ಗ್ಯಾರೆಂಟಿ ಗ್ಯಾರೆಂಟಿ ಎಂದ ಸರ್ಕಾರ, ಈಗ ಬೆಲೆ ಹೆಚ್ಚಿಸುತ್ತಲೇ ಇದೆ : ಜಿ. ಸೋಮಶೇಖರರೆಡ್ಡಿ
ಬಳ್ಳಾರಿ, 01 ಏಪ್ರಿಲ್ (ಹಿ.ಸ.) : ಆ್ಯಂಕರ್ : ವಿಧಾನ ಸಭಾ ಚುನಾವಣಾ ಪ್ರಚಾರದಲ್ಲಿ ಫ್ರೀ ಫ್ರೀ, ಗ್ಯಾರೆಂಟಿಗಳನ್ನು ಹೇಳುತ್ತಲೇ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರು ಯುಗಾದಿ ಆಗುತ್ತಿದ್ದಂತೆಯೇ ರಾಜ್ಯದ ಜನಸಾಮಾನ್ಯರಿಗೆ ಬಲೆ ಏರಿಕೆಯ ಬಿಸಿಯನ್ನು ಹೆಚ್ಚಿಸಿದ್ದು, ಬುಧವಾರದಿಂದ ರ
ಗ್ಯಾರೆಂಟಿ ಗ್ಯಾರೆಂಟಿ ಎಂದ ಸರ್ಕಾರ, ಈಗ ಬೆಲೆ ಹೆಚ್ಚಿಸುತ್ತಲೇ ಇದೆ : ಜಿ. ಸೋಮಶೇಖರರೆಡ್ಡಿ


ಗ್ಯಾರೆಂಟಿ ಗ್ಯಾರೆಂಟಿ ಎಂದ ಸರ್ಕಾರ, ಈಗ ಬೆಲೆ ಹೆಚ್ಚಿಸುತ್ತಲೇ ಇದೆ : ಜಿ. ಸೋಮಶೇಖರರೆಡ್ಡಿ


ಬಳ್ಳಾರಿ, 01 ಏಪ್ರಿಲ್ (ಹಿ.ಸ.) :

ಆ್ಯಂಕರ್ : ವಿಧಾನ ಸಭಾ ಚುನಾವಣಾ ಪ್ರಚಾರದಲ್ಲಿ ಫ್ರೀ ಫ್ರೀ, ಗ್ಯಾರೆಂಟಿಗಳನ್ನು ಹೇಳುತ್ತಲೇ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರು ಯುಗಾದಿ ಆಗುತ್ತಿದ್ದಂತೆಯೇ ರಾಜ್ಯದ ಜನಸಾಮಾನ್ಯರಿಗೆ ಬಲೆ ಏರಿಕೆಯ ಬಿಸಿಯನ್ನು ಹೆಚ್ಚಿಸಿದ್ದು, ಬುಧವಾರದಿಂದ ರಾಜ್ಯಾದಂತ ಹಂತಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಅವರು ತಿಳಿಸಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜನರು ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅವೈಜ್ಞಾನಿಕವಾಗಿ ಪದೇ ಪದೇ ಬೆಲೆ ಏರಿಕೆ ಮಾಡುತ್ತಿದ್ದು, ಜನರನ್ನು ಸುಲಿಗೆ ಮಾಡುತ್ತಿದೆ. ಗ್ಯಾರೆಂಟಿಗಳನ್ನು ನೀಡುವ ಆತುರದಲ್ಲಿ ತೆರಿಗೆ ರೂಪದಲ್ಲಿ ಜನರನ್ನು ಸುಲಿಗೆ ಮಾಡುತ್ತಿದೆ ಎಂದರು.

ಗ್ಯಾರಂಟಿ ಹೆಸರಲ್ಲಿ ಜನರ ದಾರಿ ತಪ್ಪಿಸುತ್ತಿರುವ ಸಚಿವರು, ಶಾಸಕರು ಲೂಟಿ ಹೊಡೆಯುವಲ್ಲೇ ಬ್ಯುಸಿಯಾಗಿದ್ದಾರೆ. ಸ್ಮಾರ್ಟ್ ಮೀಟರ್ ಹೆಸರಲ್ಲಿ ಗೋಲ್ ಮಾಲ್ ಮಾಡಿ ಜನರ ಸುಲಿಗೆಗೆ ಮುಂದಾಗಿದೆ. ಪ್ರತಿ ಯೂನಿಟ್ ವಿದ್ಯುತ್‍ಗೆ ರುಪಾಯಿ 2.77ಪೈಸೆ ಹೆಚ್ಚಳ ಮಾಡಿ ಅನೇಕರ ಜೇಬುಗಳಿಂದಲೇ ಹಣ ಸುಲಿಗೆ ಮಾಡುತ್ತಿದೆ. ವೈದ್ಯಕೀಯ ವೆಚ್ಚ, ಮರಣ ಪ್ರಮಾಣ ಪತ್ರ, ಆಪರೇಷನ್ ವೆಚ್ಚ, ರೆವೆನ್ಯೂ, ರಿಜಿಸ್ಟ್ರೇಷನ್, ಮುದ್ರಾಂಕ ಶುಲ್ಕ, ಪಾಲಿಕೆ ಟ್ಯಾಕ್ಸ್, ವಾಹನ ನೋಂದಣಿ ಶುಲ್ಕ, ಮೆಟ್ರೋ, ಕಾಲೇಜು ಶುಲ್ಕ, ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿಯೂ ಶುಲ್ಕವನ್ನು ವಿಪರೀತ ಹೆಚ್ಚಳ ಮಾಡಿ ಜನರನ್ನು ರಾಜ್ಯ ಸರ್ಕಾರ ಸುಲಿಗೆ ಮಾಡುತ್ತಿದೆ ಎಂದರು.

ಈ ಸಂದರ್ಭದಲ್ಲಿ ಡಾ. ಬಿ.ಕೆ. ಸುಂದರ್, ಡಾ. ಅರುಣಾ ಕಾಮಿನೇನಿ, ಎಸ್. ಗುರುಲಿಂಗನಗೌಡ, ಬಿ. ಓಬಲೇಶ್ ಇನ್ನಿತರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande