ನವದೆಹಲಿ, 29 ಮಾರ್ಚ್ (ಹಿ.ಸ.) :
ಆ್ಯಂಕರ್ : ಛತ್ತೀಸ್‌ಗಢದ ನಕ್ಸಲ್ ಪೀಡಿತ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಸಾಧಿಸಿದ ಯಶಸ್ಸಿನ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಪ್ರತಿಕ್ರಿಯಿಸಿದ್ದು ಹಿಂಸಾಚಾರದ ಮಾರ್ಗವನ್ನು ತ್ಯಜಿಸುವಂತೆ ನಕ್ಸಲರಿಗೆ ಮನವಿ ಮಾಡಿದ್ದಾರೆ.
ಶಸ್ತ್ರಾಸ್ತ್ರ ಮತ್ತು ಹಿಂಸೆಯ ಮೂಲಕ ಬದಲಾವಣೆ ಬರಲು ಸಾಧ್ಯವಿಲ್ಲ, ಶಾಂತಿ ಮತ್ತು ಅಭಿವೃದ್ಧಿ ಮಾತ್ರ ಬದಲಾವಣೆ ತರಬಲ್ಲದು ಎಂದು ಹೇಳಿದರು.
ಇದು ನಕ್ಸಲಿಸಂ ಮೇಲಿನ ಮತ್ತೊಂದು ದಾಳಿ ಎಂದಿರುವ ಗೃಹ ಸಚಿವ ಶಾ ತಮ್ಮ ಎಕ್ಸ್-ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಸುಕ್ಮಾದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಮ್ಮ ಭದ್ರತಾ ಪಡೆಗಳು 16 ನಕ್ಸಲರನ್ನು ಬಲಿ ಪಡೆದು ಬೃಹತ್ ಪ್ರಮಾಣದ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಮಾರ್ಚ್ 31, 2026 ರ ಮೊದಲು ನಕ್ಸಲಿಸಂ ಅನ್ನು ಕೊನೆಗೊಳಿಸಲು ನಾವು ದೃಢನಿಶ್ಚಯ ಮಾಡಿದ್ದೇವೆ. ನಕ್ಸಲರಿಗೆ ಮನವಿ ಮಾಡಿರುವ ಅವರು, ಬದಲಾವಣೆ ಶಸ್ತ್ರಾಸ್ತ್ರ ಮತ್ತು ಹಿಂಸಾಚಾರದ ಮೂಲಕ ಬರಲು ಸಾಧ್ಯವಿಲ್ಲ; ಶಾಂತಿ ಮತ್ತು ಅಭಿವೃದ್ಧಿ ಮಾತ್ರ ಬದಲಾವಣೆ ತರಬಲ್ಲವು ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa