ಭೂಕಂಪನ ಅನುಭವ-ಭಯಭೀತರಾದ ವಿಜಯಪುರ ಜಿಲ್ಲೆಯ ಜನ
ವಿಜಯಪುರ, 01 ಏಪ್ರಿಲ್ (ಹಿ.ಸ.) : ಆ್ಯಂಕರ್ : ವಿಜಯಪುರ ನಗರ ಹಾಗೂ ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ಭೂಕಂಪನದ ಅನುಭವವಾಗಿದೆ. ಭೂಮಿ ಕಂಪಿಸಿದ ಶಬ್ಧ ಜೋರಾಗಿ ಕೇಳಿಸಿದೆ. ಭೂಮಿ ಅಲ್ಲಾಡಿದ ಅನುಭವ ಜನರಲ್ಲಿ ಭೀತಿ ಉಂಟು ಮಾಡಿಸಿದೆ. ಮನೆಯಲ್ಲಿ ಇದ್ದ ಜನರು ಗಾಬರಿಗೊಂಡು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಭೂಕಂಪನ ಅನುಭವ-ಭಯಭೀತರಾದ ವಿಜಯಪುರ ಜಿಲ್ಲೆಯ ಜನ


ವಿಜಯಪುರ, 01 ಏಪ್ರಿಲ್ (ಹಿ.ಸ.) :

ಆ್ಯಂಕರ್ : ವಿಜಯಪುರ ನಗರ ಹಾಗೂ ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ಭೂಕಂಪನದ ಅನುಭವವಾಗಿದೆ. ಭೂಮಿ ಕಂಪಿಸಿದ ಶಬ್ಧ ಜೋರಾಗಿ ಕೇಳಿಸಿದೆ.

ಭೂಮಿ ಅಲ್ಲಾಡಿದ ಅನುಭವ ಜನರಲ್ಲಿ ಭೀತಿ ಉಂಟು ಮಾಡಿಸಿದೆ. ಮನೆಯಲ್ಲಿ ಇದ್ದ ಜನರು ಗಾಬರಿಗೊಂಡು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

ತಿಕೋಟಾ ತಾಲೂಕಿನ ಸೋಮದೇವರಹಟ್ಟಿ, ಮಲಕನ ದೇರಹಟ್ಟಿ, ಹುಬನೂರ, ಟಕ್ಕಳಕಿ, ಘೋಣಸಗಿ, ಕಳ್ಳಕವಟಗಿ, ಬಾಬಾ ಪ್ರದೇಶದಲ್ಲಿ 2:14 ರಿಂದ 2:15 ಸಮಯದಲ್ಲಿ ಭೂಮಿಯಿಂದ ಜೋರಾದ ಶಬ್ದವಾಗಿದೆ.

ಕಳೆದ ವರ್ಷವೂ ವಿಜಯಪುರ ಜಿಲ್ಲೆಯಲ್ಲಿ ಭೂಕಂಪನದ ಅನುಭವವಾಗಿತ್ತು. ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಆಗಾಗ ಭೂಕಂಪನದ ಅನುಭವ ಜನರು ಪಡೆಯುತ್ತಲೇ ಬಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಪ್ರಸನ್ನ


 rajesh pande