ಚಿತ್ತಗಾಂಗ್‌ನಲ್ಲಿ ಭೀಕರ ಅಪಘಾತ : ಐವರ ಸಾವು, 12 ಜನರಿಗೆ ಗಾಯ
ಢಾಕಾ, 31 ಮಾರ್ಚ್ (ಹಿ.ಸ.) : ಆ್ಯಂಕರ್ : ಬಾಂಗ್ಲಾದೇಶದ ಚಿತ್ತಗಾಂಗ್‌ನ ಲೋಹಗರಾ ಉಪ ಜಿಲ್ಲೆಯಲ್ಲಿ ಬೆಳಿಗ್ಗೆ ಎರಡು ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ ಐವರು ಸಾವನ್ನಪ್ಪಿ, 12 ಮಂದಿ ಗಾಯಗೊಂಡಿದ್ದಾರೆ. ಚಿತ್ತಗಾಂಗ್-ಕಾಕ್ಸ್ ಬಜಾರ್ ಹೆದ್ದಾರಿಯ ಜಂಗ್ಲೈ ಮಜಾರ್ ಗೇಟ್ ಬಳಿ ಈ ಅಪಘಾತ ಸಂಭವಿಸಿದ್ದು, ಸೌದ
Accident


ಢಾಕಾ, 31 ಮಾರ್ಚ್ (ಹಿ.ಸ.) :

ಆ್ಯಂಕರ್ : ಬಾಂಗ್ಲಾದೇಶದ ಚಿತ್ತಗಾಂಗ್‌ನ ಲೋಹಗರಾ ಉಪ ಜಿಲ್ಲೆಯಲ್ಲಿ ಬೆಳಿಗ್ಗೆ ಎರಡು ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ ಐವರು ಸಾವನ್ನಪ್ಪಿ, 12 ಮಂದಿ ಗಾಯಗೊಂಡಿದ್ದಾರೆ.

ಚಿತ್ತಗಾಂಗ್-ಕಾಕ್ಸ್ ಬಜಾರ್ ಹೆದ್ದಾರಿಯ ಜಂಗ್ಲೈ ಮಜಾರ್ ಗೇಟ್ ಬಳಿ ಈ ಅಪಘಾತ ಸಂಭವಿಸಿದ್ದು, ಸೌದಿ ಸಾರಿಗೆ ಬಸ್ ಹಾಗೂ ಮಿನಿ ಬಸ್ ಮುಖಾಮುಖಿ ಡಿಕ್ಕಿಯಾಗಿವೆ. ಮೃತರಲ್ಲಿ 21 ವರ್ಷದ ಅರಾಫತ್, 18 ವರ್ಷದ ರಿಫತ್, 28 ವರ್ಷದ ನಿಜಾಮ್, 14 ವರ್ಷದ ಸಿದ್ದಿಕಿ ಹಾಗೂ 30 ವರ್ಷದ ನಜೀಮ್ ಸೇರಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande