ವಿದ್ಯುತ್ ವಾಹನಗಳ ಮಾರಾಟದಲ್ಲಿ ಕ್ರಾಂತಿ : ಕುಮಾರಸ್ವಾಮಿ
ನವದೆಹಲಿ, 02 ಏಪ್ರಿಲ್ (ಹಿ.ಸ.) : ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಭಾರತದಲ್ಲಿ ವಿದ್ಯುತ್ ವಾಹನ ಕ್ರಾಂತಿ ವೇಗವಾಗಿ ಮುಂದುವರಿಯುತ್ತಿದೆ. 2024-25ನೇ ಹಣಕಾಸು ವರ್ಷದಲ್ಲಿ 1.9 ಮಿಲಿಯನ್‌ಗಿಂತಲೂ ಹೆಚ್ಚು ವಿದ್ಯುತ್ ವಾಹನಗಳ ಮಾರಾಟ ದಾಖಲಾಗಿದ್ದು, ದೇಶದ ಹ
Hdk


ನವದೆಹಲಿ, 02 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಭಾರತದಲ್ಲಿ ವಿದ್ಯುತ್ ವಾಹನ ಕ್ರಾಂತಿ ವೇಗವಾಗಿ ಮುಂದುವರಿಯುತ್ತಿದೆ. 2024-25ನೇ ಹಣಕಾಸು ವರ್ಷದಲ್ಲಿ 1.9 ಮಿಲಿಯನ್‌ಗಿಂತಲೂ ಹೆಚ್ಚು ವಿದ್ಯುತ್ ವಾಹನಗಳ ಮಾರಾಟ ದಾಖಲಾಗಿದ್ದು, ದೇಶದ ಹಸಿರು ಮತ್ತು ಸುಸ್ಥಿರ ಸಂಚಾರದತ್ತ ಮಹತ್ತರ ಹೆಜ್ಜೆಯಾಗಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದಾರೆ.

ಈ ವರ್ಷದಲ್ಲಿ ವಿಶೇಷವಾಗಿ ವಿದ್ಯುತ್ ದ್ವಿಚಕ್ರ ವಾಹನ ಮತ್ತು ಸ್ಕೂಟರ್ ಹಾಗೂ ಇಲೆಕ್ಟ್ರಿಕ್ ಆಟೋ ರಿಕ್ಷಾ ವಿಭಾಗಗಳಲ್ಲಿ ಮಾರಾಟದ ಪ್ರಮಾಣದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಸರ್ಕಾರದ ವಿವಿಧ ಪ್ರೋತ್ಸಾಹಕ ಯೋಜನೆಗಳು, ಪೂರಕ ನೀತಿಗಳು ಹಾಗೂ ವಿದ್ಯುತ್ ಚಾರ್ಜಿಂಗ್ ವ್ಯವಸ್ಥೆಯ ಅಭಿವೃದ್ಧಿಯು ಈ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಈ ಕ್ರಾಂತಿ ಮುಂದಿನ ವರ್ಷಗಳಲ್ಲಿಯೂ ಇದೇ ತರಹ ಉತ್ಸಾಹಭರಿತ ವೇಗದಲ್ಲಿ ಬೆಳೆಯುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರ, ಕೈಗಾರಿಕೆ, ಮತ್ತು ಜನಸಾಮಾನ್ಯರ ಬೆಂಬಲದೊಂದಿಗೆ, ದೇಶವು ಶೀಘ್ರದಲ್ಲೇ ಇವಿ ಮರುಪರಿವರ್ತನೆಯ ದಿಗಂತ ತಲುಪುವತ್ತ ಹೆಜ್ಜೆ ಹಾಕುತ್ತಿದೆ ಎಂದು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande