ಬರ್ಮಾ, 30 ಮಾರ್ಚ್ (ಹಿ.ಸ.) :
ಆ್ಯಂಕರ್ : ಭೂಕಂಪದ ಭೀತಿಯಿಂದ ಮ್ಯಾನ್ಮಾರ್‌ನ ಲಕ್ಷಾಂತರ ಜನರು ಶನಿವಾರ ರಾತ್ರಿ ತಮ್ಮ ಮನೆಗಳನ್ನು ತೊರೆದು ಬೀದಿಗಳಲ್ಲಿ ಕಾಲ ಕಳೆದಿದ್ದಾರೆ.
ಭೂಕಂಪದಿಂದ ರಸ್ತೆಗಳು, ಆಸ್ಪತ್ರೆಗಳು ಸೇರಿದಂತೆ ಹಲವಾರು ಮೂಲಸೌಕರ್ಯಗಳು ಹಾನಿಗೊಳಗಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ವಿಶ್ವಸಂಸ್ಥೆಯ ಪ್ರಕಾರ, ಭಯದಿಂದ ಹಲವರು ಮನೆಗಳೊಳಗೆ ಹೋಗಲು ಸಹ ಧೈರ್ಯ ತೋರುತ್ತಿಲ್ಲ.
ಈ ದುರಂತದಲ್ಲಿ ಕನಿಷ್ಠ ೧,೬೦೦ ಜನರು ಮೃತಪಟ್ಟಿದ್ದು, 3,400 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಭಾರತದಿಂದ 15 ಟನ್ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದ್ದು, ಅವುಗಳ ವಿತರಣಾ ಪ್ರಕ್ರಿಯೆ ಪ್ರಾರಂಭವಾಗಿದ್ದು, ಪರಿಹಾರ ಕಾರ್ಯಗಳು ತೀವ್ರಗತಿಯಲ್ಲಿ ನಡೆಯುತ್ತಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa