ಬಾಗಲಕೋಟೆ, 27 ಮಾರ್ಚ್ (ಹಿ.ಸ.) :
ಆ್ಯಂಕರ್ : ವರದಕ್ಷಿಣೆ ಕಿರುಕುಳ ಹಾಗೂ ಗಂಡನ ಚಿತ್ರಹಿಂಸೆಗೆ ಬೇಸತ್ತು ಮಹಿಳೆ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದಲ್ಲಿ ನಡೆದಿದೆ.
24 ವರ್ಷದ ವಾತ್ಸಲ್ಯ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಕುಷ್ಟಗಿ ಮೂಲದ ವಾತ್ಸಲ್ಯಾಳನ್ನು ಬಾದಾಮಿ ತಾಲೂಕಿನ ಪ್ರವೀಣ ಗಂಗಾಲ್ ಎಂಬಾತನೊಂದಿಗೆ 11 ತಿಂಗಳು ಹಿಂದಷ್ಟೇ ಮದುವೆ ಮಾಡಿಕೊಡಲಾಗಿತ್ತು.
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ, ನಿತ್ಯ ಕುಡಿದು ಬಂದು ವರದಕ್ಷಿಣೆ ತರುವಂತೆ ಹೊಡೆದು ಆಕೆಗೆ ಸಿಗರೇಟ್‌ನಿಂದ ಸುಡುವ ಮೂಲಕ ಚಿತ್ರಹಿಂಸೆ ನೀಡುತ್ತಿದ್ದನಂತೆ. ಈ ಬಗ್ಗೆ ಆತನ ಸ್ನೇಹಿತರು ಹಾಗೂ ಹಿರಿಯರು ಬುದ್ಧಿ ಹೇಳಿದರೂ ಕೇಳದ ಪ್ರವೀಣ ತನ್ನ ಪತ್ನಿಯ ಮೇಲೆ ಹೇಯ ಕೃತ್ಯ ನಡೆಸುತ್ತಲೇ ಇದ್ದ.
ಮೃತ ವಾತ್ಸಲ್ಯಳ ಸಹೋದರಿ ಛಾಯಾ ಬಾದಾಮಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರವೀಣ್, ಆತನ ತಾಯಿ ಹಾಗೂ ಸಹೋದರಿಯನ್ನು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande