ತುಮಕೂರು, 01 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಗುರುವಿಂದ ಬಂಧುಗಳು, ಗುರುವಿಂದ ದೈವಗಳು, ಗುರುವಿಂದಲಿಹುದು ಪುಣ್ಯವದು, ಜಗಕೆಲ್ಲ ಗುರುವಿಂದ ಮುಕ್ತಿʼ ಎಂಬ ಸರ್ವಜ್ಞರ ಉಕ್ತಿಯಂತೆ, ದೇವರ ಸ್ವರೂಪಿ ಶಿವಕುಮಾರ ಮಹಾಸ್ವಾಮಿಗಳ ಆಚಾರ- ವಿಚಾರಗಳನ್ನು ಮೈಗೂಡಿಸಿಕೊಂಡರೆ ಮೋಕ್ಷ ಸಾಧ್ಯ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆದ ಶಿವೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳ 118 ನೇ ಜಯಂತಿ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ‘ಅಂಗಳಕ್ಕೆ ಆಚಾರವೇ ಆಶ್ರಯ, ಆಚಾರಕ್ಕೆ ಪ್ರಾಣವೇ ಆಶ್ರಯ; ಪ್ರಾಣಕ್ಕೆ ಜ್ಞಾನವೇ ಆಶ್ರಯ, ಜ್ಞಾನಕ್ಕೆ ಲಿಂಗವೇ ಆಶ್ರಯ; ಲಿಂಗಕ್ಕೆ ಜಂಗಮವೇ ಆಶ್ರಯʼ. ಅಕ್ಷರ- ಅನ್ನ, ಧರ್ಮ, ಸಂಸ್ಕಾರ, ಧ್ಯಾನಗಳನ್ನು ಧಾರೆ ಎರೆದು, ಮನುಷ್ಯನನ್ನ ರೂಪಿಸುವ ಮಠವಿದು ಎಂದರು.
ದಿ.ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭ, ಸಂಪುಟದಲ್ಲಿ ನಾನು ಸಚಿವನಾಗಿದ್ದಾಗ ಈ ಮಠಕ್ಕೆ ಭೇಟಿ ನೀಡಿದ್ದೆವು. ಮಠದಲ್ಲಿನ ಅನ್ನದಾಸೋಹವನ್ನು ಕಣ್ಣಾರೆ ಕಂಡಿದ್ದ ಕೃಷ್ಣ ಅವರು, ಸರ್ಕಾರದಿಂದ ಶಾಲೆಗಳಲ್ಲಿ ಅನ್ನದಾಸೋಹವನ್ನು ಆರಂಭಿಸಿದ್ದರು. ಇಂದಿನ ಅನ್ನದಾಸೋಹಕ್ಕೆ ಸಿದ್ಧಗಂಗಾ ಮಠವೇ ಪ್ರೇರಣೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa