ಬಿಜಾಪುರ, 01 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಉಸೂರ್ ಮತ್ತು ಬಸಗುಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭದ್ರತಾ ಪಡೆಗಳು 13 ಸಕ್ರಿಯ ಮಾವೋವಾದಿಗಳನ್ನು ಬಂಧಿಸಿವೆ.
ಉಸೂರ್ ಪ್ರದೇಶದ ಟೆಕ್ಮೆಟ್ಲಾ ಗ್ರಾಮದ ಬಳಿ ಏಳು ಮತ್ತು ಬಸಗುಡದಲ್ಲಿ ಆರು ನಕ್ಸಲರು ಸೆರೆಬಿದ್ದಿದ್ದಾರೆ. 2022ರಲ್ಲಿ ಐಇಡಿ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಈ ನಕ್ಸಲರಿಂದ ಸ್ಫೋಟಕಗಳು, ಟಿಫಿನ್ ಬಾಂಬ್‌ಗಳು ಹಾಗೂ ವಿದ್ಯುತ್ ತಂತಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa