ವಕ್ಫ್ ತಿದ್ದುಪಡಿ ಮಸೂದೆಗೆ ಜೆಡಿಯು ಬೆಂಬಲ
ನವದೆಹಲಿ, 02 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕೇಂದ್ರದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಸರ್ಕಾರದ ಭಾಗವಾಗಿರುವ ಜನತಾದಳ ಯುನೈಟೆಡ್ (ಜೆಡಿಯು) ಬುಧವಾರ ಲೋಕ ಸಭೆಯಲ್ಲಿ ಮಂಡಿಸಲಾದ ವಕ್ಫ್ ತಿದ್ದುಪಡಿ ಮಸೂದೆಯನ್ನು ಬೆಂಬಲಿಸಿತು. ಮಸೂದೆಯ ಕುರಿತು ನಡೆಯುತ್ತಿರುವ ಚರ್ಚೆಯಲ್ಲಿ ಭಾಗವಹಿಸಿದ ಪಕ್ಷದ ನ
Jdu


ನವದೆಹಲಿ, 02 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕೇಂದ್ರದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಸರ್ಕಾರದ ಭಾಗವಾಗಿರುವ ಜನತಾದಳ ಯುನೈಟೆಡ್ (ಜೆಡಿಯು) ಬುಧವಾರ ಲೋಕ ಸಭೆಯಲ್ಲಿ ಮಂಡಿಸಲಾದ ವಕ್ಫ್ ತಿದ್ದುಪಡಿ ಮಸೂದೆಯನ್ನು ಬೆಂಬಲಿಸಿತು.

ಮಸೂದೆಯ ಕುರಿತು ನಡೆಯುತ್ತಿರುವ ಚರ್ಚೆಯಲ್ಲಿ ಭಾಗವಹಿಸಿದ ಪಕ್ಷದ ನಾಯಕ ರಾಜೀವ್ ರಂಜನ್ ಅಲಿಯಾಸ್ ಲಲ್ಲನ್ ಸಿಂಗ್, ಬಿಹಾರದಲ್ಲಿ ತಮ್ಮ ಪಕ್ಷದ 20 ವರ್ಷಗಳ ಆಡಳಿತದಲ್ಲಿ ಮುಸ್ಲಿಮರ ಹಿತಾಸಕ್ತಿಗಾಗಿ ಗರಿಷ್ಠ ಕೆಲಸ ಮಾಡಲಾಗಿದೆ ಎಂದು ಹೇಳಿದರು.

ನಮಗೆ ಯಾರಿಂದಲೂ ಜಾತ್ಯತೀತತೆಯ ಪ್ರಮಾಣಪತ್ರ ಅಗತ್ಯವಿಲ್ಲ ಎಂದ ಅವರು, ವಕ್ಫ್ ಮುಸ್ಲಿಂ ವಿರೋಧಿ ಎಂಬ ಗೊಂದಲ ಹರಡಲಾಗುತ್ತಿದೆ. ವಕ್ಫ್ ಮುಸ್ಲಿಂ ಸಂಸ್ಥೆಯಲ್ಲ. ವಕ್ಫ್ ಕೇವಲ ಒಂದು ಟ್ರಸ್ಟ್. ವಕ್ಫ್ ಮಂಡಳಿ ಕೇವಲ ಆಡಳಿತಾತ್ಮಕ ಮತ್ತು ನಿಯಂತ್ರಕ ಸಂಸ್ಥೆಯಾಗಿದೆ. ಮಹಿಳೆಯರು ಮತ್ತು ಪಸ್ಮಾಂಡ ಮುಸ್ಲಿಮರು ಸೇರಿದಂತೆ ಎಲ್ಲಾ ಮುಸ್ಲಿಮರಿಗೆ ಟ್ರಸ್ಟ್ ನ್ಯಾಯ ಒದಗಿಸಬೇಕು. ಮಸೂದೆಯನ್ನು ಎರಡು ರೀತಿಯ ಜನರು ವಿರೋಧಿಸುತ್ತಿದ್ದಾರೆ, ಒಂದು ಮತ ಬ್ಯಾಂಕ್ ರಾಜಕೀಯ ಮಾಡಲು ಬಯಸುವವರು ಮತ್ತು ಎರಡನೆಯದು ವಕ್ಫ್ ಆಸ್ತಿಗಳನ್ನು ಹೊಂದಿರುವವರು ಎಂದು ಆರೋಪಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande