ಬಳ್ಳಾರಿ, 01 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕರ್ನಾಟಕರತ್ನ, ಪದ್ಮಭೂಷಣ, ಬಸವಶ್ರೀ ಪ್ರಶಸ್ತಿ ಪುರಸ್ಕøತರು, ತ್ರಿವಿಧ ದಾಸೋಹಿ, ಶತಮಾನದ ಮಹಾನ್ ಸಂತ, ಮನುಕುಲದ ಮಹಾಂತ, ಲೋಕ ಜಂಗಮ, ನಡೆದಾಡಿದ ದೇವರು ಡಾ. ಶಿವಕುಮಾರ ಮಹಾ ಶಿವಯೋಗಿಗಳ 118ನೇ ಜನ್ಮದಿನೋತ್ಸವವನ್ನು ಅವರ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಸಹಯೋಗದಲ್ಲಿ ಶ್ರೀಗಳ ಅಭಿಮಾನಿಗಳು, ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಗಣ್ಯರು ಕೊಟ್ಟೂರು ಸ್ವಾಮಿ ಮಠದಲ್ಲಿ ಮಂಗಳವಾರ ಆಚರಿಸಿದ್ದಾರೆ.
ಕರ್ನಾಟಕ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ, ಅಖಿಲ ಭಾರತ ವೀರಶೈವ ವಿದ್ಯಾವರ್ಧಕ ಸಂಘದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಚಾನಾಳ್ ಶೇಖರ್, ಆಂಧ್ರಪ್ರದೇಶದ ರಾಜ್ಯಾಧ್ಯಕ್ಷ ದಂಡಿನ ಶಿವಾನಂದ, ತುಂಗಭದ್ರ ರೈತ ಸಂಘದ ಅಧ್ಯಕ್ಷ ಡಾ. ದರೂರು ಪುರುಷೋತ್ತಮಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ನಿಷ್ಠಿ ರುದ್ರಪ್ಪ, ವೀರಶೈವ ಮಹಾಸಭಾದ ರಾಜ್ಯಸಮಿತಿಯ ಕೋರಿ ವಿರುಪಾಕ್ಷಪ್ಪ, ಕರೇಗೌಡ, ಜಿಲ್ಲಾ ಘಟಕದ ಗಂಗಾವತಿ ವಿರೇಶ್, ಗಣ್ಯರಾದ ಕೊಟೆಕಲ್ ಶಿವಕುಮಾರ್, ಶ್ರೀಧರಗಡ್ಡೆ ವೀರನಗೌಡ, ಮಲ್ಲಿಕಾರ್ಜುನ, ಹಲಕುಂದಿ ಮಲ್ಲಿಕಾರ್ಜುನ, ಬಸಲಿಂಗಪ್ಪ, ಗೆಣಿಕೆಹಾಳ್‍ನ ಅರವಿ ಶರಣಗೌಡ, ದರೂರು ಸಾಗರ್, ಕೆ.ಪಿ. ಚನ್ನಬಸವರಾಜ, ಗೋನಾಳ್ ನಾಗಭೂಷಣ, ಡಾ. ಭ್ರಮರಾಂಭ, ಆರ್.ಹೆಚ್.ಎಂ. ಚನ್ನಬಸಯ್ಯಸ್ವಾಮಿ, ಎನ್. ಚಂದ್ರಮೋಹನ್, ಜಾಲಿಹಾಳ್ ಶ್ರೀಧರ್ ಇನ್ನಿತರರು ಈ ಸಮಾರಂಭದಲ್ಲಿ ಪಾಲ್ಗೊಂಡು, ಶ್ರೀಗಳ ಸ್ಮರಣೆ ಮತ್ತು ಅವರ ಸೇವೆಯನ್ನು ಸ್ಮರಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್