ಮ್ಯಾನ್ಮಾರ್‌ ಭೂಕಂಪಕ್ಕೆ 700 ಜನ ಬಲಿ
ಬರ್ಮಾ, 29 ಮಾರ್ಚ್ (ಹಿ.ಸ.) : ಆ್ಯಂಕರ್ : ಶುಕ್ರವಾರ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 700 ಕ್ಕೆ ತಲುಪಿದೆ. ಇಲ್ಲಿಯವರೆಗೆ ಮ್ಯಾನ್ಮಾರ್ ಸರ್ಕಾರ 694 ಜನರ ಸಾವನ್ನು ದೃಢಪಡಿಸಿದೆ. ಎಲ್ಲೆಡೆ ಮೃತ ದೇಹಗಳು ಹರಡಿಕೊಂಡಿವೆ. ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ,
Earthquake


ಬರ್ಮಾ, 29 ಮಾರ್ಚ್ (ಹಿ.ಸ.) :

ಆ್ಯಂಕರ್ : ಶುಕ್ರವಾರ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 700 ಕ್ಕೆ ತಲುಪಿದೆ. ಇಲ್ಲಿಯವರೆಗೆ ಮ್ಯಾನ್ಮಾರ್ ಸರ್ಕಾರ 694 ಜನರ ಸಾವನ್ನು ದೃಢಪಡಿಸಿದೆ.

ಎಲ್ಲೆಡೆ ಮೃತ ದೇಹಗಳು ಹರಡಿಕೊಂಡಿವೆ. ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಈ ಭೂಕಂಪ ಹತ್ತು ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ.

ಭೂಕಂಪದ ಕೇಂದ್ರ ಬಿಂದು ಮಂಡಲೆ ನಗರದಿಂದ ಸುಮಾರು 17.2 ಕಿಲೋಮೀಟರ್ ದೂರದಲ್ಲಿದೆ ಎಂದು ಹೇಳಲಾಗಿದೆ.

ಚೀನಾದ ಸುದ್ದಿ ಸಂಸ್ಥೆ ಕ್ಸಿನ್ಹುವಾ ಪ್ರಕಾರ, ಮ್ಯಾನ್ಮಾರ್‌ನಲ್ಲಿ ಇದುವರೆಗೆ 694 ಸಾವುಗಳು ದೃಢಪಟ್ಟಿವೆ. ಅವಶೇಷಗಳನ್ನು ನಿರಂತರವಾಗಿ ತೆಗೆದುಹಾಕಲಾಗುತ್ತಿದೆ.

ಏತನ್ಮಧ್ಯೆ, ಮ್ಯಾನ್ಮಾರ್ ಗಡಿಯಲ್ಲಿರುವ ನೈಋತ್ಯ ಯುನ್ನಾನ್ ಪ್ರಾಂತ್ಯದಲ್ಲಿ ಶನಿವಾರವೂ ಕಂಪನದ ಅನುಭವವಾಗಿದೆ. ಆದರೆ, ಅಲ್ಲಿಂದ ಯಾವುದೇ ಜೀವ ಅಥವಾ ಆಸ್ತಿಪಾಸ್ತಿ ನಷ್ಟವಾದ ಬಗ್ಗೆ ವರದಿಯಾಗಿಲ್ಲ

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande