೇಟೆಯಾಡಿ ದೊಡ್ಡದಾಗಿ ಮೆರವಣಿಗೆಯಲ್ಲಿ ಮನೆಗೆ ಬಂದಿರುವ ಮಸ್ಕಿಯ ಶಾಸಕ, ಕಾಂಗ್ರೆಸ್‍ನ ಆರ್. ಬಸನಗೌಡ ತುರುವಿಹಾಳ್ ಅವರ ಪುತ್ರ ಮತ್ತು ಸಹೋದರನ ಮೇಲೆ ಮೊಲಗಳನ್ನು ಬೇಟೆಯಾಡಿ, ಕಟ್ಟಿಗೆಗೆ ಕಟ್ಟಿ, ಮೆರವಣಿಗೆ ಮಾಡಿ, ವನ್ಯಜೀವಿಗಳ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಮಾಡಿರುವ ಆರೋಪ ಕೇಳಿ ಬರುತ್ತಿದೆ.

ಯುಗಾದಿಯ ಕರಿಯ ದಿನದಂದು, ಹೊಸ ತೊಡಕಿಗಾಗಿ ವನ್ಯಜೀವಿನಗಳನ್ನು ಬೇಟೆ ಆಡುವ ಸಂಪ್ರದಾಯ ಕೆಲವೆಡೆ ಆಚರಣೆಯಲ್ಲಿದೆ ಎಂದು ಹೇಳಲಾಗಿದೆ. ಈ ಆಚರಣೆಯ ಹಿನ್ನಲೆಯಲ್ಲಿ ಮಸ್ಕಿಯ ಶಾಸಕ, ಕಾಂಗ್ರೆಸ್‍ನ ಆರ್. ಬಸನಗೌಡ ತುರುವಿಹಾಳ್ ಅವರ ಪುತ್ರ ಮತ್ತು ಸಹೋದರ ತಮ್ಮ ಆಪ್ತರ ಜೊತೆಗೂಡಿ ಮೊಲವನ್ನು ಬೇಟೆಯಾಗಿ ಮೃತ ಮೊಲವನ್ನು ಕಟ್ಟಿಗೆಗೆ ಕಟ್ಟಿಕೊಂಡು ದೊಡ್ಡ ಮೆರಣವಣಿಗೆಯಲ್ಲಿ ಮನೆಗೆ ತಂದಿದ್ದರು ಎಂದು ಹೇಳಲಾಗಿದೆ.

ವನ್ಯಜೀವಿ ಸಂರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡುವವರು ಶಾಸಕರ ಪುತ್ರ ಮತ್ತು ಸಹೋದರನ ಕೃತ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಈವರೆಗೆ ಯಾವ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿಲ್ಲ ಎಂದು ಹೇಳಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande