ರನ್ಯಾರಾವ್ ಪ್ರಕರಣ : ಬಳ್ಳಾರಿಯ ಯುವ ವ್ಯಾಪಾರಿ ಬಂಧನ
ಬಳ್ಳಾರಿ, 27 ಮಾರ್ಚ್ (ಹಿ.ಸ.) : ಆ್ಯಂಕರ್ : ವಿದೇಶಗಳಿಂದ ಅಕ್ರಮ ಮಾರ್ಗದಲ್ಲಿ ಭಾರತಕ್ಕೆ ಬಂಗಾರದ ಬಿಸ್ಕೇಟ್‍ಗಳನ್ನು ತರುತ್ತಿದ್ದ ಪ್ರಕರಣದಲ್ಲಿ ಬಂಧಿತಳಾಗಿರುವ ಆರೋಪಿ ರನ್ಯಾ ರಾವ್ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಬಳ್ಳಾರಿಯ ಯುವ ವ್ಯಾಪಾರಿ ಸಾಹಿಲ್ ಜೈನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ರನ್ಯಾರಾವ್ ಪ್ರಕರಣ : ಬಳ್ಳಾರಿಯ ಯುವ ವ್ಯಾಪಾರಿ ಬಂಧನ


ಬಳ್ಳಾರಿ, 27 ಮಾರ್ಚ್ (ಹಿ.ಸ.) :

ಆ್ಯಂಕರ್ : ವಿದೇಶಗಳಿಂದ ಅಕ್ರಮ ಮಾರ್ಗದಲ್ಲಿ ಭಾರತಕ್ಕೆ ಬಂಗಾರದ ಬಿಸ್ಕೇಟ್‍ಗಳನ್ನು ತರುತ್ತಿದ್ದ ಪ್ರಕರಣದಲ್ಲಿ ಬಂಧಿತಳಾಗಿರುವ ಆರೋಪಿ ರನ್ಯಾ ರಾವ್ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಬಳ್ಳಾರಿಯ ಯುವ ವ್ಯಾಪಾರಿ ಸಾಹಿಲ್ ಜೈನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಡಿಆರ್‍ಐ ತಂಡವು ಬಳ್ಳಾರಿಯ ಯುವ ವ್ಯಾಪಾರಿ ಸಾಹಿಲ್ ಜೈನ್ ಅವರನ್ನು ಬಂಧಿಸಿ, ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದು, ನ್ಯಾಯಾಲಯವು ಮಾರ್ಚ್ 29ರವರೆಗೂ ಡಿಆರ್‍ಐ ಕಸ್ಟಡಿಗೆ ಒಪ್ಪಿಸಿದೆ ಎಂದು

ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿ ಸಾಹಿಲ್ ಅವರು ಬೆಂಗಳೂರಿನಲ್ಲೂ ಜುವೆಲ್ಲರಿ ಶಾಫ್ ಹೊಂದಿದ್ದು, ರನ್ಯಾರಾವ್ ಮತ್ತು ತರುಣ್ ರಾಜ್ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ವಿದೇಶಗಳಿಂದ ಅಕ್ರಮವಾಗಿ ಭಾರತಕ್ಕೆ ತರುತ್ತಿದ್ದ ಚಿನ್ನಾಭರಣ ಹಾಗೂ ಚಿನ್ನದ ಬಿಸ್ಕೆಟ್‍ಗಳನ್ನು ಬಳ್ಳಾರಿಯ ಆರೋಪಿ ಖರೀದಿಸಿ, ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande