ನಕ್ಸಲ್ ರಿಂದ ಶಾಂತಿ ಮಾತುಕತೆಗೆ ಪ್ರಸ್ತಾಪ
ಜಗದಲ್ಪುರ್, 02 ಏಪ್ರಿಲ್ (ಹಿ.ಸ.) : ಆ್ಯಂಕರ್ :ಕೇಂದ್ರ ಗೃಹ ಸಚಿವ ಅಮಿತ್ ಶಾ ಛತ್ತಿಸಗಢದ ಬಸ್ತಾರ್ ಭೇಟಿ ಮುನ್ನ, ನಕ್ಸಲೀಯರು ಶಾಂತಿ ಮಾತುಕತೆಗಾಗಿ ಪ್ರಸ್ತಾಪ ಮುಂದಿಟ್ಟಿದ್ದಾರೆ. ಕಳೆದ 15 ತಿಂಗಳಲ್ಲಿ 400 ಸಹಚರರು ಸಾವನ್ನಪ್ಪಿರುವುದಾಗಿ ನಕ್ಸಲೀಯ ಸಂಘಟನೆ ಒಪ್ಪಿಕೊಂಡಿದ್ದು, ಸರ್ಕಾರ ನಕ್ಸಲ್ ವಿರೋಧಿ
Naxal


ಜಗದಲ್ಪುರ್, 02 ಏಪ್ರಿಲ್ (ಹಿ.ಸ.) :

ಆ್ಯಂಕರ್ :ಕೇಂದ್ರ ಗೃಹ ಸಚಿವ ಅಮಿತ್ ಶಾ ಛತ್ತಿಸಗಢದ ಬಸ್ತಾರ್ ಭೇಟಿ ಮುನ್ನ, ನಕ್ಸಲೀಯರು ಶಾಂತಿ ಮಾತುಕತೆಗಾಗಿ ಪ್ರಸ್ತಾಪ ಮುಂದಿಟ್ಟಿದ್ದಾರೆ. ಕಳೆದ 15 ತಿಂಗಳಲ್ಲಿ 400 ಸಹಚರರು ಸಾವನ್ನಪ್ಪಿರುವುದಾಗಿ ನಕ್ಸಲೀಯ ಸಂಘಟನೆ ಒಪ್ಪಿಕೊಂಡಿದ್ದು, ಸರ್ಕಾರ ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದೆ.

ನಕ್ಸಲೀಯರ ವಕ್ತಾರ ಅಭಯ್ ತೆಲುಗು ಭಾಷೆಯಲ್ಲಿ ಕರಪತ್ರ ಬಿಡುಗಡೆ ಮಾಡಿದ್ದು, ಯಾವುದೇ ಷರತ್ತುಗಳಿಲ್ಲದೆ ಶಾಂತಿ ಮಾತುಕತೆ ನಡೆಸಲು ಅವರು ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಮಾರ್ಚ್ 24ರಂದು ಹೈದರಾಬಾದ್‌ನಲ್ಲಿ ನಕ್ಸಲೀಯ ಸಭೆ ನಡೆದಿದ್ದು, ಕದನ ವಿರಾಮ ಘೋಷಣೆ ಕುರಿತು ಚರ್ಚಿಸಲಾಗಿದೆ ಎಂದು ಕರ ಪತ್ರದಲ್ಲಿ ತಿಳಿಸಿದ್ದಾರೆ.

ಈ ಕುರಿತು ರಾಜ್ಯ ಗೃಹ ಸಚಿವ ವಿಜಯ್ ಕುಮಾರ್ ಪ್ರತಿಕ್ರಿಯಿಸಿ, ಕರಪತ್ರದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಸರ್ಕಾರ ಚರ್ಚೆಗೆ ಸಿದ್ಧವಿದೆ, ಆದರೆ ಅದಕ್ಕಾಗಿ ಸರಿಯಾದ ವೇದಿಕೆ ಅಗತ್ಯವಿದೆ ಎಂದಿದ್ದಾರೆ.

ಕೇಂದ್ರ ಸಚಿವ ಅಮಿತ್ ಶಾ ಎಪ್ರಿಲ್ 5ರಂದು ಬಸ್ತಾರ್ ಪಾಂಡಮ್ 2025 ಕಾರ್ಯಕ್ರಮದಲ್ಲಿ ಭಾಗವಹಿಸಲು ದಂತೇವಾಡಕ್ಕೆ ಭೇಟಿ ನೀಡಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande