ಮೃತ ಬಿಜೆಪಿ ಕಾರ್ಯಕರ್ತನ ಮನೆಗೆ ಯತ್ನಾಳ್ ಭೇಟಿ, ಸಾಂತ್ವನ
ವಿಜಯಪುರ, 01 ಏಪ್ರಿಲ್ (ಹಿ.ಸ.) : ಆ್ಯಂಕರ್ : ಒಂದು ಕುಟುಂಬದ ಸ್ವಾರ್ಥಕ್ಕಾಗಿ ಪಕ್ಷದಿಂದ ತಮ್ಮ ನಾಯಕನ್ನು ಉಚ್ಛಾಟನೆ ಮಾಡಿದಕ್ಕೆ ಮನನೊಂದು, ವಿಚಾರ ಮಾಡುತ್ತ ತೆರಳುತ್ತಿದ್ದಾಗ ಕಾರು ಅಪಘಾತದಲ್ಲಿ ಮೃತಪಟ್ಟ ನಿಷ್ಠಾವಂತ ಕಾರ್ಯಕರ್ತ ಸಂತೋಟ ತಟಗಾರ ಅವರ ವಿಜಯಪುರ ಅವರ ಮನೆಗೆ ಮಂಗಳವಾರ ನಗರ ಶಾಸಕ ಬಸನಗೌಡ
ಮೃತ ಬಿಜೆಪಿ ಕಾರ್ಯಕರ್ತನ ಮನೆಗೆ ಯತ್ನಾಳ್ ಭೇಟಿ, ಸಾಂತ್ವನ


ವಿಜಯಪುರ, 01 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಒಂದು ಕುಟುಂಬದ ಸ್ವಾರ್ಥಕ್ಕಾಗಿ ಪಕ್ಷದಿಂದ ತಮ್ಮ ನಾಯಕನ್ನು ಉಚ್ಛಾಟನೆ ಮಾಡಿದಕ್ಕೆ ಮನನೊಂದು, ವಿಚಾರ ಮಾಡುತ್ತ ತೆರಳುತ್ತಿದ್ದಾಗ ಕಾರು ಅಪಘಾತದಲ್ಲಿ ಮೃತಪಟ್ಟ ನಿಷ್ಠಾವಂತ ಕಾರ್ಯಕರ್ತ ಸಂತೋಟ ತಟಗಾರ ಅವರ ವಿಜಯಪುರ ಅವರ ಮನೆಗೆ ಮಂಗಳವಾರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂತೋಷನನ್ನು ನಾವು ಕಳೆದುಕೊಂಡಿದ್ದು ದುರದೃಷ್ಟಕರ. ಅವನಿಗೆ ಮೂರು ಜನ ಮಕ್ಕಳಿದ್ದು, ಅವರ ಶಿಕ್ಷಣ ಸಲುವಾಗಿ ಸಿದ್ದಸಿರಿ ಸೌಹಾರ್ದ ಸಹಕಾರಿಯಲ್ಲಿ ರೂ.5 ಲಕ್ಷ ಠೇವಣಿ ಇಟ್ಟು, ಅದರಿಂದ ಬರುವ ಬಡ್ಡಿ ಹಣದಲ್ಲಿ ಶಿಕ್ಷಣ ಪಡೆದುಕೊಂಡಿದ್ದರು.

ಮಕ್ಕಳು ದೊಡ್ಡವರಾದ ಮೇಲೆ ಆ ಹಣದಿಂದ ಉನ್ನತ ಶಿಕ್ಷಣಕ್ಕೆ ಅನುಕೂಲ ಮಾಡಿಕೊಳ್ಳಲಿ. ಜೊತೆಗೆ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಕಲ್ಪಿಸುವುದು ಸೇರಿದಂತೆ ಎಲ್ಲ ರೀತಿಯ ಸಹಾಯ ಸಹಕಾರ ನೀಡುತ್ತೆನೆ ಎಂದು ಶಾಸಕ ಯತ್ನಾಳ್ ಭರವಸೆ ನೀಡಿದರು.

ಒಂದು ಕುಟುಂಬದ ಸ್ವಾರ್ಥಕ್ಕಾಗಿ ಉಚ್ಛಾಟನೆ ಮಾಡಿದಕ್ಕೆ ಬೇಸತ್ತ ಹಿಂದುತ್ವ ವಿಚಾರ ಇರುವಂತಹ ಪ್ರತಿಯೊಬ್ಬ ಯುವಕ, ರಾಜ್ಯದ ಮೂಲೆ ಮೂಲೆಗಳಲ್ಲಿಯೂ ದಿಗ್ಬ್ರಾಂತರಾಗಿ ಕಣ್ಣೀರು ಹಾಕಿದ್ದಾರೆ.

ಪಕ್ಷದ ಮೇಲಿರುವ ಅಭಿಮಾನದಿಂದ ವಿಮುಕರಾಗುತ್ತಿದ್ದಾರೆ. ನಿಮ್ಮ ನಿಮ್ಮ ಜೀವ ಅಮೂಲ್ಯವಾದದ್ದು, ಯಾರು ಎದೆಗುಂದಬೇಡಿ, ರಾಜಕಾರಣ ಬೇರೆ, ಅಧಿಕಾರ ಬರುತ್ತೆ, ಹೋಗುತ್ತದೆ. ಒಬ್ಬ ಕಾರ್ಯಕರ್ತನನ್ನು ಕಳೆದುಕೊಂಡರೇ ಇಡೀ ಕುಟುಂಬವೇ ಬೀದಿಗೆ ಬರುತ್ತದೆ. ಹೀಗಾಗಿ ಯಾರು ದೃತಿಗೇಡಬೇಡಿ ಎಂದು ಯತ್ನಾಳ್ ಕಿವಿಮಾತು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / ಪ್ರಸನ್ನ


 rajesh pande