ಡಿಸೇಲ್ ಬೆಲೆ ಏರಿಕೆ : ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ
ಗದಗ, 02 ಏಪ್ರಿಲ್ (ಹಿ.ಸ.) : ಆ್ಯಂಕರ್ : ಏಪ್ರಿಲ್ 1 ರಿಂದ ಜಾರಿಯಾಗುವಂತೆ ರಾಜ್ಯ ಸರ್ಕಾರ ಈಗಾಗಲೇ ವಿದ್ಯುತ್, ಹಾಲು ಬಳಿಕ ಈಗ ರಾತ್ರೋರಾತ್ರಿ ಪ್ರತಿ ಲೀಟರ್ ಡಿಸೇಲ್ 2 ರೂಪಾಯಿ ಹೆಚ್ಚಿಗೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದ್ದು ಇದರಿಂದ ರಾಜ್ಯದ ಜನತೆಗೆ ಮತ್ತೊಂದು ಹೊರೆಯನ್ನ ರಾಜ್ಯ ಸರ್ಕಾರ ಹೊರಸಿದೆ ಎ
ಫೋಟೋ


ಗದಗ, 02 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಏಪ್ರಿಲ್ 1 ರಿಂದ ಜಾರಿಯಾಗುವಂತೆ ರಾಜ್ಯ ಸರ್ಕಾರ ಈಗಾಗಲೇ ವಿದ್ಯುತ್, ಹಾಲು ಬಳಿಕ ಈಗ ರಾತ್ರೋರಾತ್ರಿ ಪ್ರತಿ ಲೀಟರ್ ಡಿಸೇಲ್ 2 ರೂಪಾಯಿ ಹೆಚ್ಚಿಗೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದ್ದು ಇದರಿಂದ ರಾಜ್ಯದ ಜನತೆಗೆ ಮತ್ತೊಂದು ಹೊರೆಯನ್ನ ರಾಜ್ಯ ಸರ್ಕಾರ ಹೊರಸಿದೆ ಎಂದು ಬಿಜೆಪಿ ಗದಗ ಜಿಲ್ಲಾ ವಕ್ತಾರರಾದ ಎಂ.ಎಂ.ಹಿರೇಮಠರವರು ರಾಜ್ಯ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಏರುಗತಿಯಲ್ಲಿ ಸಾಗಿರುವ ತೆರಿಗೆ ಹೇರಿಕೆಯ ಭಾಗ ಇದಿಗ ಡಿಸೈಲ್ ಮಾರಾಟದ ಮೇಲೂ ಬಿದ್ದಿದ್ದು 18.44% ಇದ್ದ ಮಾರಾಟ ತೆರಿಗೆಯನ್ನು ರಾಜ್ಯ ಕಾಂಗ್ರೇಸ್ ಸರ್ಕಾರ ಇದೀಗ 21.17% ಕ್ಕೆ ಏರಿಸಿದೆ. ಇದರಿಂದ ಡಿಸೈಲ್ ಧರ ಸರಾಸರಿ 2 ರೂಪಾಯಿ ಹೆಚ್ಚಳವಾಗಿದೆ. ಈಗಾಗಲೇ ಬೆಲೆ ಏರಿಕೆಯ ಸರಣಿಯಿಂದ ಜನರು ಕಂಗಾಲಾಗಿದ್ದು ಒಂದರ ಹಿಂದೆ ಮತ್ತೊಂದರಂತೆ ಅಗತ್ಯ ವಸ್ತುಗಳು ದುಬಾರಿಯಾಗಲಾರಂಬಿಸಿವೆ. ಡಿಸೈಲ್ ಧರ ಏರಿಕೆಯ ಪರಿಣಾಮದಿಂದ ಬಹುತೇಕ ಎಲ್ಲ ವಿಧದ ವಾಹನಗಳ ಮೇಲೂ ಬೀರಲಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಸರದಿಯು ಪ್ರಾರಂಭವಾಗಲಿದೆ ಎಂಬ ಆತಂಕ ಎಲ್ಲರಲ್ಲೂ ಮನೆ ಮಾಡಿದೆ. ಡಿಸೈಲ್ ಬೆಲೆ ಏರಿಕೆಯಿಂದಾಗಿ ಸರಕು ಸಾಗಣೆ ದುಬಾರಿಯಾದರೆ ಬದುಕು ದುಸ್ತರವಾಗುತ್ತದೆ.

ಈಗ ಕೆಲವು ದಿನಗಳ ಹಿಂದೆ 15% ರಷ್ಟು ಬಸ್ ಧರವನ್ನು ಹೆಚ್ಚಿಗೆ ಮಾಡಿತ್ತು ಈಗಾಗಲೇ ಸಾರಿಗೆ ನಿಗಮ ಸಾಕಷ್ಟು ನಷ್ಟದಲ್ಲಿದ್ದು, ಈ ಮಧ್ಯೆ ಡಿಸೈಲ್ ಧರ ಏರಿಕೆಯಿಂದ ಸಾರಿಗೆ ನಿಗಮಗಳ ಶಕ್ತಿ ಇನ್ನಷ್ಟು ಕುಂದುವ ಭಯ ಕಾಡಲಾರಂಬಿಸಿದೆ. ಹಿಂದೆ ಬೊಮ್ಮಾಯಿರವರು ಮುಖ್ಯಮಂತ್ರಿಗಳಿದ್ದಾಗ ಡಿಸೈಲ್ ಹಾಗು ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಬಹಳಷ್ಟು ಕಡಿಮೆ ಮಾಡಿದ್ದರು. ಆದರೆ ಈಗಿನ ಸರ್ಕಾರ ಪ್ರತಿ ದಿವಸವು ಕೂಡಾ ಒಂದೊಂದು ವಸ್ತುವಿನ ಬೆಲೆಯನ್ನು ಏರಿಸುತ್ತಾ ಹೋಗಿ ಸಾಮಾನ್ಯ ಜನರ ಜೀವನದೊಂದಿಗೆ ಚಲ್ಲಾಟವಾಡುತ್ತಿರುವದು ಇದರಿಂದ ಜನ ರಾಜ್ಯ ಸರ್ಕಾರದ ಬಗ್ಗೆ ವಿಶ್ವಾಸವನ್ನು ಕಳೆದುಕೊಂಡಿರುವರು.

ಈಗ ಏರಿಸಿರುವ ವಿದ್ಯುತ್, ಹಾಲು ಹಾಗು ಡಿಸೇಲ್ ಬೆಲೆಯನ್ನು ಇಳಿಸಬೇಕೆಂದು ಜಿಲ್ಲಾ ವಕ್ತಾರರಾದ ಎಂ.ಎಂ.ಹಿರೇಮಠ, ಸಹ ವಕ್ತಾರರಾದ ದತ್ತಣ್ಣ ಜೋಶಿ, ಮಾಧ್ಯಮ ಪ್ರಮುಖ ರಾಜು ಹೊಂಗಲ, ಸಹ ಪ್ರಮುಖ ಶ್ರೀನಿವಾಸ ಹುಬ್ಬಳ್ಳಿ, ನಗರ ಮಂಡಲ ಅದ್ಯಕ್ಷ ಸುರೇಶ ಮರಳಪ್ಪನವರ, ಗ್ರಾಮೀಣ ಅಧ್ಯಕ್ಷ ಬೂದಪ್ಪ ಹಳ್ಳಿ ಮುಂತಾದವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande